45 ಮಂದಿ ಪ್ರಯಾಣಿಕರಿದ್ದ ವಿಮಾನ ದಕ್ಷಿಣ ಸೂಡಾನ್ ನಲ್ಲಿ ಪತನ; 14 ಮಂದಿಗೆ ಗಾಯ

ಸಿಬ್ಬಂದಿ ಸೇರಿ ಸುಮಾರು 45 ಮಂದಿ ಪ್ರಯಾಣಿಕರಿದ್ದ ವಿಮಾನ ದಕ್ಷಿಣ ಸುಡಾನ್ ನಲ್ಲಿ ಪತನವಾಗಿದ್ದು, ಸುಮಾರು 14ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜುಬಾ: ಸಿಬ್ಬಂದಿ ಸೇರಿ ಸುಮಾರು 45 ಮಂದಿ ಪ್ರಯಾಣಿಕರಿದ್ದ ವಿಮಾನ ದಕ್ಷಿಣ ಸುಡಾನ್ ನಲ್ಲಿ ಪತನವಾಗಿದ್ದು, ಸುಮಾರು 14ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ದಕ್ಷಿಣ ಸುಡಾನ್ ವಾ ನಗರದತ್ತ ಪ್ರಯಾಣ ಮಾಡಿದ್ದ ವಿಮಾನ ಗೇಬ್ರಿಯಲ್ ನ್ಗಾಂಗ್ ವಿಮಾನ ನಿಲ್ದಾಣಗಲ್ಲಿ ಇಳಿಯಬೇಕಿತ್ತು. ಈ ವೇಳೆ ರನ್ ವೇ ನಲ್ಲಿ ವಿಮಾನ ಮುಗ್ಗರಿಸಿದ್ದು, ವಿಮಾನದಲ್ಲಿದ್ದ ಪ್ರಯಾಣಿಕರ ಪೈಕ 14 ಮಂದಿಗೆ  ಗಾಯವಾಗಿದೆ ಎಂದು ತಿಳಿದುಬಂದಿದೆ. ಇನ್ನು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದವರ ಕುರಿತು ಈ ವರೆಗೂ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ವಿಮಾನ ಅಪಘಾತಕ್ಕೆ ಹವಾಮಾನ ವೈಪರೀತ್ಯವೇ ಕಾರಣ ಎಂದು  ಹೇಳಲಾಗುತ್ತಿದ್ದು, ರನ್ ವೇ ಸರಿಯಾಗಿ ಕಾಣದ ಕಾರಣ ಪೈಲಟ್ ತಪ್ಪಾಗಿ ವಿಮಾನವನ್ನು ಇಳಿಸಿದ್ದೇ ಅಪಘಾತಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ವಿಮಾನದಲ್ಲಿ 5 ಮಂದಿ ಸಿಬ್ಬಂದಿ, 40 ಮಂದಿ ಪ್ರಯಾಣಿಕರು ಸೇರಿ ಒಟ್ಟು 45 ಮಂದಿ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೌತ್ ಸುಪ್ರೀಂ ಏರ್ ಲೈನ್ಸ್ ಗೆ ವಿಮಾನ ಇದಾಗಿದ್ದು, ಘಟನಾ ಸ್ಥಳಕ್ಕೆ ಹತ್ತಕ್ಕೂ ಹೆಚ್ಚು ಆ್ಯಂಬುಲೆನ್ಸ್  ಗಳು ದೌಡಾಯಿಸಿ ಕಾರ್ಯಾಚರಣೆ ನಡೆಸುತ್ತಿವೆ.

ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com