ಜರ್ಮನಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ನ ಫೋನ್ 243,000 ಡಾಲರ್ ಗೆ ಹರಾಜು!

2ನೇ ವಿಶ್ವಯುದ್ಧದ ಸಂದರ್ಭದಲ್ಲಿ ಸರ್ವಾಧಿಕಾರಿ ಹಿಟ್ಲರ್ ತನ್ನ ವಿಧ್ವಂಸಕ ಆದೇಶಗಳನ್ನು ನೀಡಿದ್ದ ವೈಯುಕ್ತಿಕ ದೂರವಾಣಿಯನ್ನು 243,000 ಡಾಲರ್ ಗೆ ಹರಾಜು ಮಾಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: 2ನೇ ವಿಶ್ವಯುದ್ಧದ ಸಂದರ್ಭದಲ್ಲಿ ಸರ್ವಾಧಿಕಾರಿ ಹಿಟ್ಲರ್ ತನ್ನ ವಿಧ್ವಂಸಕ ಆದೇಶಗಳನ್ನು ನೀಡಿದ್ದ ವೈಯುಕ್ತಿಕ ದೂರವಾಣಿಯನ್ನು 243,000 ಡಾಲರ್ ಗೆ ಹರಾಜು ಮಾಡಲಾಗಿದೆ.

1945ರಲ್ಲಿ ಹಿಟ್ಲರ್ ಪತನದ ಸಂದರ್ಭದಲ್ಲಿ ಆತ ಅವಿತಿದ್ದ ಬಂಕರ್ ನಿಂದ ಭದ್ರತಾ ಪಡೆಗಳು ಈ ದೂರವಾಣಿಯನ್ನು ವಶಪಡಿಸಿಕೊಂಡಿದ್ದವು. ಬಳಿಕ ಸುಮಾರು ವರ್ಷಗಳ ಇದನ್ನು ಭದ್ರತಾ ಪಡೆಗಳ ವಶದಲ್ಲಿಡಲಾಗಿತ್ತಾದರೂ  ಬಳಿಕ ಅದನ್ನು ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಮೂಲತಃ ಕಪ್ಪುಬಣ್ಣದ ಟೆಲಿಫೋನ್ ಗೆ ಅಧಿಕಾರಿಗಳು ಹಿಟ್ಲರ್ ನ ರಕ್ತಪಿಪಾಸು ತನವನ್ನು ಸಾಂಕೇತಿಸುವ ಹಾಗೆ ಕೆಂಪುಬಣ್ಣವನ್ನು ಬಳಿದಿದ್ದರು. ಅಲ್ಲದೆ ಅದರ ಮೇಲೆ  ಹಿಟ್ಲರ್ ನ ಹೆಸರನ್ನೂ ಕೂಡ ಬರೆಯಲಾಗಿತ್ತು.  ಇದೀಗ ಆಮೆರಿಕದ ಐತಿಹಾಸಿಕ ವಸ್ತುಗಳ ಹರಾಜು ಸಂಸ್ಥೆ ಈ ಐತಿಹಾಸಿಕ ಟೆಲಿಫೋನ್ ಅನ್ನು ಹರಾಜು ಹಾಕಿದ್ದು, ಈ ಟೆಲಿಫೋನ್ ಅನ್ನು ಅನಾಮಧೇಯ ವ್ಯಕ್ತಿಯೊಬ್ಬರು 243,000  ಡಾಲರ್ ನೀಡಿ ಖರೀದಿ ಮಾಡಿದ್ದಾರೆ.

ಜರ್ಮನಿಯ ಸೀಮನ್ಸ್ ಕಂಪೆನಿ ತಯಾರಿಸಿದ್ದ ಈ ಫೋನ್‌ನ್ನು ಹಿಟ್ಲರ್ ಜರ್ಮನಿಯ ನಾಜಿ ಶಸ್ತ್ರಾಸ್ತ್ರ ಪಡೆಗಳಿಂದ ಸ್ವೀಕರಿಸಲಾಗಿತ್ತು. 2ನೇ ವಿಶ್ವ ಯುದ್ಧದ ಬಳಿಕ ನಾಜಿ ಆಳ್ವಿಕೆಯ ಪತನದ ನಂತರ 1945ರಿಂದ ಒಂದು ಬ್ರೀಫ್‌  ಕೇಸ್‌ನಲ್ಲಿ ಇರಿಸಲಾಗಿದ್ದ ಈ ಫೋನ್‌ ಅನ್ನು ಬರ್ಲಿನ್‌ನಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ವಿವಿಧ ಶಸ್ತ್ರಾಸ್ತ್ರಗಳ ಹರಾಜಿನಲ್ಲಿ ಇದನ್ನು ಕೂಡ ಇರಿಸಲಾಗಿತ್ತು

ರಷ್ಯಾ ಬಳಿ ಇದ್ದ ದೂರವಾಣಿ ಇಂಗ್ಲೆಂಡ್ ಗೆ ಉಡುಗೊರೆಯಾಗಿ ಬಂದಿತ್ತು
ಇನ್ನು ಹಿಟ್ಲರ್ ಪತನದ ನಂತರ ರಷ್ಯಾ ಸೇನೆ ಬಳಿ ಇದ್ದ ದೂರವಾಣಿಯನ್ನು  ಬ್ರಿಟೀಷ್ ಬ್ರಿಗೇಡಿಯರ್ ಸರ್ ರಾಲ್ಫ್ ರೇನರ್ ಬಂಕರ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಷ್ಯಾ ಮಿಲಿಟರಿ ಅಧಿಕಾರಿಯೊಬ್ಬರು ಅವರಿಗೆ  ಉಡುಗೊರೆಯಾಗಿ ಇದನ್ನು ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com