ಒಬಾಮ ಅಧ್ಯಕ್ಷೀಯ ಅವಧಿಯ ಕೊನೆ ಘಳಿಗೆಯಲ್ಲಿ ಪ್ಯಾಲೆಸ್ಟೈನ್ ಗೆ 221 ಮಿಲಿಯನ್ ಡಾಲರ್ ಬಿಡುಗಡೆ!

ನಿರ್ಗಮಿತ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಆಡಳಿತಾವಧಿ ಕೊನೆಗೊಳ್ಳುವುದಕ್ಕೆ ಕೆಲವೇ ಗಂಟೆಗಳು ಮುನ್ನ ಅಮೆರಿಕ ಪ್ಯಾಲೆಸ್ಟೈನ್ ಗೆ 221 ಮಿಲಿಯನ್ ಡಾಲರ್ ಮೊತ್ತದ ಹಣವನ್ನು ಬಿಡುಗಡೆ ಮಾಡಿರುವುದು ಬಹಿರಂಗವಾಗಿದೆ.
ಬರಾಕ್ ಒಬಾಮ
ಬರಾಕ್ ಒಬಾಮ
ವಾಷಿಂಗ್ ಟನ್: ನಿರ್ಗಮಿತ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಆಡಳಿತಾವಧಿ ಕೊನೆಗೊಳ್ಳುವುದಕ್ಕೆ ಕೆಲವೇ ಗಂಟೆಗಳು ಮುನ್ನ ಅಮೆರಿಕ ಪ್ಯಾಲೆಸ್ಟೈನ್ ಗೆ  221 ಮಿಲಿಯನ್ ಡಾಲರ್ ಮೊತ್ತದ ಹಣವನ್ನು ಬಿಡುಗಡೆ ಮಾಡಿರುವುದು ಬಹಿರಂಗವಾಗಿದೆ. 
ಅಲ್ಲಿನ ವಿದೇಶಾಂಗ ಇಲಾಖೆ ಹಾಗೂ ಕಾಂಗ್ರೆಸ್ ನ ಮೂಲಗಳಿಂದ ಮಾಹಿತಿ ಬಹಿರಂಗವಾಗಿದ್ದು, ಕಾಂಗ್ರೆಸ್ ಹಾಗೂ ರಿಪಬ್ಲಿಕನ್ ನ ಸ್ಪಷ್ಟ ವಿರೋಧದ ನಡುವೆಯೂ ಅಧಿಕಾರಾವಧಿಯ ಕೊನೆಯ ಘಳಿಗೆಯಲ್ಲಿ ಒಬಾಮ ಆಡಳಿತ ಗುಟ್ಟಾಗಿ ಪ್ಯಾಲೆಸ್ಟೈನ್ ಗೆ  221 ಮಿಲಿಯನ್ ಡಾಲರ್ ಮೊತ್ತದ ಹಣವನ್ನು ಬಿಡುಗಡೆ ಮಾಡಿದೆ. 
ಕಾಂಗ್ರೆಸ್ ಗೆ ಔಪಚಾರಿಕವಾಗಿ ಅಧಿಸೂಚನೆ ಹೊರಡಿಸಿದ್ದ ಒಬಾಮ ಆಡಳಿತ, ಜ.20 ರಂದೇ ಸಿದ್ಧಪಡಿಸಿದ್ದ ಅಧಿಸೂಚನೆಯನ್ನು ಕೊನೆಯ ಘಳಿಗೆಯಲ್ಲಿ ಕಾಂಗ್ರೆಸ್ ಗೆ ಕಳಿಸಿಕೊಟ್ಟಿದೆ ಎಂದು ಅಧಿಕಾರಿಗಳು ಮಾಹಿತಿ ಬಹಿರಂಗಪಡಿಸಿದ್ದಾರೆ. 221 ಮಿಲಿಯನ್ ಡಾಲರ್ ನೊಂದಿಗೆ ಹವಾಮಾನ ಬದಲಾವಣೆ ಯೋಜನೆ, ವಿಶ್ವಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳಿಗಾಗಿ ಒಟ್ಟು 6 ಮಿಲಿಯನ್ ಡಾಲರ್ ಹಣವನ್ನು ಬಿಡುಗಡೆ ಮಾಡುತ್ತಿರುವುದಾಗಿ ಕಾಂಗ್ರೆಸ್ ಗೆ ಕಳಿಸಿದ ಅಧಿಸೂಚನೆಯಲ್ಲಿ ಒಬಾಮ ಆಡಳಿತ ತಿಳಿಸಿದೆ. 
