ರಷ್ಯಾ, ಅಲಸ್ಕಾದಲ್ಲಿ ಪ್ರಬಲ ಭೂಕಂಪನ: ಸುನಾಮಿ ಎಚ್ಚರಿಕೆ

ಮಂಗಳವಾರ ಬೆಳಗ್ಗೆ ರಷ್ಯಾದ ಕರಾವಳಿ ಪ್ರದೇಶದಲ್ಲಿ ಭಾರಿ ಭೂಕಂಪ ಸಂಭವಿಸಿದ್ದು, ರಿಕ್ಟರ್​ ಮಾಪಕದಲ್ಲಿ 7.8 ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಾಸ್ಕೋ: ಮಂಗಳವಾರ ಬೆಳಗ್ಗೆ ರಷ್ಯಾದ ಕರಾವಳಿ ಪ್ರದೇಶದಲ್ಲಿ ಭಾರಿ ಭೂಕಂಪ ಸಂಭವಿಸಿದ್ದು, ರಿಕ್ಟರ್​ ಮಾಪಕದಲ್ಲಿ 7.8 ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ.

ಪ್ರಬಲ ಭೂಕಂಪನದಿಂದಾಗಿ ಅಲಸ್ಕಾದಲ್ಲಿ ಸುನಾಮಿ ಎಚ್ಚರಿಕೆ ಘೋಷಿಸಲಾಗಿದ್ದು, ಅಮೆರಿಕ ಫೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ರಷ್ಯಾ ಮತ್ತು ಅಲಸ್ಕಾ ಕರಾವಳಿಯಲ್ಲಿ ಸುನಾಮಿ ಅಲೆಗಳು ಏಳುವ ಕುರಿತು ಎಚ್ಚರಿಕೆ  ರವಾನಿಸಿದೆ. ಪ್ರಸ್ತುತ ಹವಾಮಾನ ಕೇಂದ್ರ ರವಾನಿಸಿರುವ ಎಚ್ಚರಿಕೆ ಅನ್ವಯ ಸುನಾಮಿ ಅಲೆಗಳು ಪ್ರಬಲವಾಗಿರಲಿದ್ದು, ಕರಾವಳಿ ತೀರ ಪ್ರದೇಶದ ಜನವಸತಿ ಪ್ರದೇಶಗಳಲ್ಲಿರುವ ಜನರನ್ನು ತುರ್ತಾಗಿ ಸ್ಥಳಾಂತರಿಸುವಂತೆ ಸಲಹೆ  ನೀಡಿದೆ.

ಮೂಲಗಳ ಪ್ರಕಾರ ರಷ್ಯಾದ ಕಮ್ಚಟ್ಕಾ ಪೆನಿನ್ಸುಲಾ ಪ್ರದೇಶದಲ್ಲಿ ಭೂಕಂಪನ ಕೇಂದ್ರ ಬಿಂದು ದಾಖಲಾಗಿದ್ದು, 300 ಕಿಮೀ ವ್ಯಾಪ್ತಿಯಲ್ಲಿ ಸುನಾಮಿ ಅಪ್ಪಳಿಸಲಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಪೆನಿನ್ಸುಲಾ  ಪ್ರದೇಶದಲ್ಲಿ ಭೂಕಂಪದ ನಂತರ ಅನೇಕ ಕಂಪನಗಳು ಎದ್ದಿವೆ. ಮೊದಲು ರಿಕ್ಟರ್​ ಮಾಪಕದಲ್ಲಿ 7.4 ಪ್ರಮಾಣದ ಭೂಕಂಪನ ದಾಖಲಾಯಿತು ಎಂದು ಹೇಳಲಾಗಿತ್ತಾದರೂ ಬಳಿಕ ಅದನ್ನು 7.8 ತೀವ್ರತೆಯ ಭೂಕಂಪ ಎಂದು  ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

ಸುನಾಮಿ ಅಲೆಗಳು ಏಳುವ ಭೀತಿ ಇಲ್ಲ!
ಏತನ್ಮಧ್ಯೆ ಪ್ರಸ್ತುತ ರಷ್ಯಾ ಮತ್ತು ಅಲಸ್ಕಾದಲ್ಲಿ ಸಂಭವಲಿಸಿರುವ ಭೂಕಂಪನ ಪ್ರಬಲವಾಗಿದ್ದರೂ, ಸುನಾಮಿ ಅಲೆಗಳು ಏಳುವ ಸಾಧ್ಯತೆ ಕಡಿಮೆ ಇದೆ ಎಂದು ರಷ್ಯಾದ ನ್ಯಾಷನಲ್ ವೆದರ್ ಸರ್ವೀಸಸ್ ನ ಸುನಾಮಿ ಅಲರ್ಟ್  ಸೆಂಟರ್ ನ ಅಧಿಕಾರಿಗಳು ತಿಳಿಸಿದ್ದಾರೆ. ಸಮುದ್ರಾದಳದ ಸುಮಾರು 189 ಮೈಲುಗಳ ಒಳಗೆ ಭೂಕಂಪನ ಸಂಭವಿಸಿರುವುದರಿಂದ ಪ್ರಬಲ ಸುನಾಮಿ ಏಳುವಪ್ರಮಾಣ ಕಡಿಮೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com