ದ್ವಿಪಕ್ಷೀಯ ಸಂಬಂಧದ ಬಗ್ಗೆ ಮೋದಿ ಸಕಾರಾತ್ಮಕ ಹೇಳಿಕೆಗೆ ಚೀನಾ ಸ್ವಾಗತ

ಇತ್ತೀಚೆಗಷ್ಟೇ ಚೀನಾ-ಭಾರತ ದ್ವಿಪಕ್ಷೀಯ ಸಂಬಂಧದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಸಕಾರಾತ್ಮಕ ಹೇಳಿಕೆಯನ್ನು ಚೀನಾ ಸ್ವಾಗತಿಸಿದೆ.
ಭಾರತ-ಚೀನಾ
ಭಾರತ-ಚೀನಾ
 ಬೀಜಿಂಗ್: ಇತ್ತೀಚೆಗಷ್ಟೇ ಚೀನಾ-ಭಾರತ ದ್ವಿಪಕ್ಷೀಯ ಸಂಬಂಧದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಸಕಾರಾತ್ಮಕ ಹೇಳಿಕೆಯನ್ನು ಚೀನಾ ಸ್ವಾಗತಿಸಿದೆ. 
" ಗಟ್ಟಿಯಾದ ಬಾಂಧವ್ಯ ಉಭಯ ರಾಷ್ಟ್ರಗಳಿಗೂ ಮಹತ್ವದ್ದಾಗಿದ್ದು, ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೋಡಿರುವ ಹೇಳಿಕೆಯನ್ನು ಸ್ವಾಗತಿಸುತ್ತೇವೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ. ರಷ್ಯಾದಲ್ಲಿ ಆಯೋಜನೆಯಾಗಿದ್ದ ಆರ್ಥಿಕ ವೇದಿಕೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಕಳೆದ 40 ವರ್ಷಗಳಿಂದ ಚೀನಾ ಗಡಿಯಲ್ಲಿ ಒಂದೇ ಒಂದು ಗುಂಡನ್ನೂ ಹಾರಿಸಿಲ್ಲ ಎಂದು ಚೀನಾ ಪರ ಸಕಾರಾತ್ಮಕ ಹೇಳಿಕೆ ನೀಡಿದ್ದರು. ಇದರಿಂದ ಸಂತಸಗೊಂಡಿರುವ ಚೀನಾ "ನಾವು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಸ್ವಾಗತಿಸುತ್ತೇವೆ, ಗಟ್ಟಿಯಾದ ಬಾಂಧವ್ಯ ಉಭಯ ರಾಷ್ಟ್ರಗಳಿಗೂ ಮಹತ್ವದ್ದಾಗಿದೆ" ಎಂದು ಹೇಳಿದೆ. 
ಇದೇ ವೇಳೆ ಭಾರತದ ಎನ್ಎಸ್ ಜಿ ಸದಸ್ಯತ್ವದ ವಿಚಾರವಾಗಿ ತನ್ನ ನಿಲುವನ್ನು ಮುಂದುವರೆಸುವ ಸೂಚನೆ ನೀಡಿರುವ ಚೀನಾ, ಎನ್.ಪಿ.ಟಿ ಗೆ ಸಹಿ ಹಾಕದ ರಾಷ್ಟ್ರಗಳಿಗೆ ಎನ್ಎಸ್ ಜಿ ಸದಸ್ಯತ್ವ ಪಡೆಯುವುದಕ್ಕೆ ಚೀನಾ ವಿರೋಧಿಸುತ್ತಿದೆ. ಒಂದು ವೇಳೆ ನೀಡುವುದಾದರೆ ಯಾವುದೇ ತಾರತಮ್ಯ ಇಲ್ಲದೇ ಎನ್ ಪಿಟಿಗೆ ಸಹಿ ಹಾಕದ ಎಲ್ಲಾ ರಾಷ್ಟ್ರಗಳಿಗೂ ಎನ್ ಎಸ್ ಜಿ ಸದಸ್ಯತ್ವ ನೀಡುವ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬೇಕೆಂದು ಚೀನಾ ವಿದೇಶಾಂಗ    ಸಚಿವಾಲಯದ ವಕ್ತಾರರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com