ಅಮೆರಿಕಾವನ್ನು ಉಗ್ರತತ್ವದ ಇಸ್ಲಾಮಿಕ್ ಭಯೋತ್ಪಾದಕರಿಂದ ರಕ್ಷಿಸಲು ಈ ಕ್ರಮ ಕೈಗೊಂಡಿರುವುದಾಗಿ ಆದೇಶ ಹೊರಡಿಸಿದ ನಂತರ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಹೊರಗಿನ ಶತ್ರುಗಳು ಒಳನುಗ್ಗುವುದನ್ನು ತಡೆಗಟ್ಟಿ ದೆಶವನ್ನು ರಕ್ಷಿಸಲು ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿರುವ ಡೊನಾಲ್ಡ್ ಟ್ರಂಪ್, ಉಗ್ರವಾದದ ಇಸ್ಲಾಮಿಕ್ ಭಯೋತ್ಪಾದಕರು ನಮ್ಮ ದೇಶದಲ್ಲಿರುವುದು ಬೇಡ, ದೇಶವನ್ನು ಬೆಂಬಲಿಸುವ, ದೇಶದ ಜನರನ್ನು ಪ್ರೀತಿಸುವವರಷ್ಟೇ ಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.