ಅಮೆರಿಕಾದಲ್ಲಿ ಮುಂದುವರಿದ ಜನಾಂಗೀಯ ದ್ವೇಷ: ಸಿಖ್ ವ್ಯಕ್ತಿಯ ಮೇಲೆ ಗುಂಡಿನ ದಾಳಿ

39 ವರ್ಷದ ಸಿಖ್ ವ್ಯಕ್ತಿಯ ಮೇಲೆ ಅಮೆರಿಕಾದಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್: 39 ವರ್ಷದ ಸಿಖ್ ವ್ಯಕ್ತಿಯ ಮೇಲೆ ಅಮೆರಿಕಾದಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ..

ವಾಷಿಂಗ್ಟನ್ ನ ಕೆಂಟ್ ನಲ್ಲಿರುವ ತಮ್ಮ ಮನೆಯ ಮುಂದೆ ಸಿಖ್ ವ್ಯಕ್ತಿ ವಾಹನದ ಕೆಲಸ ಮಾಡುತ್ತಿದ್ದ ವೇಳೆ ಬಂದ ಅಪರಿಚಿತ ವ್ಯಕ್ತಿ ಅವರ ಮೇಲೆ ಗುಂಡಿನ ದಾಳಿ ನಡೆಸಿ ನಿಮ್ಮ ದೇಶಕ್ಕೆ ವಾಪಸ್ ಹೋಗಿ ಎಂದು ಕೂಗಿದ್ದಾನೆ ಎಂದು  ವರದಿಯಾಗಿದೆ. ಇಬ್ಬರು ವ್ಯಕ್ತಿಗಳ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಎದುರಿಗಿದ್ದ ಅಪರಿಚಿತ ವ್ಯಕ್ತಿ ನಿನ್ನ ದೇಶಕ್ಕೆ ವಾಪಸ್ ಹೋಗು ಎಂದು ಹೇಳಿ ಸಿಖ್ ವ್ಯಕ್ತಿಯ ತೋಳಿಗೆ ಗುಂಡು ಹಾರಿಸಿದ್ದಾನೆ ಎಂದು ಕೆಂಟ್ ಪೊಲೀಸರು ಹೇಳಿದ್ದಾರೆ.

ಶೂಟ್ ಮಾಡಿದ ವ್ಯಕ್ತಿ 6 ಅಡಿ ಎತ್ತರವಿದ್ದು, ಬಿಳಿ ಬಣ್ಣದವನಾಗಿದ್ದ. ಮುಖಕ್ಕೆ ಮಾಸ್ಕ್ ಹಾಕಿದ್ದ ಎಂದು ಸಿಖ್ ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾರೆ. ಸಿಖ್ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದು ಆತಂಕ ಪಡುವ ಅಗತ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಕೆಂಟ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಜೊತೆಗೆ ಅಮೆರಿಕಾದಲ್ಲಿರುವ ಸಿಖ್ ಸಮುದಾಯದವರ ಬಗ್ಗೆ ಜಾಗರೂಕತೆ ವಹಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com