ವಿದೇಶಿ ಕೃಷಿ ಕಾರ್ಮಿಕರಿಗೆ ಹೆಚ್ಚುವರಿ ಹೆಚ್2ಬಿ ವೀಸಾ ಘೋಷಿಸಿದ ಡೊನಾಲ್ಡ್ ಟ್ರಂಪ್ ಸರ್ಕಾರ

ಅಮೆರಿಕಾದ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಇದೀಗ 15,000 ಹೆಚ್ಚುವರಿ ಹೆಚ್-2ಬಿ ವೀಸಾವನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ಅಮೆರಿಕಾದ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಇದೀಗ 15,000 ಹೆಚ್ಚುವರಿ ಹೆಚ್-2ಬಿ ವೀಸಾವನ್ನು ಏಕಕಾಲಕ್ಕೆ ನೀಡುವುದಾಗಿ ಘೋಷಿಸಿದೆ. ಕಡಿಮೆ ವೇತನ ಹೊಂದಿರುವ ವಿದೇಶಿ ಕೆಲಸಗಾರರಿಗೆ ನೀಡುವ ವೀಸಾ ಇದಾಗಿದೆ. 
ಹೆಚ್-1 ಬಿ ವೀಸಾ ನೀಡಿಕೆಯಲ್ಲಿ ಕಡಿತ ಮಾಡಿದ್ದ ಡೊನಾಲ್ಡ್ ಟ್ರಂಪ್ ಸರ್ಕಾರಕ್ಕೆ ಕೊನೆಗೂ ಕೇವಲ ಅಮೆರಿಕನ್ನರಿಂದ ಮಾತ್ರ ವ್ಯಾಪಾರ,ವಹಿವಾಟು, ಉದ್ಯಮ ಬೆಳೆಯುವುದಿಲ್ಲ ಎಂದು ಅರ್ಥವಾದಂತಿದೆ. ಉದ್ಯಮಿಗಳ ಹಿತಾಸಕ್ತಿಗೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ರಂಪ್ ಆಡಳಿತ ಹೇಳಿದೆ.
ತಾತ್ಕಾಲಿಕ ಕೃಷಿಯೇತರ ಕಾರ್ಮಿಕರ ಕೊರತೆಯನ್ನು ಅಮೆರಿಕಾದ ಉದ್ಯಮ ವಲಯ ಅನುಭವಿಸುತ್ತಿದೆ. ಈ ಸಮಸ್ಯೆಯಿಂದ ಪಾರು ಮಾಡಲು ಡೊನಾಲ್ಡ್ ಟ್ರಂಪ್ ಸರ್ಕಾರ ಇದೀಗ ಹೆಚ್-2 ಬಿ ವೀಸಾ ಕಾರ್ಯಕ್ರಮದಡಿ 15,000 ಹೆಚ್ಚುವರಿ ತಾತ್ಕಾಲಿಕ ಕೃಷಿಯೇತರ ನೌಕರರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ ಎಂದು ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ ತಿಳಿಸಿದೆ.
ಹೆಚ್ಚುವರಿ ವೀಸಾಕ್ಕೆ ಅರ್ಹತೆ ಪಡೆಯಲು 2017ರ ಹಣಕಾಸು ವರ್ಷದಲ್ಲಿ ಹೆಚ್ -2 ಬಿ ವಲಸೆಯೇತರ ನೌಕರರ ವೀಸಾ ಪಡೆಯದಿದ್ದರೆ ತಮ್ಮ ವ್ಯಾಪಾರ, ವಹಿವಾಟು ನಷ್ಟ ಹೊಂದಲಿದೆ ಎಂದು ಅರ್ಜಿದಾರರು ಬರೆದುಕೊಡಬೇಕು.
ಹೆಚ್-2 ಬಿ ವೀಸಾ ಇರುವುದು ಹೆಚ್ಚಾಗಿ ವಿದೇಶಿ ಕೃಷಿ ಕಾರ್ಮಿಕರಿಗೆ. ಲ್ಯಾಟಿನ್ ಅಮೆರಿಕಾ ದೇಶಗಳಿಂದ ಅಮೆರಿಕಾದ ಉದ್ಯಮಿಗಳು ಕೆಲಸಗಾರರನ್ನು ನೇಮಿಸಿಕೊಳ್ಳುತ್ತಾರೆ.
ಡೊನಾಲ್ಡ್ ಟ್ರಂಪ್ ಆಡಳಿತ ಪ್ರಸ್ತುತ ಹೆಚ್-1 ಬಿ ವೀಸಾ ನಿಯಮದ ಬಗ್ಗೆ ಪರಾಮರ್ಶೆ ನಡೆಸುತ್ತಿದೆ.
ಸಿಲಿಕಾನ್ ವ್ಯಾಲಿ ಸೇರಿದಂತೆ ಅಮೆರಿಕಾದ ಉದ್ಯಮಿಗಳ ವರ್ಗ, ಅಮೆರಿಕಾದಲ್ಲಿ ಕುಶಲ ಕೆಲಸಗಾರರ ಭಾರೀ ಕೊರತೆಯಿದ್ದು, ವೀಸಾ ನೀಡಿಕೆಯನ್ನು ಸರ್ಕಾರ ಹೆಚ್ಚಿಸಬೇಕೆಂದು ಅಲ್ಲಿನ ಜನರು ಒತ್ತಾಯಿಸುತ್ತಿದ್ದಾರೆ. ಹೆಚ್-1 ಬಿ ವೀಸಾ ನೀತಿಯಡಿ ಕೆಲಸ ಮಾಡುತ್ತಿರುವ ಸರ್ಕಾರಕ್ಕೆ ಹೆಚ್-2ಬಿ ವೀಸಾದಂತೆ ಹೆಚ್-1ಬಿ ವೀಸಾವನ್ನು ಹೆಚ್ಚಿಸಲು ಸಾಧ್ಯವಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com