ಕಾಬೂಲ್(ಆಫ್ಗಾನಿಸ್ತಾನ್): ತಾಲಿಬಾನ್ ಉಗ್ರ ಸಂಘಟನೆಗೆ ಯುವಕರನ್ನು ನೇಮಕ ಮಾಡುತ್ತಿದ್ದ ಸಂಘಟನೆಯ ಮುಖಂಡನನ್ನು ಆಫ್ಗಾನ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ತಾಲಿಬಾನ್ ಮುಖಂಡನನ್ನು ಅಬ್ದುಲ್ಲಾ ಎಂದು ಗುರುತಿಸಲಾಗಿದ್ದು, ಇತನನ್ನು ಕುಂದಾಝ್ ಪ್ರಾಂತ್ಯದ ಖಾನಾಬಾದ್ ನಲ್ಲಿ ಬಂಧಿಸಲಾಗಿದೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ ಎಂದು ಖಾಮಾ ಪತ್ರಿಕೆ ವರದಿ ಮಾಡಿದೆ.
ಇದೇ ಕಾರ್ಯಾಚರಣೆ ವೇಳೆ ಮತ್ತೊಬ್ಬ ಮುಖಂಡ ಅಬ್ದುಲ್ ವಾಕಿಲ್ ಎಂಬಾತನನ್ನು ಬಂಧಿಸಲಾಗಿದೆ. ಬಂಧಿತ ಉಗ್ರರಿಂದ ಸ್ವಯಂಚಾಲಿತ ರೈಫಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.