ಬಗ್ದಾದಿಗೆ ಖಲೀಫಾ ಪಟ್ ಟನೀಡಿದ್ದ ಐತಿಹಾಸಿಕ ಮಸೀದಿ ಧ್ವಂಸಗೊಳಿಸಿದ ಇಸಿಸ್!

ಮತ್ತೊಂದು ಐತಿಹಾಸಿಕ ಮಸೀದಿ ಇಸ್ಲಾಮಿಕ್ ಉಗ್ರರ ಕುಕೃತ್ಯಕ್ಕೆ ಬಲಿಯಾಗಿದ್ದು, ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಮುಖ್ಯಸ್ಥ ಬಗ್ದಾದಿಗೆ ಖಲೀಫಾ ಪಟ್ಟ ನೀಡಿದ್ದ ಪ್ರಸಿದ್ಧ ಅಲ್‌-ನೂರಿ ಮಸೀದಿಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳು ಧ್ವಂಸಗೊಳಿಸಿದ್ದಾರೆ.
ದಾಳಿಗೊಳಗಾದ ಐತಿಹಾಸಿಕ ಮಸೀದಿ
ದಾಳಿಗೊಳಗಾದ ಐತಿಹಾಸಿಕ ಮಸೀದಿ

ಮೊಸುಲ್: ಮತ್ತೊಂದು ಐತಿಹಾಸಿಕ ಮಸೀದಿ ಇಸ್ಲಾಮಿಕ್ ಉಗ್ರರ ಕುಕೃತ್ಯಕ್ಕೆ ಬಲಿಯಾಗಿದ್ದು, ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಮುಖ್ಯಸ್ಥ ಬಗ್ದಾದಿಗೆ ಖಲೀಫಾ ಪಟ್ಟ ನೀಡಿದ್ದ ಪ್ರಸಿದ್ಧ ಅಲ್‌-ನೂರಿ ಮಸೀದಿಯನ್ನು ಇಸ್ಲಾಮಿಕ್  ಸ್ಟೇಟ್ ಉಗ್ರಗಾಮಿಗಳು ಧ್ವಂಸಗೊಳಿಸಿದ್ದಾರೆ.

12ನೇ ಶತಮಾನಕ್ಕೆ ಸೇರಿದೆ ಎನ್ನಲಾದ ಮತ್ತು ಐತಿಹಾಸಿಕ ಹಿನ್ನಲೆಯುಳ್ಳ ಮೊಸುಲ್ ನಗರದ ಪ್ರಸಿದ್ಧ ಅಲ್‌-ನೂರಿ ಮಸೀದಿಯನ್ನು ಉಗ್ರರು ಧ್ವಂಸಗೊಳಿಸಿದ್ದು, ಉಗ್ರರ ದಾಳಿಯಿಂದಾಗಿ ಮಸೀದಿಯ ಅಲ್‌-ಹಬ್ದಾ ಎಂಬ ಖ್ಯಾತಿಯ  ಸ್ಥಂಬವೂ ನಾಶವಾಗಿದೆ ಎಂದು ತಿಳಿದುಬಂದಿದೆ. ಬುಧವಾರ ರಾತ್ರಿ ಕಟ್ಟಡದೊಳಗೆ ಬಾಂಬ್‌ ಇರಿಸಿ ಸ್ಫೋಟ ಮಾಡಲಾಗಿದೆ ಎಂದು ಇರಾಕ್‌ ನ ರಕ್ಷಣಾ ಸಚಿವಾಲಯ ತಿಳಿಸಿವೆ.

ಮಧ್ಯಕಾಲದಲ್ಲಿ ನಿರ್ಮಾಣಗೊಂಡಿದ್ದ ಈ ಮಸೀದಿಗೆ 800 ವರ್ಷಗಳ ಇತಿಹಾಸವಿದ್ದು, ಈ ಮಸೀದಿ ಇರಾಕ್ ದೇಶದ ಐತಿಹಾಸಿಕ ಪುರಾತನ ಸ್ಥಳಗಳಲ್ಲೊಂದಾಗಿತ್ತು. ಅಲ್-ಹದ್ಬ (ಗೂನು ಬೆನ್ನು) ಎಂಬ ಹೆಸರಿನ ಈ ಪ್ರಾಚೀನ  ಮಿನಾರೆಟ್ ಅನ್ನು 1172ರಲ್ಲಿ ನಿರ್ಮಿಸಲಾಗಿತ್ತು ಹಾಗೂ ಅದು ಮೋಸುಲ್ ನಗರದ ಪ್ರಮುಖ ಆಕರ್ಷಣೆಯಾಗಿತ್ತು. ಇಟಲಿಯ ಪೀಸಾ ಗೋಪುರದಂತೆ ಇಲ್ಲಿನ ಮಿನಾರ್‌ ಕೂಡ ಜಗತ್ ಪ್ರಸಿದ್ಧಿ ಪಡೆದಿತ್ತು. 2014 ರಲ್ಲೇ ಉಗ್ರರು ಈ  ಮಸೀದಿ ಧ್ವಂಸಕ್ಕೆ ಮುಂದಾಗಿದ್ದರು. ಇಸ್ಲಾಮ್‌ ನ ಮೂಲಭೂತ ಸಿದ್ಧಾಂತಕ್ಕನುಗುಣವಾಗಿ ಕಟ್ಟಡದ ವಿನ್ಯಾಸವಿಲ್ಲವೆಂಬುದು ಅವರ ವಾದವಾಗಿತ್ತು. ಆದರೆ ಸ್ಥಳೀಯ ನಿವಾಸಿಗಳು ಆ ಸಂದರ್ಭ ಮಾನವ ಸರಪಳಿ ನಿರ್ಮಿಸಿ, ಮಸೀದಿ  ಧ್ವಂಸ ತಡೆದಿದ್ದರು.

ಇರಾಕ್ ಸೇನೆ ತಡೆಯಲು ಸ್ಫೋಟ
ಇನ್ನು ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ಇರಾಕ್ ಸೇನೆ ಕೇವಲ 50 ಮೀಟರ್ ದೂರದಲ್ಲಿತ್ತು. ಅವರ ದಾಳಿ ತಡೆಯಲೆಂದೇ ಈ ಸ್ಫೋಟ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಮಸೀದಿ ಸ್ಫೋಟವನ್ನು ಅಮೆರಿಕ ಮೇಲೆ  ತಳ್ಳಿರುವ ಇಸಿಸ್ ಆಮೆರಿಕವೇ ತನ್ನ ಯುದ್ಧ ವಿಮಾನದ ಮೂಲಕ ಮಸೀದಿಯನ್ನು ಸ್ಫೋಟಿಸಿದೆ ಎಂದು ಆರೋಪಿಸಿದೆ. ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ಅಮೆರಿಕ, ಈ ಕುಕೃತ್ಯ ಎಸಗಿರುವುದು ಐಎಸ್ ಎಂಬುದರಲ್ಲಿ  ಅನುಮಾನವೇ ಬೇಡ. ಮೊಸುಲ್ ಮತ್ತು ಇರಾಕ್ ಜನರ ಮೇಲಿನ ದಾಳಿ ಇದು ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com