ಇರಾಕ್ ನಲ್ಲಿ ನಲ್ಲಿ ಆತ್ಮಾಹುತಿ ಕಾರು ಬಾಂಬ್ ಸ್ಫೋಟ: 12 ಮಂದಿ ಸಾವು

ತರಕಾರಿ ಮುಖ್ಯ ಮಾರುಕಟ್ಟೆಯಲ್ಲಿ ಕಾರುಬಾಂಬ್ ಸ್ಪೋಟಿಸಿ ಕನಿಷ್ಠ 12 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಾಗ್ದಾದ್: ತರಕಾರಿ ಮುಖ್ಯ ಮಾರುಕಟ್ಟೆಯಲ್ಲಿ ಕಾರುಬಾಂಬ್ ಸ್ಪೋಟಿಸಿ ಕನಿಷ್ಠ 12 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ.

ಜಾಮಿಲಾದ ಜಿಲ್ಲೆಯ ತರಕಾರಿ ಮಾರುಕಟ್ಟೆಯಲ್ಲಿ  ಕಾರು ನಿಂತಿತ್ತು. ಈ ವೇಳೆ ಯೋಧನೊಬ್ಬ ಕಾರಿನಲ್ಲಿದ್ದ ಉಗ್ರನ ವಿರುದ್ಧ ಗುಂಡಿನ ದಾಳಿ ನಡೆಸಲು ತೆರಳಿದಾಗ ಉಗ್ರ, ಕಾರನ್ನು ಸ್ಫೋಟಿಸಿದ್ದಾನೆ. ಇದರಿಂದ 12 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 35 ಕ್ಕೂ ಹೆಚ್ಚು ಮಂದಿ ಸ್ಫೋಟದಲ್ಲಿ ಗಾಯಗೊಂಡಿದ್ದಾರೆ.

ಜನವರಿ 2 ರಂದು ನಡೆದಿದ್ದ ಭಾರಿ ದಾಳಿಯ ಹೊಣೆಯನ್ನು ಐಎಸ್ ಹೊತ್ತುಕೊಂಡಿತ್ತು. ಬಾಗ್ದಾದ್ ತರಕಾರಿ ಮಾರುಕಟ್ಟೆ ಸ್ಫೋಟದ ಹೊಣೆಯನ್ನು ಇದುವರೆಗೆ ಯಾವುದೇ ಸಂಘಟನೆಗಳು ಹೊತ್ತುಕೊಂಡಿಲ್ಲ,  ರಾಜಧಾನಿ ಬಾಗ್ದಾದ್ ಅನ್ನು ಟಾರ್ಗೆಟ್ ಮಾಡಿರುವ ಉಗ್ರರು ಪದೇ ಪದೇ ಇಂಥ ದಾಳಿಗಳನ್ನು ನಡೆಸುತ್ತಿದ್ದಾರೆ ಎಂದು ಇರಾಕ್ ಆಂತರಿಕ ಸಚಿವ ಸಾದ್ ಮಾನ್ ಹೇಳಿದ್ದಾರೆ.

ಜನವರಿ 2 ರಂದು ನಡೆದ ಕಾರು ಬಾಂಬ್ ಸ್ಫೋಟದಲ್ಲಿ ಕೆಲಸಕ್ಕಾಗಿ ಕಾಯುತ್ತಿದ್ದ ಸುಮಾರು 35 ಕಾರ್ಮಿಕರು ಸಾವನ್ನಪ್ಪಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com