ಪ್ಯಾಲೆಸ್ಟೈನ್ ಗೆ ಆರ್ಥಿಕ ನೆರವು ನೀಡುವುದಕ್ಕೆ ಒಬಾಮ ಆಡಳಿತ  2015-16 ರ ಬಜೆಟ್ ನಲ್ಲೇ ಪ್ರಸ್ತಾವನೆ ನೀಡಿತ್ತಾದರೂ, ಕಾಂಗ್ರೆಸ್ ನ ಇಬ್ಬರು ಜಿಒಪಿ ಸಂಸದರು ತೀವ್ರ ವಿರೋಧ ವ್ಯಕ್ತಪಡಿಸಿ ಪ್ಯಾಲೆಸ್ಟೈನ್ ನ ಪ್ರಾಧಿಕಾರ ಇನ್ನೂ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಸದಸ್ಯತ್ವ ಪಡೆಯಲು ಯತ್ನಿಸುತ್ತಿರುವ ಕಾರಣ ನೀಡಿತ್ತು. ಕಾಂಗ್ರೆಸ್ ನ ವಿರೋಧವನ್ನು ಸಾಮಾನ್ಯವಾಗಿ ಆಡಳಿತ ವರ್ಗ ಗೌರವಿಸುತ್ತದೆಯಾದರೂ, ಕಾಂಗ್ರೆಸ್ ನ ವಿರೋಧವನ್ನೂ ಲೆಕ್ಕಿಸದೇ ಹಣಬಿಡುಗಡೆ ಮಾಡುವುದಕ್ಕೆ ಕಾನೂನಾತ್ಮಕವಾಗಿ ಅವಕಾಶ ಇದೆ. 
ಅಮೆರಿಕಾದ ಸರ್ಕಾರಿ ಇಲಾಖೆಯಿಂದ ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿ ಬಿಡುಗಡೆ ಮಾಡಲಾಗುವ ಹಣದಿಂದ ಬರಾಕ್ ಒಬಾಮ ಆಡಳಿತ ಪ್ಯಾಲೆಸ್ಟೈನ್ ಗೆ ಆಡಳಿತ ಸುಧಾರಣೆ, ಭದ್ರತೆಯ ಸುಧಾರಣೆಗೆ ನೆರವಾಗುವಂತೆ 221 ಮಿಲಿಯನ್ ಡಾಲರ್ ಹಣವನ್ನು ಬಿಡುಗಡೆ ಮಾಡಲು ಉದ್ದೇಶಿಸಿದೆ ಎಂದು ಕಾಂಗ್ರೆಸ್ ನೀಡಲಾಗಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 
ಒರಾಕ್ ಒಬಾಮ ಅಧಿಕಾರಾವಧಿಯ ಕೊನೆಯ ಘಳಿಗೆಯಲ್ಲಿ ಕೈಗೊಳ್ಳಲಾಗಿರುವ ಈ ನಿರ್ಧಾರದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕಾಂಗ್ರೆಸ್ ನ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ಒಬಾಮ ಪ್ಯಾಲೆಸ್ಟೈನ್ ಗೆ ಆರ್ಥಿಕ ನೆರವು ನೀಡಿದ್ದರೆ, ಡೊನಾಲ್ಡ್ ತ್ರಂಪ್ ಇಸ್ರೇಲ್ ಪರವಾಗಿ ನಿಂತಿದ್ದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಮುಂದಿನ ತಿಂಗಳಲ್ಲಿ ಅಮೆರಿಕಾಗೆ ಭೇಟಿ ನೀಡುವಂತೆ ಅಧಿಕೃತ ಆಹ್ವಾನ ಕಳಿಸಿದ್ದಾರೆ.   

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com