ಅಮೆರಿಕಾ ಪ್ರಜೆಯಾಗಲು ಈ ತರಹದ ಪ್ರಶ್ನೆಗಳಿಗೆ ಉತ್ತರಿಸಬೇಕು!

ಅಮೆರಿಕಾ ದೇಶದ ಪ್ರಜೆಯಾಗಲು ಬೇರೆ ದೇಶದ ವಲಸಿಗರು ಅನೇಕ ಅಗತ್ಯಗಳನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ಅಮೆರಿಕಾ ದೇಶದ ಪ್ರಜೆಯಾಗಲು ಬೇರೆ ದೇಶದ ವಲಸಿಗರು ಅನೇಕ ಅಗತ್ಯಗಳನ್ನು ಪೂರೈಸಬೇಕು. ಅಲ್ಲದೆ 10 ಪ್ರಶ್ನೆಗಳಿಗೆ ಸಹ ಉತ್ತರಿಸಬೇಕು.
ಇಲ್ಲಿವೆ ಕೆಲವು ಉದಾಹರಣೆ ಪ್ರಶ್ನೆಗಳು: 
1. ಸಂವಿಧಾನದ ಮೊದಲ 10 ತಿದ್ದುಪಡಿಗಳಿಗೆ ಏನೆಂದು ಕರೆಯುತ್ತೇವೆ? 
ಉತ್ತರ- ಹಕ್ಕುಗಳ ಮಸೂದೆ.
2. ಸಂವಿಧಾನದಲ್ಲಿ ಎಷ್ಟು ತಿದ್ದುಪಡಿಗಳಿವೆ?
- 27.
3. ಅಮೆರಿಕಾದ ಈಗಿನ ಅಧ್ಯಕ್ಷರು ಯಾರು?
-ಡೊನಾಲ್ಡ್ ಟ್ರಂಪ್
4.ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸೇವೆಯಲ್ಲಿಲ್ಲದಿದ್ದರೆ ಯಾರು ಅಧ್ಯಕ್ಷರಾಗುತ್ತಾರೆ
-ಸದನದ ಸ್ಪೀಕರ್.
5. ಸುಪ್ರೀಂ ಕೋರ್ಟ್ ನಲ್ಲಿ ಎಷ್ಟು ಜನ ನ್ಯಾಯಾಧೀಶರು ಸೇವೆ ಸಲ್ಲಿಸುತ್ತಾರೆ?
- 9.
6. ಸಂವಿಧಾನದಡಿಯಲ್ಲಿ ಫೆಡರಲ್ ಸರ್ಕಾರದ ಅಧಿಕಾರವೇನು?
- ನೋಟುಗಳನ್ನು ಮುದ್ರಿಸುವುದು, ಯುದ್ಧ ಘೋಷಣೆ, ಸೇನೆಯ ರಚನೆ, ಒಪ್ಪಂದಗಳನ್ನು ಮಾಡುವುದು.
7. ಸಂವಿಧಾನವನ್ನು ಯಾವಾಗ ಬರೆಯಲಾಯಿತು?
- 1787.
8. ಮೊದಲ ಅಧ್ಯಕ್ಷರು ಯಾರು?
- ಜಾರ್ಜ್ ವಾಷಿಂಗ್ಟನ್
9. ಅಮೆರಿಕದ ಅತಿದೊಡ್ಡ ನದಿಯನ್ನು ಹೆಸರಿಸಿ.
-ಮಿಸ್ಸಿಸ್ಸಿಪ್ಪಿ ಅಥವಾ ಮಿಸ್ಸೌರಿ.
10. ವಿಶ್ವಯುದ್ಧ 2ರಲ್ಲಿ ಅಮೆರಿಕಾ ವಿರುದ್ಧ ಹೋರಾಡಿದ ದೇಶಗಳಾವುವು?
- ಜರ್ಮನಿ, ಜಪಾನ್ ಮತ್ತು ಇಟೆಲಿ.   

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com