ವರ್ಜಿನಿಯಾ ದಾಳಿ: ಗುಂಡು ಹಾರಿಸಿದ ವ್ಯಕ್ತಿಯ ಹತ್ಯೆಗೈದ ಪೊಲೀಸರು

ಸಂಸದರ ನಡುವೆ ನಡೆಯಲಿದ್ದ ವಾರ್ಷಿಕ ಬೇಸ್ ಬಾಲ್ ಪಂದ್ಯಕ್ಕಾಗಿ ಅಭ್ಯಾಸ ನಿರತರಾಗಿದ್ದ ಅಮೆರಿಕದ ರಿಪಬ್ಲಿಕನ್ ಪಕ್ಷದ ಹಿರಿಯ ಸಂಸದನ ಮೇಲೆ ಗುಂಡಿನ ದಾಳಿ ನಡೆಸಿದ್ದ ವ್ಯಕ್ತಿಯನ್ನು...
ವರ್ಜಿನಿಯಾ ದಾಳಿ: ಗುಂಡು ಹಾರಿಸಿದ ವ್ಯಕ್ತಿಯ ಹತ್ಯೆಗೈದ ಪೊಲೀಸರು
ವರ್ಜಿನಿಯಾ ದಾಳಿ: ಗುಂಡು ಹಾರಿಸಿದ ವ್ಯಕ್ತಿಯ ಹತ್ಯೆಗೈದ ಪೊಲೀಸರು
ವಾಷಿಂಗ್ಟನ್: ಸಂಸದರ ನಡುವೆ ನಡೆಯಲಿದ್ದ ವಾರ್ಷಿಕ ಬೇಸ್ ಬಾಲ್ ಪಂದ್ಯಕ್ಕಾಗಿ ಅಭ್ಯಾಸ ನಿರತರಾಗಿದ್ದ ಅಮೆರಿಕದ ರಿಪಬ್ಲಿಕನ್ ಪಕ್ಷದ ಹಿರಿಯ ಸಂಸದನ ಮೇಲೆ ಗುಂಡಿನ ದಾಳಿ ನಡೆಸಿದ್ದ ವ್ಯಕ್ತಿಯನ್ನು ಪೊಲೀಸರು ಹತ್ಯೆ ಮಾಡಿದ್ದಾರೆ.
ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ಜೇಮ್ಸ್ ಟಿ ಹೊಡ್ಗ್'ಕಿನ್ಸನ್ ಎಂದು ಗುರ್ತಿಸಲಾಗಿದ್ದು, ಈತ ಬೆಲ್ಲೆವಿಲ್ಲೆಯ ನಿವಾಸಿಯಾಗಿದ್ದಾನೆ. ಈತ ಎಡಪಂಥೀಯ ಪಕ್ಷದ ನಾಯಕ ಸೆನೇಟರ್ ಬರ್ನೀ ಸ್ಯಾಂಡರ್ಸ್ ಅವರ ಬೆಂಬಲಿಗನಾಗಿದ್ದಾನೆ. 
ಹತ್ಯೆಯಾದ ದಾಳಿಕೋರ ಹೊಡ್ಗ್'ಕಿನ್ಸನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರೋಧಿ ನಿಲುವು ಹೊಂದಿದ್ದ ಎಂದು ಹೇಳಲಾಗುತ್ತಿದೆ. ಹೊಡ್ಗ್'ಕಿನ್ಸನ್ ಸಾಮಾಜಿಕ ಜಾಲತಾಣಗಳಲ್ಲಿ ಚುರುಕಾಗಿದ್ದ. ಇದಕ್ಕೆ ಸಾಕ್ಷಿಯೆಂಬಂತೆ ಟ್ರಂಪ್ ವಿರುದ್ಧ ಹೊಡ್ಗ್'ಕಿನ್ಸನ್ ಹಲವು ಪೋಸ್ಟ್ ಗಳನ್ನು ಹಾಕಿದ್ದು, ರಿಪಬ್ಲಿಕನ್ ಪಕ್ಷವನ್ನು ಕೊನೆಗೊಳಿಸಬೇಕು, ಡೊನಾಲ್ಡ್ ಟ್ರಂಪ್ ನನ್ನ ಅಧ್ಯಕ್ಷನಲ್ಲ ಎಂದು ಹೇಳಿಕೊಂಡಿರುವುದು ಕಂಡುಬಂದಿದೆ.  
ವಾಷಿಂಗ್ಟ್'ನ ನ ಉಪನಗರವೊಂದರಲ್ಲಿ ಸಂಸದರು ಅಭ್ಯಾಸದಲ್ಲಿ ತೊಡಗಿದ್ದ ವೇಳೆ, ವ್ಯಕ್ತಿಯೊಬ್ಬ 50 ಬಾರಿ ಗುಂಡು ಹಾರಿಸಿದ್ದ. ಈ ಪೈಕಿ ಒಂದು ಗುಂಡು ಹಿರಿಯ ಸಂಸದ ಸ್ಟೀವ್ ಸ್ಕೇಲಿಸ್ ಅವರ ಪೃಷ್ಠಕ್ಕೆ ತಗುಲಿತ್ತು,
ಗುಂಡಿನ ದಾಳಿ ಬಳಿಕ ಕುಸಿದು ಬಿದ್ದ ಸ್ಕೇಲಿಸ್ ಅವರು, ಆಗಂತುಕನ ಗುಂಡಿನ ದಾಳಿ ನಡೆಯುತ್ತಿರುವಾಗಲೇ ತೆವಳಿಕೊಂಡು ಸುರಕ್ಷಿತ ಜಾಗಕ್ಕೆ ಬಂದಿದ್ದರು ಎಂದು ಸ್ಥಳದಲ್ಲಿದ್ದ ಮತ್ತೊಬ್ಬ ಸಂಸದ ಮೊ ಬ್ರೂಕ್ಸ್ ತಿಳಿಸಿದ್ದಾರೆ. 
ಪ್ರಸ್ತುತ ಸ್ಕೇಲಿಸ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಪರಿಸ್ಥಿತಿ ಬಗ್ಗೆ ನಿಗಾಯಿರಿಸಿದ್ದೇನೆಂದು ಟ್ರಂಪ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com