ಲಂಡನ್ ವ್ಯಾನ್ ಪ್ರಕರಣವೊಂದು 'ಭಯೋತ್ಪಾದಕ ದಾಳಿ': ಪ್ರಧಾನಿ ತೆರೇಸಾ ಮೇ

ಉತ್ತರ ಲಂಡನ್'ನ ಮಸೀದಿಯೊಂದರ ಮುಂಭಾಗದಲ್ಲಿ ವ್ಯಾನ್ ಹರಿಸಿದ ಘಟನೆಯೊಂದು ಭಯೋತ್ಪಾದಕರ ದಾಳಿಯಾಗಿದೆ ಎಂದು ಬ್ರಿಟನ್ ಪ್ರಧಾನಿ ತೆರೇಸಾ ಮೇ ಅವರು ಸೋಮವಾರ...
ಬ್ರಿಟನ್ ಪ್ರಧಾನಿ ತೆರೇಸಾ ಮೇ
ಬ್ರಿಟನ್ ಪ್ರಧಾನಿ ತೆರೇಸಾ ಮೇ
ಲಂಡನ್: ಉತ್ತರ ಲಂಡನ್'ನ ಮಸೀದಿಯೊಂದರ ಮುಂಭಾಗದಲ್ಲಿ ವ್ಯಾನ್ ಹರಿಸಿದ ಘಟನೆಯೊಂದು ಭಯೋತ್ಪಾದಕರ ದಾಳಿಯಾಗಿದೆ ಎಂದು ಬ್ರಿಟನ್ ಪ್ರಧಾನಿ ತೆರೇಸಾ ಮೇ ಅವರು ಸೋಮವಾರ ಹೇಳಿದ್ದಾರೆ. 
ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಮಸೀದಿಯೊಂದರ ಬಳಿ ಪಾದಚಾರಿಗಳ ಮೇಲೆ ವ್ಯಾನ್ ಹರಿಸಲಾಗಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿ, 8 ಮಂದಿ ಗಾಯಗೊಂಡಿದ್ದಾರೆ. ಘಟನೆ ಬಳಿಕ 48 ವ್ಯಕ್ತಿಯೊಬ್ಬನನ್ನು ಸ್ಥಳೀಯರೇ ಸೆರೆಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆಂದು ಹೇಳಿದ್ದಾರೆ. 
ದಾಳಿಯೊಂದು ಭಯೋತ್ಪಾದಕರ ದಾಳಿಯೆಂದೇ ಪರಿಗಣಿಸಲಾಗುತ್ತಿದೆ. ವಾಹನದ ಮುಂದೆ ಸಿಕ್ಕ ಸಾಕಷ್ಟು ಮಂದಿಯನ್ನು ಬಹಳ ದೂರದವರೆಗೂ ತೆಗೆದುಕೊಂಡು ಹೋಗಲಾಗಿದೆ. ನಿಜಕ್ಕೂ ಇದೊಂದು ಅತ್ಯಂತ ಭಯಾನಕ ಉಗ್ರರ ದಾಳಿಯಾಗಿದೆ ಎಂದು ತಿಳಿಸಿದ್ದಾರೆ. 
ಪ್ರಕರಣ ಸಂಬಂಧ ಈಗಾಗಲೇ ತುರ್ತು ಸಭೆಯನ್ನು ಕರೆಯಲಾಗಿದ್ದು, ದಾಳಿಯಿಂದ ಸಂತ್ರಸ್ತರಾದವರ ಕುಟುಂಬಗಳಇಗೆ ಹಾಗೂ ದುರ್ಘಟನೆ ನಡೆಸ ಸ್ಥಳಕ್ಕೆ ತುರ್ತು ಸೇವೆ ನೀಡಲು ನಿರತವಾದ ಸಿಬ್ಬಂದಿಗಳಿಗೆ ಒಳ್ಳೆಯದಾಗಲೆಂದು ಹಾರೈಸುತ್ತೇನೆಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com