'ಹಿಂದೂ ವಿವಾದ ಕಾಯ್ದೆ'ಗೆ ಪಾಕಿಸ್ತಾನ ಸೆನೆಟ್ ಗ್ರೀನ್ ಸಿಗ್ನಲ್

ಸಾಕಷ್ಟು ವಿರೋಧ ಹಾಗೂ ಟೀಕೆಗಳ ನಡುವೆಯೂ ಕೊನೆಗೂ ಹಿಂದೂ ವಿವಾಹ ಮಸೂದೆ ಕರಡಿಗೆ ಪಾಕಿಸ್ತಾನ ಸಂಸತ್ ಮೇಲ್ಮನೆ ಸೆನೆಟ್ ಶನಿವಾರ ಗ್ರೀನ್ ಸಿಗ್ನಲ್ ನೀಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇಸ್ಲಾಮಾಬಾದ್: ಸಾಕಷ್ಟು ವಿರೋಧ ಹಾಗೂ ಟೀಕೆಗಳ ನಡುವೆಯೂ ಕೊನೆಗೂ ಹಿಂದೂ ವಿವಾಹ ಮಸೂದೆ ಕರಡಿಗೆ ಪಾಕಿಸ್ತಾನ ಸಂಸತ್ ಮೇಲ್ಮನೆ ಸೆನೆಟ್ ಶನಿವಾರ ಗ್ರೀನ್ ಸಿಗ್ನಲ್ ನೀಡಿದೆ.

ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳಿಗೆ ಕೌಟುಂಬಿಕ ಕಾನೂನಿನ ಅವಕಾಶ ನೀಡುವ ಸಲುವಾಗಿ ಪಾಕಿಸ್ತಾನ ಮೇಲ್ಮನೆ ಸೆನೆಟ್ ಹಿಂದೂ ವಿವಾಹ ಮಸೂದೆಯ ಕರಡಿಗೆ ಒಪ್ಪಿಗೆ ಸೂಚಿಸಿದೆ.

ಪಾಕಿಸ್ತಾನದಲ್ಲಿರುವ ಹಿಂದೂಗಳಿಗೆ ಇದೊಂದು ಮಹತ್ವದ ಮಸೂದೆಯಾಗಿದ್ದು. ಇನ್ನುಮುಂದೆ ಪಾಕಿಸ್ತಾನದಲ್ಲಿರುವ ಹಿಂದೂಗಳು ತಮ್ಮ ವಿವಾಹ ನೋಂದಣಿಗೆ ಮತ್ತು ವಿಚ್ಛೇದನ ಪ್ರಕರಣಗಳನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಲು ಸಹಾಯಕವಾಗಲಿದೆ.

2015ರ ಸೆಪ್ಟೆಂಬರ್ 26 ರಂದು ಹಿಂದೂ ವಿವಾಹ ಕಾಯ್ದೆ ಕರಡಿಗೆ ನ್ಯಾಷನಲ್ ಅಸೆಂಬ್ಲಿ ಅನುಮೋದನೆ ನೀಡಿತ್ತು. ಸಂಸದ ನಸ್ರೀನ್ ಜಲೀಲ್ ನೇತೃತ್ವದ ಸೆನೆಟ್ ಮಾನವ ಹಕ್ಕುಗಳ ಕಾರ್ಯಕಾರಿ ಸಮಿತಿಯು ಮಸೂದೆಗೆ ಈ ಹಿಂದೆ ಅವಿರೋಧವಾಗಿ ಅನುಮೋದನೆ ನೀಡಿತ್ತು. ಸಂಸತ್ ಮೇಲ್ಮನೆ ಸೆನೆಟ್ ಅಂಗೀಕಾರ ದೊರೆತ ಬಳಿಕ 'ಹಿಂದೂ ವಿವಾಹ ಮಸೂದೆ 2016' ಕಾಯ್ದೆ ರೂಪ ಪಡೆದುಕೊಳ್ಳಲಿದೆ ಎಂದು ಹೇಳಲಾಗುತ್ತಿತ್ತು. ಇದೀಗ ಸಂಸತ್ ಮೇಲ್ಮನೆ ಸೆನೆಟ್ ಕೂಡ ಕಾಯ್ದೆಗೆ ಗ್ರೀನ್ ಸಿಗ್ನಲ್ ನೀಡಿದೆ. ಮಸೂದೆಗೆ ಪಾಕಿಸ್ತಾನ ರಾಷ್ಟ್ರಗಳು ಇನ್ನು ಕೆಲವೇ ದಿನಗಳಲ್ಲಿ ಒಪ್ಪಿಗೆ ಸೂಚಿಸಲಿದ್ದು, ಮುಂದಿನ ವಾರದಿಂದ ಪಾಕಿಸ್ತಾನದಲ್ಲಿ ವಿವಾಹವಾಗುವ ಹಿಂದೂಗಳ ವಿವಾಹ ಕಾನೂನುಬದ್ಧವಾಗಲಿದೆ.

ಈಗಾಗಲೇ ಸಿಂಧು ಪ್ರಾಂತ್ಯದ ಹಿಂದೂಗಳು ತಮ್ಮದೇ ಆದ ಪ್ರತ್ಯೇಕ ಮದುವೆ ಕಾಯ್ದೆಯನ್ನು ಹೊಂದಿದ್ದು, ಇದೀಗ ಈ ಹಿಂದೂ ವಿವಾಹ ಕಾಯ್ದೆ 2017 ಜಾರಿಯಾದರೆ ಪಂಜಾಬ್, ಬಲೂಚಿಸ್ತಾನ ಹಾಗೂ ಕ್ಯಾಬೆರ್ ಪಖ್ತುನಖ್ವಾ ಪ್ರಾಂತ್ಯಗಳಲ್ಲಿ ನೆಲೆಸಿರುವ ಪಾಕಿಸ್ತಾನ ಹಿಂದೂಗಳೂ ಪ್ರತ್ಯೇಕ ವಿವಾಹ ಕಾಯ್ದೆಯನ್ನು ಹೊಂದಿದಂತಾಗುತ್ತದೆ.
ಅನುಮೋದನೆ ಪಡೆದುಕೊಂಡಿರುವ ಈ ಕಾಯ್ದೆಯು ದಂಪತಿಗಳು ಪರಸ್ಪರ ಪ್ರತ್ಯೇಕಗೊಂಡಾಗ ಮರುಮದುವೆಯಾಗಲು ಈ ಕಾಯ್ದೆ ಅನುಮತಿ ನೀಡಲಿದೆ. ಪತಿ ಮರಣದ 6 ತಿಂಗಳ ಬಳಿಕ ಸ್ವ ಇಚ್ಛೆಯಿಂದ ಮಹಿಳೆಯರು ಮತ್ತೊಂದು ಮದುವೆಯಾಗಲು ಈ ಮಸೂದೆ ಅವಕಾಶ ನೀಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com