ಅಮೆರಿಕಾ: ಹೆಚ್1-ಬಿ ವೀಸಾ ಉದ್ಯೋಗಿಗಳ ಕನಿಷ್ಠ ವೇತನ ಅರ್ಹತೆ ದುಪ್ಪಟ್ಟು!

ಅಮೆರಿಕಾದ ಕಂಪನಿಗಳು ವಿದೇಶಿ ಉದ್ಯೋಗಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡುವುದಕ್ಕೆ ಕಡಿವಾಣ ಹಾಕಲು ಅಮೆರಿಕಾದ ಕಾಂಗ್ರೆಸ್ ನಲ್ಲಿ ವಿಧೇಯಕ ಮಂಡನೆಯಾಗಿದೆ.
ಅಮೆರಿಕಾ: ಹೆಚ್1-ಬಿ ವೀಸಾ ಉದ್ಯೋಗಿಗಳ ಕನಿಷ್ಠ ವೇತನ ಅರ್ಹತೆ ದುಪ್ಪಟ್ಟು!
ವಾಷಿಂಗ್ ಟನ್: ಅಮೆರಿಕಾದ ಕಂಪನಿಗಳು ವಿದೇಶಿ ಉದ್ಯೋಗಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡುವುದಕ್ಕೆ ಕಡಿವಾಣ ಹಾಕಲು ಅಮೆರಿಕಾದ ಕಾಂಗ್ರೆಸ್ ನಲ್ಲಿ ವಿಧೇಯಕ ಮಂಡನೆಯಾಗಿದ್ದು, ಹೆಚ್-1ಬಿ ವೀಸಾ ಪಡೆಯಲು ಬೇಕಿರುವ  ಕನಿಷ್ಠ ವೇತನದ ಮಾನದಂಡವನ್ನು ದುಪ್ಪಟ್ಟುಗೊಳಿಸಲಾಗಿದೆ. 
ಪ್ರಸ್ತುತ ಕನಿಷ್ಠ ವೇತನ 60,000 ಡಾಲರ್ ಗಳಷ್ಟಿದ್ದು, 1989 ರಿಂದ ಬದಲಾಗದೇ ಇರುವ ಮಾನದಂಡವನ್ನು ಈಗ 130,000 ಡಾಲರ್ ಗೆ ಏರಿಕೆ ಮಾಡಲಾಗಿದೆ. ಅಮೆರಿಕಾದ ಹೌಸ್ ಆಫ್ ರೆಪ್ರೆಸೆಂಟೆಟೀವ್ಸ್ ನಲ್ಲಿ ಮಂಡನೆಯಾಗಿರುವ ವಿಧೇಯಕವನ್ನು ಅಂಗೀಕರಿಸಿದರೆ, ನೂತನ ಕಾನೂನಿನಿಂದ ಭಾರತೀಯ ಐಟಿ ಕಂಪನಿಗಳು ಅತಿ ಹೆಚ್ಚು ನಷ್ಟ ಎದುರಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ಅಮೆರಿಕಾದ ಕೆಲಸಗಳನ್ನು ಹೊರಗುತ್ತಿಗೆ ನೀಡಲು ಹಾಗೂ ವಿದೇಶಿ ಉದ್ಯೋಗಿಗಳು ಅಮೆರಿಕನ್ನರ ಕೆಲಸ ಕಸಿದುಕೊಳ್ಳದಂತೆ ಕಡಿವಾಣ ಹಾಕಲು ಮಸೂದೆಯನ್ನು ಮಂಡಿಸಲಾಗಿದ್ದು, ಹೊರಗಿನ ಪ್ರತಿಭೆಗಳನ್ನು ಅತ್ಯಂತ ದುಬಾರಿ ವೆಚ್ಚದಲ್ಲಿ ನೇಮಕ ಮಾಡುವುದಕ್ಕೆ ಅವಕಾಶವನ್ನೂ ನೀಡಲಾಗಿದೆ. 
ಹೈ ಸ್ಕಿಲ್ಡ್ ಇಂಟಿಗ್ರಿಟಿ ಫೇರ್ ನೆಸ್ ಕಾಯ್ದೆ-2017 ಹೆಸರಿನ ಮಸೂದೆ, ಸಮೀಕ್ಷೆಯೊಂದರ ಲೆಕ್ಕಾಚಾರದ ಪ್ರಕಾರ ಶೇ.200 ರಷ್ಟು ವೇತನ ನೀಡಲು ಇಚ್ಛಿಸುವ ಕಂಪನಿಗಳಿಗೆ ಮಾರುಕಟ್ಟೆ ಆಧಾರಿತ ವೀಸಾ ಹಂಚಿಕೆಗೆ ಆದ್ಯತೆ ನೀಡಲಿದೆ.  ಹೊಸ ಮಸೂದೆಯಲ್ಲಿ  ಹೆಚ್1-ಬಿ ವೀಸಾ ಗೆ ಸಂಬಂಧಿಸಿದಂತೆ ಅತ್ಯಂತ ಕಡಿಮೆ ವೇತನ ವಿಭಾಗವನ್ನು ತೆಗೆದುಹಾಕಲು ಪ್ರಸ್ತಾವನೆ ನೀಡಲಾಗಿದ್ದು, ಅಮೆರಿಕಾದಲ್ಲೇ ಉದ್ಯೋಗಗಳು ಸೃಷ್ಟಿಯಾಗುವಂತೆ ಮಾಡುವುದಕ್ಕೆ ಪೂರಕವಾಗಿದೆ ಎಂದು ವಿಧೇಯಕ ಮಂಡಿಸಿದ ಮಂಡಿಸಿದ ಸಂಸದ ಜೊಯಿ ಲೊಫ್‌ಗ್ರೆನ್‌ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com