ಇರಾನ್ ಪರಮಾಣು ಒಪ್ಪಂದ ರದ್ದತಿ ವಿರುದ್ಧ ಹೊಸ ಆಡಳಿತಕ್ಕೆ ಕೆರ್ರಿ ಎಚ್ಚರಿಕೆ

ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕದ ಹೊಸ ಆಡಳಿತ ಇರಾನ್ ಪರಮಾಣು ಒಪ್ಪಂದ ರದ್ದುಗೊಳಿಸಬಾರದು ಎಂದು ಅಮೆರಿಕ ವಿದೇಶಾಂಗ ಸಚಿವ ಜಾನ್ ಕೆರ್ರಿ ಎಚ್ಚರಿಕೆ ನೀಡಿದ್ದಾರೆ.
ಜಾನ್ ಕೆರ್ರಿ
ಜಾನ್ ಕೆರ್ರಿ
ವಾಷಿಂಗ್ ಟನ್: ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕದ ಹೊಸ ಆಡಳಿತ ಇರಾನ್ ಪರಮಾಣು ಒಪ್ಪಂದ ರದ್ದುಗೊಳಿಸಬಾರದು ಎಂದು ಅಮೆರಿಕ ವಿದೇಶಾಂಗ ಸಚಿವ ಜಾನ್ ಕೆರ್ರಿ ಎಚ್ಚರಿಕೆ ನೀಡಿದ್ದಾರೆ. 
ಒಂದು ವೇಳೆ ಅಮೆರಿಕದ ಹೊಸ ಆಡಳಿತ ಒಪ್ಪಂದವನ್ನು ರದ್ದುಗೊಳಿಸಿದರೆ ಸಂಘರ್ಷ ಉಂಟಾಗಿ ಅಮೆರಿಕದ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗುವುದು ಖಾತ್ರಿ ಎಂದು ಕೆರ್ರಿ ಅಭಿಪ್ರಾಯಪಟ್ಟಿದ್ದಾರೆ. ಯುಎಸ್ ಇನ್ಸ್ಟಿಟ್ಯೂಟ್ ಆಫ್ ಪೀಸ್ ನಲ್ಲಿ ಮಾತನಾಡಿದ ಕೆರ್ರಿ, ಪರಮಾಣು ಒಪ್ಪಂದದ ನಂತರ ಇರಾನ್ ಪರಮಾಣು ಕಾರ್ಯಕ್ರಮಗಳನ್ನು ನಿಲ್ಲಿಸುವ ಪ್ರಯತ್ನವನ್ನು ತಡೆಹಿಡಿಯಲಾಗಿದೆ. ಈಗ ಒಪ್ಪಂದವನ್ನು ರದ್ದುಗೊಳಿಸಿದರೆ ಅಮೆರಿಕದ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗಲಿದ್ದು ಸಂಘರ್ಷ ನಡೆಯಲಿದೆ ಎಂದು ಜಾನ್ ಕೆರ್ರಿ ಜ.20 ರಿಂದ ಪ್ರಾರಂಭವಾಗಲಿರುವ ಹೊಸ ಆಡಳಿತಕ್ಕೆ ಎಚ್ಚರಿಸಿದ್ದಾರೆ. 
ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣಾ ಪ್ರಚಾರದ ವೇಳೆ, ಇರಾನ್ ನೊಂದಿಗಿನ ಪರಮಾಣು ಒಪ್ಪಂದವನ್ನು ವ್ಯಾಪಕವಾಗಿ ಟೀಕಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com