ಉಗ್ರರ ಸ್ವರ್ಗ ಪಾಕ್ ಮೇಲೆ ಟ್ರಂಪ್ ಕೆಂಗಣ್ಣು: ಡ್ರೋಣ್ ದಾಳಿ ವ್ಯಾಪ್ತಿ ವಿಸ್ತರಣೆ ಸಾಧ್ಯತೆ!

ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಕಠಿಣಗೊಳಿಸುವತ್ತ ಅಮೆರಿಕ ಚಿಂತನೆ ನಡೆಸಿದ್ದು, ಉಗ್ರ ನಿಗ್ರಹ ಯೋಜನೆಯಡಿಯಲ್ಲಿ ಅಮೆರಿಕ ಸೇನೆ ನಡೆಸುತ್ತಿರುವ ಡ್ರೋಣ್ ದಾಳಿ ವ್ಯಾಪ್ತಿಯನ್ನು ಪಾಕಿಸ್ತಾನಕ್ಕೂ ವಿಸ್ತರಣೆ ಮಾಡುವಂತ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಕಠಿಣಗೊಳಿಸುವತ್ತ ಅಮೆರಿಕ ಚಿಂತನೆ ನಡೆಸಿದ್ದು, ಉಗ್ರ ನಿಗ್ರಹ ಯೋಜನೆಯಡಿಯಲ್ಲಿ ಅಮೆರಿಕ ಸೇನೆ ನಡೆಸುತ್ತಿರುವ ಡ್ರೋಣ್ ದಾಳಿ  ವ್ಯಾಪ್ತಿಯನ್ನು ಪಾಕಿಸ್ತಾನಕ್ಕೂ ವಿಸ್ತರಣೆ ಮಾಡುವಂತ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.

ಸುದ್ದಿಸಂಸ್ಥೆಯೊಂದು ಈ ಬಗ್ಗೆ ವರದಿ ಮಾಡಿದ್ದು, ಪಾಕಿಸ್ತಾನದೊಂದಿಗಿನ ಎಲ್ಲ ಬಗೆಯ ಸಂಬಂಧಗಳನ್ನು ಅಮೆರಿಕ ಕಠಿಣಗೊಳಿಸುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದ್ದು, ಪಾಕ್ ಪ್ರಾಯೋಜಿತ ಭಯೋತ್ಪಾದಕತೆ ಮೇಲೆ ಅಧ್ಯಕ್ಷ  ಡೊನಾಲ್ಡ್ ಟ್ರಂಪ್ ಕೆಂಗಣ್ಣು ಬೀರಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಅಮೆರಿಕ ಪಾಕಿಸ್ತಾನದಲ್ಲಿರುವ ಭಯೋತ್ಪದಾಕ ನೆಲೆಗಳ ಮೇಲೆ ದಾಳಿ ನಡೆಸಲು ಕಾರ್ಯಯೋಜನೆ ರೂಪಿಸಲು ಮುಂದಾಗಿದ್ದು, ಚಾಲಕ ರಹಿತ  ಯುದ್ಧ ವಿಮಾನ ಡ್ರೋಣ್ ಗಳನ್ನು ಬಳಕೆ ಮಾಡಿಕೊಂಡು ದಾಳಿ ನಡೆಸುವ ಕುರಿತು ಚಿಂತನೆ ನಡೆಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇನ್ನು ಈ ಬಗ್ಗೆ ಪಾಕಿಸ್ತಾನ ಈ ವೆರಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ, ಅಮೆರಿಕ ಪೆಂಟಗನ್ ವಕ್ತಾರ ಆ್ಯಡಂ ಸ್ಟಂಪ್ ಮಾತ್ರ, ಪಾಕಿಸ್ತಾನ-ಅಮೆರಿಕದ ಸೌಹಾರ್ಧತೆ ಯಾವುದೇ ತಡೆಯಿಲ್ಲದೆ ಮುಂದುವರೆಯುತ್ತದೆ. ಉಗ್ರ  ನಿಗ್ರಹಕ್ಕಾಗಿ ಅಮೆರಿಕ ಕೈಗೊಳ್ಳುವ ಪ್ರತಿಯೊಂದು ನಿರ್ಧಾರಕ್ಕೂ ಪಾಕಿಸ್ತಾನದ ಬೆಂಬಲವಿರುತ್ತದೆ ಎಂದು ಭಾವಿಸಿದ್ದೇವೆ. ಉಭಯ ದೇಶಗಳು ಜಂಟಿಯಾಗಿ ಉಗ್ರರ ವಿರುದ್ಧ ಹೋರಾಟ ಮಾಡಲಿದ್ದೇವೆ ಎಂದು ಹೇಳುವ ಮೂಲಕ  ಪರೋಕ್ಷವಾಗಿ ಪಾಕಿಸ್ತಾನದ ಮೇಲಿನ ಡ್ರೋಣ್ ದಾಳಿಯ ಮುನ್ಸೂಚನೆ ನೀಡಿದ್ದಾರೆ.

ಪಾಕಿಸ್ತಾನ ತಾಲಿಬಾನ್ ಉಗ್ರರ ಸ್ವರ್ಗ
ಇದೇ ವೇಳೆ ಅಮೆರಿಕದ ರಕ್ಷಣಾ ತಜ್ಞರು ನೀಡಿರುವ ವರದಿಯನ್ವಯ ಪಾಕಿಸ್ತಾನ ಅಫ್ಘಾನಿಸ್ತಾನದ ತಾಲಿಬಾನ್ ಉಗ್ರರ ಸ್ವರ್ಗವಾಗಿದೆ. ಪಾಕಿಸ್ತಾನದಲ್ಲಿ ತಾಲಿಬಾನ್ ಮೂಲದ ಉಗ್ರರು ರಾಜಾರೋಷವಾಗಿ ತಿರುಗಾಡುತ್ತಿದ್ದು, ಇದು  ಇಡೀ ವಿಶ್ವಸಮುದಾಯಕ್ಕೆ ದೊಡ್ಡ ಬೆದರಿಕೆಯಾಗಿದೆ ಎಂದು ವರದಿ ನೀಡಿದ್ದಾರೆ. ಈ ವರದಿಯಾಧರಿಸಿಯೇ ಅಮೆರಿಕ ಕಾರ್ಯಾಚರಣೆಗೆ ರೂಪುರೇಷೆ ರೂಪಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com