ಟ್ರಂಪ್ ವಲಸೆ ನೀತಿ ಬಗ್ಗೆ ಮೌನ ಮುರಿದ ಒಬಾಮ, ಪ್ರತಿಭಟನೆಗೆ ಬೆಂಬಲ!

ಅಮೆರಿಕಾದಲ್ಲಿ ವ್ಯಕ್ತವಾಗುತ್ತಿರುವ ಪ್ರತಿರೋಧಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬರಾಕ್ ಒಬಾಮ
ಬರಾಕ್ ಒಬಾಮ
ವಾಷಿಂಗ್ ಟನ್: ಭಯೋತ್ಪಾದಕರಿಂದ ಅಮೆರಿಕಾವನ್ನು ರಕ್ಷಿಸುವ ಸಲುವಾಗಿ ಇಸ್ಲಾಮಿಕ್ ರಾಷ್ಟ್ರಗಳ ಪ್ರಜೆಗಳಿಗೆ ಅಮೆರಿಕ ಪ್ರವೇಶದಿಂದ ನಿರ್ಬಂಧಿಸಿರುವ ಟ್ರಂಪ್ ವಲಸೆ ನೀತಿ ಬಗ್ಗೆ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮೌನ ಮುರಿದಿದ್ದು, ಅಮೆರಿಕಾದಲ್ಲಿ ವ್ಯಕ್ತವಾಗುತ್ತಿರುವ ಪ್ರತಿರೋಧಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. 
ಬರಾಕ್ ಒಬಾಮ ವಕ್ತಾರ ಕೆವಿನ್ ಲೂಯಿಸ್, ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ್ದು, ದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳು ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ನೋವು ತಂದಿದೆ ಎಂದು ಹೇಳಿದ್ದಾರೆ. ಆದರೆ ಹೇಳಿಕೆಯಲ್ಲಿ ನೇರವಾಗಿ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ಉಲ್ಲೇಖಿಸಿಲ್ಲ. 
ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಧಾರ್ಮಿಕ ಆಧಾರದಲ್ಲಿ ವ್ಯಕ್ತಿಗಳ ನಡುವೆ ತಾರತಮ್ಯ ಮಾಡುವುದನ್ನು ಒಪ್ಪುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದು, ಚುನಾವಣೆ ಇಲ್ಲದಿದ್ದಾಗಲೂ ಪ್ರಜಾಪ್ರಭುತ್ವದ ರಕ್ಷಕರಾಗಿ ಕೆಲಸ ಮಾಡುವ ಅಮೆರಿಕನ್ನರ ಜವಾಬ್ದಾರಿಯ ಬಗ್ಗೆ ಮಾತನಾಡಿದ್ದ ಒಬಾಮ ಅವರ ಕೊನೆಯ ಅಧ್ಯಕ್ಷೀಯ ಭಾಷಣದ ಸಾಲುಗಳನ್ನು ಕೆವಿನ್ ಲೂಯಿಸ್ ಉಲ್ಲೇಖಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com