ಅಮೆರಿಕಾ: ಹೆಚ್-1ಬಿ ವೀಸಾ: ಅರ್ಜಿ ಸಲ್ಲಿಕೆ ಏಪ್ರಿಲ್ 3ರಿಂದ ಆರಂಭ

2018ನೇ ಸಾಲಿನ ಹೆಚ್-1ಬಿ ಉದ್ಯೋಗ ವೀಸಾಕ್ಕೆ ಅರ್ಜಿಗಳನ್ನು ಸ್ವೀಕರಿಸಲು ಅಮೆರಿಕಾ ಸರ್ಕಾರ ಆರಂಭಿಸಿದ್ದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ವಾಷಿಂಗ್ಟನ್: 2018ನೇ ಸಾಲಿನ ಹೆಚ್-1ಬಿ ಉದ್ಯೋಗ ವೀಸಾಕ್ಕೆ ಅರ್ಜಿಗಳನ್ನು ಸ್ವೀಕರಿಸಲು ಅಮೆರಿಕಾ ಸರ್ಕಾರ ಆರಂಭಿಸಿದ್ದು, ಏಪ್ರಿಲ್ 3ರಿಂದ ಆರಂಭವಾಗಲಿದೆ. ಆದರೆ ಯಾವ ದಿನಾಂಕದವರೆಗೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ ಎಂದು ಅಮೆರಿಕ ನಾಗರಿಕತ್ವ ಮತ್ತು ವಲಸೆ ಸೇವೆ ಇಲಾಖೆ ಅಧಿಕೃತ ಘೋಷಣೆ ಮಾಡಿಲ್ಲ.
ಸಾಮಾನ್ಯವಾಗಿ ಇಲಾಖೆ ಮೊದಲ 5 ದಿನಗಳ ವ್ಯವಹಾರ ದಿನಗಳಲ್ಲಿ ಅರ್ಜಿಗಳನ್ನು ಸ್ವೀಕರಿಸುತ್ತದೆ. ಕಳೆದ ಕೆಲ ವರ್ಷಗಳಿಂದ ಸುಮಾರು 80,000ಕ್ಕೂ ಅಧಿಕ ಹೆಚ್-1ಬಿ ವೀಸಾ ಕೋರಿ ಅರ್ಜಿಗಳು ಬಂದಿದ್ದವು.
ಸಾಮಾನ್ಯ ವಿಭಾಗದಲ್ಲಿ 65,000 ವೀಸಾಗಳನ್ನು ನೀಡಿದರೆ ಅಮೆರಿಕಾದ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳುವ ವಿದೇಶಿ ವಿದ್ಯಾರ್ಥಿಗಳಿಗೆ 20,000 ವೀಸಾ ಜಾರಿಗೊಳಿಸಲಾಗುತ್ತದೆ.
ಸಂಶೋಧನೆ ಮತ್ತು ವಿಜ್ಞಾನ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯಲು ಹೋಗುವವರಿಗೆ ಹೆಚ್-1ಬಿ ವೀಸಾ ನೀಡಿಕೆಯಲ್ಲಿ ವಿನಾಯ್ತಿ ನೀಡಲಾಗುತ್ತದೆ. ಆದರೆ ತ್ವರಿತ ವೀಸಾ ನೀಡಿಕೆಗೆ ತಾತ್ಕಾಲಿಕ ತಡೆ ನೀಡಿರುವುದರಿಂದ ವೃತ್ತಿಪರರ ವೀಸಾಕ್ಕೆ ಈ ವರ್ಷ ತಡೆ ಬಿದ್ದಿದೆ. 
ಅಮೆರಿಕಾದಲ್ಲಿ 2018ನೇ ಸಾಲಿನ ಆರ್ಥಿಕ ವರ್ಷ ಅಕ್ಟೋಬರ್ 1ಕ್ಕೆ ಆರಂಭವಾಗುತ್ತದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com