ಪುಟಿನ್-ಟ್ರಂಪ್ ಮಾತುಕತೆ: ದ್ವಿಪಕ್ಷೀಯ ಬಾಂಧವ್ಯದ ದುರಸ್ತಿ, ಉಗ್ರರ ವಿರುದ್ಧ ಹೋರಾಟಕ್ಕೆ ಆದ್ಯತೆ

ದೂರವಾಣಿ ಕರೆ ಮೂಲಕ ಮಾತನಾಡಿರುವ ಡೊನಾಲ್ಡ್ ಟ್ರಂಪ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ವಿರುದ್ಧ ಜಂಟಿ ಹೋರಾಟ ನಡೆಸುವುದಕ್ಕೆ ನಿರ್ಧರಿಸಿದ್ದಾರೆ.
ವ್ಲಾದಿಮಿರ್ ಪುಟಿನ್- ಡೊನಾಲ್ಡ್ ಟ್ರಂಪ್
ವ್ಲಾದಿಮಿರ್ ಪುಟಿನ್- ಡೊನಾಲ್ಡ್ ಟ್ರಂಪ್
ಮಾಸ್ಕೋ: ಅಮೆರಿಕ-ರಷ್ಯಾ ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗುವ ಮುನ್ಸೂಚನೆ ಸ್ಪಷ್ಟವಾಗಿದ್ದು, ದೂರವಾಣಿ ಕರೆ ಮೂಲಕ ಮಾತನಾಡಿರುವ ಡೊನಾಲ್ಡ್ ಟ್ರಂಪ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ವಿರುದ್ಧ ಜಂಟಿ ಹೋರಾಟ ನಡೆಸುವುದಕ್ಕೆ ನಿರ್ಧರಿಸಿದ್ದಾರೆ. 
ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಚರ್ಚಿಸಿರುವ ಡೊನಾಲ್ಡ್ ಟ್ರಂಪ್, ರಷ್ಯಾ- ಅಮೆರಿಕ ದ್ವಿಪಕ್ಷೀಯ ಸಂಬಂಧವನ್ನು ಉತ್ತಮಗೊಳಿಸುವುದು, ವಾಣಿಜ್ಯ ವಹಿವಾಟು, ಅಂತಾರಾಷ್ಟ್ರೀಯ ಭಯೋತ್ಪಾದನೆ, ಉಕ್ರೇನ್, ಕೊರಿಯಾದಲ್ಲಿರುವ ಪರಿಸ್ಥಿತಿಗಳ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.   
ರಷ್ಯಾ ಅಧ್ಯಕ್ಷ-ಅಮೆರಿಕ ಅಧ್ಯಕ್ಷರ ನಡುವೆ ನಡೆದ 1 ಗಂಟೆಯ ಸಂಭಾಷಣೆಯನ್ನು "ದ್ವಿಪಕ್ಷೀಯ ಸಂಬಂಧವನ್ನು ದುರಸ್ತಿಗೊಳಿಸುವ ಅಗತ್ಯತೆ ಎಂದು ಶ್ವೇತ ಭವನ ಬಣ್ಣಿಸಿದ್ದರೆ, ಉಭಯ ನಾಯಕರು ತಮ್ಮ ದೇಶಗಳಿಗೆ ಮಾರಕವಾದ ಭಯೋತ್ಪಾದನೆಯ ವಿರುದ್ಧದ ಹೋರಾಟವನ್ನು ಆದ್ಯತೆಯ ವಿಷಯವನ್ನಾಗಿ ಪರಿಗಣಿಸಿದ್ದಾರೆ ಎಂದು ರಷ್ಯಾ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com