ಫಿಲಿಫೈನ್ಸ್ ಜೈಲಿನಲ್ಲಿ ಘರ್ಷಣೆ; 150ಕ್ಕೂ ಅಧಿಕ ಕೈದಿಗಳ ಪರಾರಿ!

ದಕ್ಷಿಣ ಫಿಲಿಫೈನ್ಸ್ ನಲ್ಲಿರುವ ಕಾರಾಗೃಹದಲ್ಲಿ ಭಾರಿ ಘರ್ಷಣೆ ಸಂಭವಿಸಿದ್ದು, ಈ ವೇಳೆ ಸುಮಾರು 150ಕ್ಕೂ ಅಧಿಕ ಮಂದಿ ಕೈದಿಗಳು ಪರಾರಿಯಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮನಿಲಾ: ದಕ್ಷಿಣ ಫಿಲಿಫೈನ್ಸ್ ನಲ್ಲಿರುವ ಕಾರಾಗೃಹದಲ್ಲಿ ಭಾರಿ ಘರ್ಷಣೆ ಸಂಭವಿಸಿದ್ದು, ಈ ವೇಳೆ ಸುಮಾರು 150ಕ್ಕೂ ಅಧಿಕ ಮಂದಿ ಕೈದಿಗಳು ಪರಾರಿಯಾಗಿದ್ದಾರೆ.

ಮುಸ್ಲಿಂ ಮೂಲಭೂತವಾದಿಗಳ ತಂಡವೊಂದು ಫಿಲಿಫೈನ್ಸ್ ನ ಕಿಡಪವನ್ ಜೈಲಿನ ಮೇಲೆ ಬುಧವಾರ ಬೆಳಗಿನ ಜಾವ ಸುಮಾರು 1 ಗಂಟೆ ಸುಮಾರಿನಲ್ಲಿ ದಾಳಿ ಮಾಡಿದ್ದು, ಈ ವೇಳೆ ಓರ್ವ ಜೈಲು ಸಿಬ್ಬಂದಿಯನ್ನು ಕೊಂದು  ಹಾಕಿದ್ದಾರೆ ಎಂದು ತಿಳಿದುಬಂದಿದೆ. ಜೈಲು ಸಿಬ್ಬಂದಿಗಳು ಶಂಕೆ ವ್ಯಕ್ತಪಡಿಸಿರುವಂತೆ ದಾಳಿ ನಡೆಸಿದ ಮೂಲಭೂತವಾದಿಗಳೆಲ್ಲರೂ ಈ ಹಿಂದೆ ವಿವಿಧ ಮುಸ್ಲಿಂ ಸಂಘಟನೆಗಳಲ್ಲಿ ಗುರುತಿಸಿಕೊಂಡು, ಈಗ ಇಸ್ಲಾಮಿಕ್ ಸ್ಟೇಟ್  ಉಗ್ರಗಾಮಿ ಸಂಘಟನೆ ಸೇರಿರಬಹುದು ಎಂದು ಹೇಳಿದ್ದಾರೆ.

ಭಾರಿ ಶಸ್ತ್ರಾಸ್ತ್ರಗಳೊಡನೆ ಪೂರ್ವ ಸಿದ್ಧತೆಯೊಂದಿಗೆ ಆಗಮಿಸಿದ್ದ ದುಷ್ಕರ್ಮಿಗಳು ಜೈಲು ಸಿಬ್ಬಂದಿಗಳು ಪ್ರತಿ ದಾಳಿ ನಡೆಸುವ ಅವಕಾಶನ್ನೂ ನೀಡದೇ ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿ ಅಲ್ಲಿದ್ದ ಕೈದಿಗಳು  ಪರಾರಿಯಾಗುವಂತೆ ಮಾಡಿದ್ದಾರೆ. ಈ ವೇಳೆ ಸುಮಾರು 150ಕ್ಕೂ ಹೆಚ್ಚು ಕೈದಿಗಳು ಪರಾರಿಯಾಗಿದ್ದು, ಪರಾರಿಯಾದವರೆಲ್ಲರೂ ಈ ಹಿಂದೆ ಬಂಧಿತರಾಗಿದ್ದ ವಿವಿಧ ಸಂಘಟನೆಗಳ ಉಗ್ರರು ಎಂದು ತಿಳಿದುಬಂದಿದೆ. ಅಂತೆಯೇ  ದಾಳಿಗೆ ಫಿಲಿಫೈನ್ಸ್ ನ ಪ್ರಮುಖ ಪ್ರತ್ಯೇಕತಾವಾದಿ ಸಂಘಟನೆ ಮೊರೊ ಮುಸ್ಲಿಂ ಫೆಡರೇಷನ್ ಫ್ರಂಟ್ ನೇತೃತ್ವ ವಹಿಸಿರುವ ಸಾಧ್ಯತೆ ಇದೆ ಎಂದೂ ಅಧಿಕಾರಿಗಳು ಶಂಕಿಸಿದ್ದಾರೆ.

ಇನ್ನು ಭಾರಿ ಪ್ರಮಾಣದಲ್ಲಿ ಕೈದಿಗಳು ಪರಾರಿಯಾಗಿರುವುದರಿಂದ ಫಿಲಿಫೈನ್ಸ್ ನಾದ್ಯಂತ  ಹೈಅಲರ್ಟ್ ಘೋಷಣೆ ಮಾಡಲಾಗಿದ್ದು, ಪರಾರಿಯಾಗ ಕೈದಿಗಳ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com