ಮುಸ್ಲಿಂ ರಾಷ್ಟ್ರಗಳ ಪ್ರಜೆಗಳ ಮೇಲೆ ನಿರ್ಬಂಧ: ನಿರ್ಧಾರ ಸಮರ್ಥಿಸಿಕೊಂಡ ಟ್ರಂಪ್

7 ಮುಸ್ಲಿಂ ರಾಷ್ಟ್ರಗಳ ಪ್ರಜೆಗಳು ಅಮೆರಿಕಾ ರಾಷ್ಟ್ರಕ್ಕೆ ಬಾರದಂತೆ ನಿರ್ಬಂಧ ಹೇರಿ, ಕಠಿಣ ನಿರ್ಧಾರ ತೆಗೆದುಕೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ...
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: 7 ಮುಸ್ಲಿಂ ರಾಷ್ಟ್ರಗಳ ಪ್ರಜೆಗಳು ಅಮೆರಿಕಾ ರಾಷ್ಟ್ರಕ್ಕೆ ಬಾರದಂತೆ ನಿರ್ಬಂಧ ಹೇರಿ, ಕಠಿಣ ನಿರ್ಧಾರ ತೆಗೆದುಕೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ವಲಸೆ ನೀತಿ ವಿಶ್ವದಾದ್ಯಂತ ಕೆಂಗಣ್ಣಿಗೆ ಗುರಿಯಾಗಿರುವ ಹಿನ್ನಲೆಯಲ್ಲಿ ತೇಪೆ ಹಚ್ಚಲು ಯತ್ನ ನಡೆಸಿರುವ ಟ್ರಂಪ್ ಅವರು ಇದು ಮುಸ್ಲಿಮರ ಮೇಲಿನ ನಿಷೇಧವಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಅಮೆರಿಕಾದ ಮಾಧ್ಯಮವೊಂದರಲ್ಲಿ ಸ್ಪಷ್ಟನೆ ನೀಡಿರುವ ಅವರು, ಸ್ಪಷ್ಟವಾಗಿ ಹೇಳುತ್ತೇನೆ, ನನ್ನ ನಿರ್ಧಾರ ಮುಸ್ಲಿಮರ ಮೇಲಿನ ನಿಷೇಧವಲ್ಲ. ನನ್ನ ನೀತಿಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸುತ್ತಿದೆ. ಒಂದು ಧರ್ಮದ ಮೇಲಿನ ವಿರೋಧವೂ ಇದಲ್ಲ. ಇದು ಕೇಲವ ಅಮೆರಿಕ ರಾಷ್ಟ್ರವನ್ನು ಉಳಿಸುವ ಸಲುವಾಗಿ ಜಾರಿಗೆ ತಂದಿರುವ ಉಗ್ರವಾದದ ನಿಷೇಧವಷ್ಟೇ ಎಂದು ಹೇಳಿದ್ದಾರೆ.

ಇರಾನ್, ಇರಾಕ್, ಸಿರಿಯಾ, ಲಿಬಿಯಾ, ಸುಡಾನ್, ಯೆಮನ್ ಮತ್ತು ಸೊಮಾಲಿಯಾ ದೇಶಗಳ ಪ್ರಜೆಗಳ ಮೇಲೆ ಈ ಹಿಂದೆ ಅಮೆರಿಕ ನಿರ್ಬಂಧ ಹೇರಿದ್ದರು. ಟ್ರಂಪ್ ಅವರ ಈ ನಿರ್ಧಾರಕ್ಕೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜರು ಸೇರಿದಂತೆ ವಿಶ್ವತ ಗಣ್ಯಾತಿಗಣ್ಯರು ಖಂಡನೆ ವ್ಯಕ್ತಪಡಿಸಿದ್ದರು.

ಇದೀಗ ತಮ್ಮ ನಿರ್ಧಾರದಿಂದಾಗಿ ಉಂಟಾಗಲಿರುವ ಪರಿಣಾಮದ ಬಗ್ಗೆ ಎಚ್ಚೆತ್ತುಕೊಂಡಿರುವ ಟ್ರಂಪ್ ಅವರು, ನಿರ್ಧಾರದ ಕುರಿತು ಸ್ಪಷ್ಟನೆ ನೀಡಿದ್ದಾರೆ. ಸಿರಿಯಾದ ದೇಶದ ಈಗಿನ ಪರಿಸ್ಥಿತಿ ಯಾವ ಮಟ್ಟಕ್ಕೆ ಕೆಟ್ಟದಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ದೇಶದಿಂದ ಹೊರಗೆ ಹೋಗುತ್ತಿರುವ ಸಿರಿಯಾ ಪ್ರಜೆಗಳ ಮೇಲೆ ನನಗೂ ಅನುಕಂಪವಿದೆ. ಆದರೆ, ಅಮೆರಿಕ ರಕ್ಷಣೆಗಾಗಿ ನಾನು ಈಕ್ರಮವನ್ನು ಕೈಗೊಳ್ಳಲೇಬೇಕಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com