ರಷ್ಯನ್ ಹ್ಯಾಕರ್ ಗಳ ಬಳಿ ನಿಮ್ಮ ಕುರಿತು ಸೂಕ್ಷ್ಮ ಮಾಹಿತಿ: ಟ್ರಂಪ್ ಗೆ ಎಚ್ಚರಿಕೆ

ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುರಿತ ಸೂಕ್ಷ್ಮ ಮಾಹಿತಿ ರಷ್ಯನ್ ಹ್ಯಾಕರ್ ಗಳ ಬಳಿ ಇದೆ ಎಂದು ಅಮೆರಿಕದ ಗುಪ್ತಚರ ಇಲಾಖೆಗಳು ಹೇಳಿವೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
ವಾಷಿಂಗ್ ಟನ್: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುರಿತ ಸೂಕ್ಷ್ಮ ಮಾಹಿತಿ ರಷ್ಯನ್ ಹ್ಯಾಕರ್ ಗಳ ಬಳಿ ಇದೆ ಎಂದು ಅಮೆರಿಕದ ಗುಪ್ತಚರ ಇಲಾಖೆಗಳು ಹೇಳಿವೆ. 
ಈ ಕುರಿತ ಮಾಹಿತಿಯನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಡೊನಾಲ್ಡ್ ಟ್ರಂಪ್ ಇಬ್ಬರಿಗೂ ಅಮೆರಿಕ ಗುಪ್ತಚರ ಇಲಾಖೆ ನೀಡಿದ್ದು, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಮಾಡಿದ್ದಕ್ಕೆ ಸಂಬಂಧಿಸಿದ 2 ಪುಟಗಳ ವರದಿಯಲ್ಲಿ ಈ ಅಂಶವನ್ನೂ ಸೇರಿಸಲಾಗಿದೆ. 
ಅಮೆರಿಕ ಗುಪ್ತಚರ ಇಲಾಖೆಗಳು ನೀಡಿರುವ ವರದಿಗೆ ಇನ್ನಷ್ಟೇ ಹೆಚ್ಚಿನ ಆಧಾರಗಳು ಸಿಗಬೇಕಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡೊನಾಲ್ಡ್ ಟ್ರಂಪ್ ಇದನ್ನು ಸುಳ್ ಸುದ್ದಿ ಹಾಗೂ ರಾಜಕೀಯ ಷಡ್ಯಂತ್ರ ಎಂದು ಹೇಳಿದ್ದಾರೆ. ಟ್ರಂಪ್ ಅಧಿಕಾರ ಪರಿವರ್ತನಾ ತಂಡ ಗುಪ್ತಚರ ಇಲಾಖೆಯ ವರದಿ ಬಗ್ಗೆ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಆದರೆ ಈ ಬಗ್ಗೆ ಅಧಿಕಾರಿಯೊಬ್ಬರು ಮಾತನಾಡಿದ್ದು, ಫೆಡರಲ್ ಬ್ಯೂರೋ ತನಿಖಾ ತಂಡ ಡೊನಾಲ್ಡ್ ಟ್ರಂಪ್ ಕುರಿತ ಸೂಕ್ಷ್ಮ ಮಾಹಿತಿ ರಷ್ಯನ್ ಹ್ಯಾಕರ್ ಗಳ ಬಳಿ ಎಂಬುದಕ್ಕೆ ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಪಡೆಯಲು ತನಿಖೆ ನಡೆಸುತ್ತಿದ್ದಾರೆ ಎಂದಿದ್ದಾರೆ. ರಷ್ಯಾದ ಉದ್ಯಮಿಗಳೊಂದಿಗಿನ ಡೊನಾಲ್ಡ್ ಟ್ರಂಪ್ ನಡುವಿನ ಸಂಬಂಧಗಳ ಬಗ್ಗೆ ಈ ವರೆಗೂ ಪ್ರಮುಖ ಮಾಹಿತಿ ಸಿಕ್ಕಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಆದರೆ ಅಧಿಕಾರಿಯ ಹೇಳಿಕೆಯನ್ನು ಎಫ್ ಬಿಐ ನಿರಾಕರಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com