ವಿಶ್ವಾದ್ಯಂತ ಮತ್ತೊಂದು ಸೈಬರ್ ದಾಳಿ, ಯೂರೋಪಿಯನ್ ದೇಶಗಳಲ್ಲಿ ದಾಳಿ ಪ್ರಮಾಣ ಹೆಚ್ಚು

ಇತ್ತೀಚೆಗಷ್ಟೇ ‘ವಾನ್ನಾಕ್ರೈ' ಸೈಬರ್‌ ದಾಳಿ ಮೂಲಕ ಜಗತ್ತನ್ನೇ ತಲ್ಲಣಗೊಳಿಸಿದ್ದ ಸೈಬರ್ ದಾಳಿಕೋರರು, ಇದೀಗ ಮತ್ತೆ ಜಗತ್ತಿನಾದ್ಯಂತ ಕಂಪ್ಯೂಟರ್‌ಗಳ ಮೇಲೆ ಹೊಸ ಬಗೆಯ ದಾಳಿ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಇತ್ತೀಚೆಗಷ್ಟೇ ‘ವಾನ್ನಾಕ್ರೈ' ಸೈಬರ್‌ ದಾಳಿ ಮೂಲಕ ಜಗತ್ತನ್ನೇ ತಲ್ಲಣಗೊಳಿಸಿದ್ದ ಸೈಬರ್ ದಾಳಿಕೋರರು, ಇದೀಗ ಮತ್ತೆ ಜಗತ್ತಿನಾದ್ಯಂತ ಕಂಪ್ಯೂಟರ್‌ಗಳ ಮೇಲೆ ಹೊಸ ಬಗೆಯ ದಾಳಿ ಮಾಡಿದ್ದಾರೆ.

ಪ್ರಮುಖವಾಗಿ ಈ ಬಾರಿಯ ದಾಳಿಯಿಂದಾಗಿ ಯೂರೋಪಿಯನ್ ದೇಶಗಳ ಮೇಲೆ ದಾಳಿಯಾಗಿದ್ದು, ‘ಪೆಟ್ಯಾ' ಹೆಸರಿನಲ್ಲಿ ಮೊದಲಿಗೆ ಉಕ್ರೇನ್‌ ದೇಶದ ಮೇಲೆ ದಾಳಿಯಾದ ಕುರಿತು ಮಾಹಿತಿ ಲಭ್ಯವಾಗಿದೆ. ಉಕ್ರೇನ್ ನ  ವಿಮಾನಯಾನ, ಬ್ಯಾಂಕ್‌, ಸರ್ಕಾರಿ ಕಚೇರಿಗಳ  ಕಂಪ್ಯೂಟರ್ ಗಳ ಮೇಲೆ ಭಾರೀ ಪ್ರಮಾಣದಲ್ಲಿ ಸೈಬರ್‌ ದಾಳಿ ನಡೆಸಲಾಗಿದ್ದು, ಇದರ ಬೆನ್ನಲ್ಲೇ ಫ್ರಾನ್ಸ್‌ನ ಕಂಪ್ಯೂಟರ್‌ ವ್ಯವಸ್ಥೆಗಳ ಮೇಲೂ ದಾಳಿ ನಡೆದಿದೆ. ಇನ್ನು ಸೈಬರ್  ದಾಳಿ ಬಗ್ಗೆ ಉಕ್ರೇನ್ ಪ್ರಧಾನಿ ಸ್ಪಷ್ಟನೆ ನೀಡಿದ್ದು ಸರ್ಕಾರಿ ಮಹತ್ವದ ಕಡತಗಳಿರುವ ಕಂಪ್ಯೂಟರ್ ಗಳ ಮೇಲೆ ದಾಳಿಯಾಗಿಲ್ಲ ಎಂದು ಹೇಳಿದ್ದಾರೆ.

ಉಕ್ರೇನ್‌, ರಷ್ಯಾ ಸೇರಿದಂತೆ ಕೆಲ ದೇಶಗಳ ಪ್ರಮುಖ ಮೂಲಭೂತ ಸೌಕರ್ಯ ವ್ಯವಸ್ಥೆಯ ಮೇಲೆ ದಾಳಿ ನಡೆದಿದೆ. ರಷ್ಯಾದ ಪ್ರಮುಖ ಇಂಧನ ಸಂಸ್ಥೆ ರಾಸ್ ನೆಫ್ಟ್ ಮೇಲೂ ದಾಳಿಯಾಗಿದ್ದು, ಸಂಸ್ಥೆಯ ಸೈಬರ್ ಭದ್ರತಾ  ಸಿಬ್ಬಂದಿಗಳು ದೊಡ್ಡ ಪ್ರಮಾಣದ ನಷ್ಟವನ್ನು ತಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಡ್ಯಾನಿಷ್‌ ಶಿಪ್ಪಿಂಗ್‌ ಕಂಪೆನಿ ಮಯೇಸ್ಕ್‌ರ್‍ ಮತ್ತು ಬ್ರಿಟಿಷ್‌ ಜಾಹೀರಾತು ಕಂಪೆನಿ ಡಬ್ಲ್ಯೂಪಿಪಿಯಂತಹ ಬೃಹತ್‌ ಕಂಪೆನಿಗಳೂ  ದಾಳಿಗೊಳಗಾಗಿವೆ. ಜಾಗತಿಕ ರಾರ‍ಯನ್ಸಮ್‌ವೇರ್‌ ಘಟನೆಯ ಬಗ್ಗೆ ತಿಳಿದು ಬಂದಿದೆ, ಪರಿಸ್ಥಿತಿಯ ಬಗ್ಗೆ ತೀವ್ರ ನಿಗಾ ಇರಿಸಲಾಗಿದೆ ಎಂದು ಬ್ರಿಟಿಷ್‌ ರಾಷ್ಟ್ರೀಯ ಸೈಬರ್‌ ಭದ್ರತಾ ಕೇಂದ್ರ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com