ಭಾರತ ಮತ್ತು ಅಮೆರಿಕಾದ ಒಟ್ಟಿಗೆ ಕೆಲಸ ಮಾಡಿದಾಗ ಇಡೀ ವಿಶ್ವಕ್ಕೇ ಪ್ರಯೋಜನ: ನರೇಂದ್ರ ಮೋದಿ

ಭಾರತ ಮತ್ತು ಅಮೆರಿಕಾ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಇಡೀ ವಿಶ್ವವೇ ಅದರ ಲಾಭ...
ಅಮೆರಿಕಾದಲ್ಲಿ ವಾಣಿಜ್ಯ ನಾಯಕರ ಸಭೆಗೂ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ
ಅಮೆರಿಕಾದಲ್ಲಿ ವಾಣಿಜ್ಯ ನಾಯಕರ ಸಭೆಗೂ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ
ನ್ಯೂಯಾರ್ಕ್: ಭಾರತ ಮತ್ತು ಅಮೆರಿಕಾ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಇಡೀ ವಿಶ್ವವೇ ಅದರ ಲಾಭ ಪಡೆದುಕೊಳ್ಳುತ್ತದೆ. ಅದು ರೋಟವೈರಸ್ ಅಥವಾ ಡೆಂಗ್ಯೂಗೆ ಒಳ್ಳೆ ಲಸಿಕೆಗಳನ್ನು ಕಂಡುಹಿಡಿಯಲು ಸಹಕಾರಿ ಪ್ರಯತ್ನಗಳಾಗಿರಲಿ ಅಥವಾ ನಮ್ಮ ಜಂಟಿ ಅಧ್ಯಯನಗಳಾಗಿರಲಿ ಬೇರೆ ದೇಶಗಳಿಗೆ ಸಹಾಯವಾಗುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಅಮೆರಿಕಾದ ವಾಲ್ ಸ್ಟ್ರೀಟ್ ಜರ್ನಲ್ ಗೆ ಮೋದಿಯವರು ಲೇಖನವೊಂದನ್ನು ಬರೆದಿದ್ದು, ಅದರಲ್ಲಿ ನಮ್ಮ ಕಾರ್ಯತಂತ್ರ ಸಂಬಂಧಗಳು ನಿರ್ವಿವಾದವಾದದ್ದು. ನಮ್ಮ ಬಹು ಸಂಸ್ಕೃತಿ ಸಮಾಜದ ಶಕ್ತಿ, ನಂಬಿಕೆಗಳ ಮೇಲೆ ಅದು ನಿಂತಿದೆ ಎಂದು ಹೇಳಿದ್ದಾರೆ.
ಭಾರತ ಮತ್ತು ಅಮೆರಿಕಾ ರಾಷ್ಟ್ರಗಳನ್ನು ಬೆಳವಣಿಗೆ ಮತ್ತು ಆವಿಷ್ಕಾರದ ಪರಸ್ಪರ ಶಕ್ತಿಶಾಲಿ ಎಂಜಿನ್ ಗಳು ಎಂದು ಬಣ್ಣಿಸಿದ ಪ್ರಧಾನಿ, ಜಾಗತಿಕ ಮಟ್ಟದಲ್ಲಿ ದ್ವಿಪಕ್ಷೀಯ ವ್ಯಾಪಾರದಲ್ಲಿ ವರ್ಷಕ್ಕೆ ಈಗಾಗಲೇ 115 ಡಾಲರ್ ನಷ್ಟು ವಹಿವಾಟುಗಳಾಗುತ್ತಿವೆ. ಇಂದು ಮುಂದಿನ ವರ್ಷಗಳಲ್ಲಿ ಇನ್ನಷ್ಟು ಜಾಸ್ತಿಯಾಗುವ ನಿರೀಕ್ಷೆಯಿದೆ. ಭಾರತೀಯ ಕಂಪೆನಿಗಳು ಅಮೆರಿಕಾದಲ್ಲಿ ಉತ್ಪಾದನೆ ಮತ್ತು ಸೇವಾ ವಲಯಗಳಿಗೆ ಮೌಲ್ಯಗಳನ್ನು ಹೆಚ್ಚಿಸಲಿದ್ದು ಸುಮಾರು 15 ಶತಕೋಟಿ ಡಾಲರ್ ನಷ್ಟು ಹೂಡಿಕೆ ಮಾಡಲಿದೆ. ಅಮೆರಿಕಾದ ರುಸ್ಟ್ ಬೆಲ್ಟ್ ಸೇರಿದಂತೆ 35 ಕ್ಕೂ ಅಧಿಕ ಅಮೆರಿಕಾದ ರಾಜ್ಯಗಳಲ್ಲಿ ಭಾರತೀಯ ಕಂಪೆನಿಗಳು ಹೂಡಿಕೆ ಮಾಡುತ್ತಿವೆ. ಅಮೆರಿಕಾದ ಅನೇಕ ಕಂಪೆನಿಗಳು ಸಹ ಭಾರತದಲ್ಲಿ 20 ಶತಕೋಟಿಗೂ ಅಧಿಕ ಹೂಡಿಕೆ ಮಾಡಿ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುತ್ತಿದೆ ಎಂದರು.
ಭಾರತದ ಅತಿದೊಡ್ಡ ತೆರಿಗೆ ಸುಧಾರಣೆಯೆನಿಸಿಕೊಂಡಿರುವ ಸರಕು ಮತ್ತು ಸೇವಾ ತೆರಿಗೆ ಈ ವಾರಾಂತ್ಯಕ್ಕೆ ಜಾರಿಗೆ ಬರುವ ನಿರೀಕ್ಷೆಯಿದ್ದು, ಭಾರತದ ರೂಪಾಂತರ ಅಮೆರಿಕಾದ ವ್ಯವಹಾರಗಳಿಗೆ ಸಮೃದ್ಧವಾದ ವಾಣಿಜ್ಯ ಮತ್ತು ಹೂಡಿಕೆ ಅವಕಾಶಗಳನ್ನು ಒದಗಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com