ಶ್ರೀನಿವಾಸ್ ಕುಚಿಬೋಟ್ಲ ಮತ್ತು ಅಲೋಕ್ ಮದಸನಿ ಮೇಲೆ ನಡೆದ ಭೀರಕ ಹಿಂಸಾಚಾರದ ಬಗ್ಗೆ ಕನ್ಸಾಸ್ ಗವರ್ನರ್ ಆಗಿ ನಾನು ತೀವ್ರ ಬೇಸರ ಮತ್ತು ವಿಷಾದ ವ್ಯಕ್ತಪಡಿಸುತ್ತಿದ್ದೇನೆ. ಶ್ರೀನಿವಾಸ್ ಅವರ ಪತ್ನಿ ಸುನಯನ ಮತ್ತು ಹೈದರಾಬ್ದ್ ನಲ್ಲಿರುವ ಅವರ ಕುಟುಂಬದ ದುಃಖವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಶ್ರೀನಿವಾಸ್ ಅವರು ತಮ್ಮ ಕುಟುಂಬವನ್ನು ತುಂಬಾ ಪ್ರೀತಿಸುತ್ತಿದ್ದರು. ದೊಡ್ಡವರನ್ನು ಗೌರವಿಸುತ್ತಿದ್ದರು ಎಂದು ಕೇಳಿದ್ದೇನೆ. ಧೈರ್ಯ, ಪ್ರೀತಿ ಮತ್ತು ಗೌರವದ ವಿಷಯದಲ್ಲಿ ನಾವು ಶ್ರೀನಿವಾಸ್ ಅವರ್ನು ಮಾದರಿಯಾಗಿಸಿಕೊಂಡು ಬದುಕಲು ಪ್ರಯತ್ನಿಸಬೇಕೆಂದು ತಿಳಿಸಿದ್ದಾರೆ.