ದೇಶ ಬಿಟ್ಟು ಹೋಗದಂತೆ ಮಲೇಷ್ಯನ್ನರಿಗೆ ದಿಗ್ಭಂಧನ ಹೇರಿದ ಉತ್ತರ ಕೊರಿಯಾ!

ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಮಲ ಸಹೋದರ ಕಿಮ್ ಜಾಂಗ್ ನಮ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲೇಷ್ಯಾ ವಿರುದ್ಧ ಕೆಂಗಣ್ಣು ಬೀರಿದ್ದು, ತನ್ನ ದೇಶದಲ್ಲಿರು ಮಲೇಷ್ಯಾ ನಾಗರಿಕರು ದೇಶ ಬಿಟ್ಟು ತೆರಳದಂತೆ ಉತ್ತರ ಕೊರಿಯಾ ದಿಗ್ಭಂಧನ ಹೇರಿದೆ.
ಹತ್ಯೆಯಾದ ಕಿಮ್ ಜಾಂಗ್ ನಮ್ (ಸಂಗ್ರಹ ಚಿತ್ರ)
ಹತ್ಯೆಯಾದ ಕಿಮ್ ಜಾಂಗ್ ನಮ್ (ಸಂಗ್ರಹ ಚಿತ್ರ)

ಪ್ಯೋಂಗ್ಯಾಂಗ್: ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಮಲ ಸಹೋದರ ಕಿಮ್ ಜಾಂಗ್ ನಮ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲೇಷ್ಯಾ ವಿರುದ್ಧ ಕೆಂಗಣ್ಣು ಬೀರಿದ್ದು, ತನ್ನ ದೇಶದಲ್ಲಿರು ಮಲೇಷ್ಯಾ ನಾಗರಿಕರು ದೇಶ  ಬಿಟ್ಟು ತೆರಳದಂತೆ ಉತ್ತರ ಕೊರಿಯಾ ದಿಗ್ಭಂಧನ ಹೇರಿದೆ.

ಮೂಲಗಳ ಪ್ರಕಾರ ಕಿಮ್ ಜಾಂಗ್ ನಮ್ ಹತ್ಯೆ ಸಂಬಂಧ ದಕ್ಷಿಣ ಕೊರಿಯಾ ಮತ್ತು ವಿಶ್ವ ಸಮುದಾಯ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರನ್ನು ಟೀಕಿಸುತ್ತಿದ್ದು, ಇತ್ತ ಉತ್ತರ ಕೊರಿಯಾ ಮಾತ್ರ ಮಲೇಷ್ಯಾವನ್ನು   ಟೀಕಿಸುತ್ತಿದೆ. ಹತ್ಯೆ ನಡೆದಿರುವುದು ಮಲೇಷ್ಯಾ ಕೌಲಾಲಂಪುರದಲ್ಲಿ. ಹೀಗಾಗಿ ಹತ್ಯೆ ಸಂಬಂಧ ಮಲೇಷ್ಯಾ ಸರ್ಕಾರ ಸಂಪೂರ್ಣ ವರದಿ ನೀಡಬೇಕು ಎಂದು ಉತ್ತರ ಕೊರಿಯಾ ಹೇಳಿದೆ. ಏತನ್ಮಧ್ಯೆ ಕಿಮ್ ಜಾಂಗ್ ನಮ್ ಹತ್ಯೆ  ಸಂಬಂಧ ಉತ್ತರ ಕೊರಿಯಾ ಹಾಗೂ ಮಲೇಷ್ಯಾ ಸರ್ಕಾರದ ನಡುವಿನ ನಡುವೆ ಮಾತಿನ ಸಮರ ಮುಂದುವರೆದಿದ್ದು, ಇದೀಗ ವಾಕ್ಸಮರ ತಾರಕಕ್ಕೇರಿದೆ.

ಹೀಗಾಗಿ ಮಲೇಷ್ಯಾ ವಿರುದ್ಧ ಅಸಮಾಧಾನಗೊಂಡಿರುವ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ನಮ್ ಹತ್ಯೆ ಸಂಬಂಧ ಸಂಪೂರ್ಣ ವರದಿ ಕೈ ಸೇರುವವರೆಗೂ ಮಲೇಷ್ಯಾ ಪ್ರಜೆಗಳು ದೇಶ ಬಿಟ್ಟು ತೆರಳದಂತೆ ದಿಗ್ಙಂಧನ ಹೇರಿ  ಎಂದು ಆದೇಶಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕಾಗಿ ಉತ್ತರ ಕೊರಿಯಾದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಮಲೇಷ್ಯಾ ಪ್ರಜೆಗಳ ಪ್ರಯಾಣಕ್ಕೆ ಅಡ್ಡಿ ಪಡಿಸಲಾಗುತ್ತಿದೆ.

ಮಲೇಷ್ಯಾದಲ್ಲಿರುವ ಉತ್ತರ ಕೊರಿಯಾ ರಾಯಭಾರ ಕಚೇರಿಗೂ ದಿಗ್ಭಂಧನ!
ಅತ್ತ ಉತ್ತರ ಕೊರಿಯಾ ಮಲೇಷ್ಯಾ ಪ್ರಜೆಗಳು ದೇಶ ಬಿಟ್ಟು ತೆರಳದಂತೆ ದಿಗ್ಭಂಧನ ವಿಧಿಸಿದ ಬೆನ್ನಲ್ಲೇ ಮಲೇಷ್ಯಾ ಸರ್ಕಾರ ಕೂಡ ಕೌಲಾಲಂಪುರದಲ್ಲಿರುವ ಉತ್ತರ ಕೊರಿಯಾ ರಾಯಭಾರ ಕಚೇರಿ ಮೇಲೆ ದಿಗ್ಭಂಧನ ಹಾಕಿದೆ.  ಕಚೇರಿಯಲ್ಲಿರುವ ಎಲ್ಲ ಅಧಿಕಾರಿಗಳ ತಪಾಸಣೆ ನಡೆಸಲಾಗುತ್ತಿದ್ದು, ಅಧಿಕಾರಿಗಳು ಯಾವುದೇ ಕಾರಣಕ್ಕೂ ಮಲೇಷ್ಯಾ ಬಿಟ್ಟು ತೆರಳದಂತೆ ಸೂಚನೆ ನೀಡಲಾಗಿದೆ. ಉತ್ತರ ಕೊರಿಯಾದಲ್ಲಿರುವ ತನ್ನ ಪ್ರಜೆಗಳ ಕುರಿತು ಸುರಕ್ಷಿತ  ಮಾಹಿತಿ ಲಭ್ಯವಾಗುವವರೆಗೂ ಉತ್ತರ ಕೊರಿಯಾ ಅಧಿಕಾರಿಗಳು ತಮ್ಮ ವಶದಲ್ಲಿರುತ್ತಾರೆ ಎಂದು ಮಲೇಷ್ಯಾ ನೂರ್ ಜಜ್ಲಾನ್ ಮಹಮದ್ ಹೇಳಿದ್ದಾರೆ.

ಒಟ್ಟಾರೆ ಕಿಮ್ ಜಾಂಗ್ ನಮ್ ಹತ್ಯೆ ವಿಚಾರಣೆ ಇದೀಗ ಉತ್ತರ ಕೊರಿಯಾ ಮತ್ತು ಮಲೇಷ್ಯಾ ಸರ್ಕಾರಗಳ ಪ್ರತಿಷ್ಟೆಯ ಕಣವಾಗಿ ಮಾರ್ಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com