ದಕ್ಷಿಣ ಚೀನಾ ಸಮುದ್ರ ಪ್ರವೇಶ ನಿರ್ಬಂಧಿಸುವುದಕ್ಕೆ ಅಮೆರಿಕ ಯುದ್ಧ ಮಾಡಬೇಕಾದೀತು: ಚೀನಾ ಪತ್ರಿಕೆ

ದಕ್ಷಿಣ ಚೀನಾ ಸಮುದ್ರಕ್ಕೆ ಚೀನಾ ಪ್ರವೇಶವನ್ನು ನಿರ್ವಂಧಿಸಬೇಕೆಂಬಡೊನಾಲ್ಡ್ ಟ್ರಂಪ್ ಸಂಪುಟದ ಸದಸ್ಯ ರೆಕ್ಸ್ ಟಿಲರ್ಸನ್ ಹೇಳಿಕೆಗೆ ಚೀನಾ ಪತ್ರಿಕೆಯೊಂದು ಲೇಖನದ ಮೂಲಕ ಪ್ರತಿಕ್ರಿಯೆ ನೀಡಿದೆ.
ದಕ್ಷಿಣ ಚೀನಾ ಸಮುದ್ರ
ದಕ್ಷಿಣ ಚೀನಾ ಸಮುದ್ರ
ಬೀಜಿಂಗ್: ದಕ್ಷಿಣ ಚೀನಾ ಸಮುದ್ರಕ್ಕೆ ಚೀನಾ ಪ್ರವೇಶವನ್ನು ನಿರ್ವಂಧಿಸಬೇಕೆಂಬಡೊನಾಲ್ಡ್ ಟ್ರಂಪ್ ಸಂಪುಟದ ಸದಸ್ಯ ರೆಕ್ಸ್ ಟಿಲರ್ಸನ್ ಹೇಳಿಕೆಗೆ ಚೀನಾ ಪತ್ರಿಕೆಯೊಂದು ಲೇಖನದ ಮೂಲಕ ಪ್ರತಿಕ್ರಿಯೆ ನೀಡಿದ್ದು, ಪ್ರವೇಶ ನಿರ್ಬಂಧಿಸಬೇಕಾದರೆ ಅಮೆರಿಕ ಯುದ್ಧ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದೆ. 
ಬೃಹತ್ ಅಣ್ವಸ್ತ್ರ ಶಕ್ತಿ ಹೊಂದಿರುವ ರಾಷ್ಟ್ರವೊಂದನ್ನು ತನ್ನ ಪ್ರದೇಶದಿಂದ ಹೊರಹೋಗುವಂತೆ ಮಾಡಬೇಕಾದರೆ ರೆಕ್ಸ್ ಟಿಲರ್ಸನ್ ಅಣುಶಕ್ತಿ ಕಾರ್ಯತಂತ್ರಗಳನ್ನು ಕರಗತ ಮಾಡಿಕೊಳ್ಳಬೇಕು ಎಂದು ಚೀನಾ ಮಾಧ್ಯಮ ಗ್ಲೋಬಲ್ ಟೈಮ್ಸ್ ಸಂಪಾದಕೀಯ ಲೇಖನದಲ್ಲಿ ಹೇಳಿದೆ. ಕೇವಲ ತಮ್ಮ ಚೀನಾ ವಿರುದ್ಧದ ನಿಲುವುಗಳನ್ನು ತೋರಿಸಿಕೊಳ್ಳುವುದಕ್ಕಾಗಿ ಮಾತ್ರ ರೆಕ್ಸ್ ಟಿಲರ್ಸನ್ ಈ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಅಮೆರಿಕ ಅಂತಹ ಕೆಲಸಕ್ಕೆ ಕೈಹಾಕಿದರೆ ಕಾನೂನಾತ್ಮಕ ತೊಡಕುಗಳು ಎದುರಾಗಲಿವೆ ಎಂದು ಚೀನಾ ಹೇಳಿದೆ. 
ಚೀನಾ ಸಮುದ್ರಕ್ಕೆ ಪ್ರವೇಶ ನಿರ್ಬಂಧಿಸುವ ರೆಕ್ಸ್ ಟಿಲರ್ಸನ್ ಅವರ ಹೇಳಿಕೆ ವಿಯೆಟ್ನಾಂ ಹಾಗೂ ಫಿಲಿಪೈನ್ಸ್ ಗೂ ಅನ್ವಯವಾಗಲಿದೆಯೇ ಎಂದು ಚೀನಾ ಪ್ರಶ್ನಿಸಿದ್ದು, ಒಂದು ವೇಳೆ ಚೀನಾಗೆ ಮಾತ್ರ ಪ್ರವೇಶ ನಿರ್ಬಂಧಿಸುವುದಾದರೆ ಅಮೆರಿಕ ಯುದ್ಧ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. 
ಸೆನೆಟ್ ನ ವಿದೇಶಾಂಗ ವ್ಯವಹಾರಗಳ ಸಮಿತಿಯಲ್ಲಿ ಮಾತನಾಡಿದ್ದ ಟ್ರಂಪ್ ಸಚಿವ ಸಂಪುಟದ ಸದಸ್ಯ ರೆಕ್ಸ್ ಟಿಲರ್ಸನ್ ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ನಿರ್ಮಿಸಲಾಗಿರುವ ಕೃತಕ ದ್ವೀಪಗಳಿಗೆ ಚೀನಾ ಪ್ರವೇಶವನ್ನು ನಿರ್ಬಂಧಿಸಬೇಕೆಂದು ಹೇಳಿದ್ದರು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com