ಹೊಟ್ಟೆಯಲ್ಲಿದ್ದ ಕತ್ತರಿಯನ್ನು 18 ವರ್ಷದ ನಂತರ ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆ ವೈದ್ಯರು

ವ್ಯಕ್ತಿಯೊಬ್ಬನ ಹೊಟ್ಟಿಯಲ್ಲಿ ಕಳೆದ 18 ವರ್ಷಗಳಿಂದ ಇದ್ದ ಕತ್ತರಿಯನ್ನು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ...
18 ವರ್ಷ ವ್ಯಕ್ತಿಯ ಹೊಟ್ಟೆಯಲ್ಲಿದ್ದ ಕತ್ತರಿ
18 ವರ್ಷ ವ್ಯಕ್ತಿಯ ಹೊಟ್ಟೆಯಲ್ಲಿದ್ದ ಕತ್ತರಿ

ಹನೋಯ್ : ವ್ಯಕ್ತಿಯೊಬ್ಬನ ಹೊಟ್ಟಿಯಲ್ಲಿ ಕಳೆದ 18 ವರ್ಷಗಳಿಂದ ಇದ್ದ ಕತ್ತರಿಯನ್ನು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದಾರೆ.

54 ವರ್ಷದ ಮಾ ವಾನ್ ಹತ್  ಎಂಬಾತ 1998 ರಲ್ಲಿ ಅಪಘಾತಕ್ಕೊಳಗಾಗಿದ್ದ. ನಂತರ ಶಸ್ತ್ರಕ್ರಿಯೆಗೆ ಒಳಗಾಗಿದ್ದ. ಈ ವೇಳೆ ವೈದ್ಯರು ತಿಳಿಯದೇ ಕತ್ತರಿಯನ್ನು ಆತನ ಹೊಟ್ಟೆ ಒಳಗೆ ಇಟ್ಟು ಹೊಲಿಗೆ ಹಾಕಿದ್ದರು.

ಇತ್ತೀಚೆಗೆ ಆತನಿಗೆ ಪದೇ ಪದೇ ಹೊಟ್ಟೆ ನೋವು ಕಾಣಸಿಕೊಂಡಿದ್ದರಿಂದ ವೈದ್ಯರು ಆತನ ಹೊಟ್ಟೆಯನ್ನು ಸ್ಕ್ಯಾನ್ ಮಾಡಿದ್ದರು. ಈ ವೇಳೆ 6 ಇಂಚು ಉದ್ದದ ಕತ್ತರಿ ಇರುವುದು ಕಂಡು ಬಂದಿತ್ತು.

ನಂತರ ಮೂರು ತಾಸುಗಳ ಸುದೀರ್ಘ ಶಸ್ತ್ರಚಿಕಿತ್ಸೆ ನಂತರ ಕತ್ತರಿ ಹೊರತೆಗೆದಿದ್ದಾರೆ. ಅದೃಷ್ಟವಷಾತ್ ಆತ ಚೇತರಿಕೆ ಕಾಣುತ್ತಿದ್ದಾನೆ. 18 ವರ್ಷ ಹೊಟ್ಟೆಯಲ್ಲೇ ಇದ್ದ ಕತ್ತರಿಯ ಒಂದು ಭಾಗ ಮಾತ್ರ ಮುರಿದಿದೆ.

18 ವರ್ಷಗಳ ಹಿಂದೆ ಆತನಿಗೆ ಆಪರೇಷನ್ ಮಾಡಿದ್ದ ವೈದ್ಯ ಯಾರು ಎಂಬುದು  ಇನ್ನೂ  ಪತ್ತೆಯಾಗಿಲ್ಲ. ಕತ್ತರಿ ಹೊಟ್ಟೆ ಒಳಗಿದ್ದರು ಆ ವ್ಯಕ್ತಿ ಇತರ ಮನುಷ್ಯರಂತೆ ಸಹಜವಾಗಿಯೇ ಊಟ ತಿನ್ನುವುದು, ನೀರು ಕುಡಿಯುವುದು ಸೇರಿದಂತೆ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com