ಚೀನೀ ಪ್ರದೇಶವನ್ನು ಒಡೆಯಲು ಬಿಡುವುದಿಲ್ಲ, ಆಕ್ರಮಣವನ್ನು ಎದುರಿಸುತ್ತೇವೆ: ಜಿನ್ ಪಿಂಗ್

ಪ್ರಾದೇಶಿಕ ಸಾರ್ವಭೌಮತೆ ವಿಷಯದಲ್ಲಿ ರಾಜೀಮಾಡಿಕೊಳ್ಳುವುದಿಲ್ಲ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೇಳಿದ್ದು, ಚೀನಾದ ಪ್ರಾದೇಶಿಕ ಸಾರ್ವಭೌಮತೆಯನ್ನು ಒಡೆಯಲು ಯಾರಿಗೂ ಅವಕಾಶ ನೀಡುವುದಿಲ್ಲ..
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್
ಬೀಜಿಂಗ್: ಪ್ರಾದೇಶಿಕ ಸಾರ್ವಭೌಮತೆ ವಿಷಯದಲ್ಲಿ ರಾಜೀಮಾಡಿಕೊಳ್ಳುವುದಿಲ್ಲ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೇಳಿದ್ದು, ಚೀನಾದ ಪ್ರಾದೇಶಿಕ ಸಾರ್ವಭೌಮತೆಯನ್ನು ಒಡೆಯಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. 
ಚೀನಾದ ಜನತೆ ಶಾಂತಿಯನ್ನು ಬಯಸುತ್ತಾರೆ. ನಾವು ವಿಸ್ತರಣೆಯನ್ನಾಗಲಿ ಅಥವಾ ಗಡಿ ಆಕ್ರಮಣವನ್ನಾಗಲು ಬಯಸುವುದಿಲ್ಲ, ಆದರೆ ನಮ್ಮ ಮೇಲೆ ಆಕ್ರಮಣ ಮಾಡುವವರನ್ನು ಎದುರಿಸುತ್ತೇವೆ, ಚೀನಾದ ಪ್ರಾದೇಶಿಕ ಸಾರ್ವಭೌಮತೆಗೆ ಯಾವುದೇ ರೀತಿಯ ಧಕ್ಕೆಯೂ ಉಂಟಾಗಲು ಬಿಡುವುದಿಲ್ಲ ಎಂದು ಕ್ಸಿ ಜಿನ್ ಪಿಂಗ್ ಹೇಳಿದ್ದಾರೆ. 
ಪೀಪಲ್ಸ್ ಲಿಬರೇಷನ್ ಆರ್ಮಿಯ 90 ನೇ ವಾರ್ಷಿಕೋತ್ಸವದ ಅಂಗವಾಗಿ ಕ್ಸಿ ಜಿನ್ ಪಿಂಗ್ ಮಾತನಾಡಿದ್ದು, ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಅತ್ಯಂತ ಶಕ್ತಿಶಾಲಿ ಸೇನೆಯಾಗಿ ಹೊರಹೊಮ್ಮುತ್ತಿದೆ ಎಂದು ಕ್ಸಿ ಜಿನ್ ಪಿಂಗ್ ಹೇಳಿದ್ದಾರೆ. ಸಿಕ್ಕಿಂ ನ ಡೊಕ್ಲಾಮ್ ನಲ್ಲಿ ಭಾರತ-ಚೀನಾ ಸೇನಾ ಪಡೆಗಳ ನಡುವೆ ತಳ್ಳಾಟ ನಡೆದು, ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿರುವ ಹಿನ್ನೆಲೆಯಲ್ಲಿ ಕ್ಸಿ ಜಿನ್ ಪಿಂಗ್ ಹೇಳಿಕೆ ಮಹತ್ವ ಪಡೆದುಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com