2ನೇ ವಿಶ್ವಯುದ್ಧದ ಸಂದರ್ಭದಲ್ಲಿ ಹಿಟ್ಲರ್ ಬಳಿಸಿದ್ದ "ಟೆಲಿಫೋನ್" ಹರಾಜು

2ನೇ ವಿಶ್ವಯುದ್ಧದ ಸಂದರ್ಭದಲ್ಲಿ ಸರ್ವಾಧಿಕಾರಿ ಹಿಟ್ಲರ್ ತನ್ನ ವಿಧ್ವಂಸಕ ಆದೇಶಗಳನ್ನು ನೀಡಿದ್ದ ವೈಯುಕ್ತಿಕ ದೂರವಾಣಿಯನ್ನು ಶನಿವಾರ ಅಮೆರಿಕದ ಅಧಿಕಾರಿಗಳು ಹರಾಜು ಹಾಕುತ್ತಿದ್ದಾರೆ.
ಹಿಟ್ಲರ್ ಟೆಲಿಫೋನ್
ಹಿಟ್ಲರ್ ಟೆಲಿಫೋನ್

ವಾಷಿಂಗ್ಟನ್: 2ನೇ ವಿಶ್ವಯುದ್ಧದ ಸಂದರ್ಭದಲ್ಲಿ ಸರ್ವಾಧಿಕಾರಿ ಹಿಟ್ಲರ್ ತನ್ನ ವಿಧ್ವಂಸಕ ಆದೇಶಗಳನ್ನು ನೀಡಿದ್ದ ವೈಯುಕ್ತಿಕ ದೂರವಾಣಿಯನ್ನು ಶನಿವಾರ ಅಮೆರಿಕದ ಅಧಿಕಾರಿಗಳು ಹರಾಜು ಹಾಕುತ್ತಿದ್ದಾರೆ.

1945ರಲ್ಲಿ ಹಿಟ್ಲರ್ ಪತನದ ಸಂದರ್ಭದಲ್ಲಿ ಆತ ಅವಿತಿದ್ದ ಬಂಕರ್ ನಿಂದ ಭದ್ರತಾ ಪಡೆಗಳು ಈ ದೂರವಾಣಿಯನ್ನು ವಶಪಡಿಸಿಕೊಂಡಿದ್ದವು. ಬಳಿಕ ಸುಮಾರು ವರ್ಷಗಳ ಇದನ್ನು ಭದ್ರತಾ ಪಡೆಗಳ ವಶದಲ್ಲಿಡಲಾಗಿತ್ತಾದರೂ  ಬಳಿಕ ಅದನ್ನು ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಮೂಲತಃ ಕಪ್ಪುಬಣ್ಣದ ಟೆಲಿಫೋನ್ ಗೆ ಅಧಿಕಾರಿಗಳು ಹಿಟ್ಲರ್ ನ ರಕ್ತಪಿಪಾಸು ತನವನ್ನು ಸಾಂಕೇತಿಸುವ ಹಾಗೆ ಕೆಂಪುಬಣ್ಣವನ್ನು ಬಳಿದಿದ್ದರು. ಅಲ್ಲದೆ ಅದರ ಮೇಲೆ  ಹಿಟ್ಲರ್ ನ ಹೆಸರನ್ನೂ ಕೂಡ ಬರೆಯಲಾಗಿತ್ತು.

ಇದೀಗ ಈ ದೂರವಾಣಿಯನ್ನು ಆಮೆರಿಕದ ಐತಿಹಾಸಿಕ ವಸ್ತುಗಳ ಹರಾಜು ಸಂಸ್ಥೆ ಈ ಐತಿಹಾಸಿಕ ಟೆಲಿಫೋನ್ ಅನ್ನು ಹರಾಜು ಹಾಕುತ್ತಿದ್ದು, ಈ ಟೆಲಿಫೋನ್ ಸುಮಾರು 2 ಲಕ್ಷ ಡಾಲರ್ ನಿಂದ 3 ಲಕ್ಷ ಡಾಲರ್ ಗಳಿಗೆ ಹರಾಜಾಗುವ  ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ರಷ್ಯಾ ಬಳಿ ಇದ್ದ ದೂರವಾಣಿ ಇಂಗ್ಲೆಂಡ್ ಗೆ ಉಡುಗೊರೆಯಾಗಿ ಬಂದಿತ್ತು

ಇನ್ನು ಹಿಟ್ಲರ್ ಪತನದ ನಂತರ ರಷ್ಯಾ ಸೇನೆ ಬಳಿ ಇದ್ದ ದೂರವಾಣಿಯನ್ನು  ಬ್ರಿಟೀಷ್ ಬ್ರಿಗೇಡಿಯರ್ ಸರ್ ರಾಲ್ಫ್ ರೇನರ್ ಬಂಕರ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಷ್ಯಾ ಮಿಲಿಟರಿ ಅಧಿಕಾರಿಯೊಬ್ಬರು ಅವರಿಗೆ  ಉಡುಗೊರೆಯಾಗಿ ಇದನ್ನು ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com