ಪಾಕಿಸ್ತಾನದಲ್ಲಿ ಕಾನೂನಾದ 'ಹಿಂದೂ ವಿವಾಹ ಕಾಯ್ದೆ'

ಪಾಕಿಸ್ತಾನದಲ್ಲಿ ಹಿಂದೂಗಳ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವ ಐತಿಹಾಸಿಕ ಹಿಂದೂ ವಿವಾಹ ಮಸೂದೆ-2017ಕ್ಕೆ ಅಧ್ಯಕ್ಷ ಮಮ್ನೂನ್ ಹುಸೇನ್ ಅವರು ಅಂಕಿತ ಹಾಕಿದ್ದು, ಕಾಯ್ದೆಯಾಗಿ ಸೋಮವಾರ ಜಾರಿಯಾಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹಿಂದೂಗಳ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವ ಐತಿಹಾಸಿಕ ಹಿಂದೂ ವಿವಾಹ ಮಸೂದೆ-2017ಕ್ಕೆ ಅಧ್ಯಕ್ಷ ಮಮ್ನೂನ್ ಹುಸೇನ್ ಅವರು ಅಂಕಿತ ಹಾಕಿದ್ದು, ಕಾಯ್ದೆಯಾಗಿ ಸೋಮವಾರ ಜಾರಿಯಾಗಿದೆ. 
ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರ ಸಲಹೆಯ ಮೇರೆಗೆ ಅಧ್ಯಕ್ಷರು ಮಸೂದೆಗೆ ಅಂಕಿತ ಹಾಕಿದ್ದಾರೆಂದು ಪಾಕಿಸ್ತಾನ ಪ್ರಧಾನಮಂತ್ರಿಗಳ ಕಚೇರಿ ತಿಳಿಸಿದೆ. 
ಜಾರಿಯಾಗಿರುವ ಕಾಯ್ದೆ ಹಿಂದೂಗಳ ಕುಟುಂಬಕ್ಕೆ ಕಾನೂನಾತ್ಮಕ ಅಧಿಕಾರ ನೀಡುವುದರ ಜೊತೆಗೆ, ತಾಯಂದಿರು ಮತ್ತು ಮಕ್ಕಳಿಗೆ ರಕ್ಷಣೆ ಒದಗಿಸಲಿದೆ. ಇದರಂತೆ ಹಿಂದೂಗಳು ತಮ್ಮ ಸಂಪ್ರದಾಯದಂತೆ ವಿವಾಹ ಆಗಬಹುದಾಗಿದೆ. ವಿವಾಹ ನೋಂದಣಿಗೆ ಸರ್ಕಾರ ರೆಜಿಸ್ಟ್ರಾರ್ ಗಳನ್ನು ನೇಮಿಸಲಿದೆ. ಅಲ್ಲದೆ, ಮರುವಿವಾಹ ಮತ್ತು ವಿಚ್ಛೇದನಕ್ಕೂ ಅವಕಾಶವನ್ನು ಕಲ್ಪಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com