2040ರ ವೇಳೆಗೆ ವಿಶ್ವದಲ್ಲಿ 600 ದಶಲಕ್ಷ ಮಕ್ಕಳಿಗೆ ನೀರಿನ ಕೊರತೆ: ವಿಶ್ವಸಂಸ್ಥೆ ವರದಿ

2040ರ ವೇಳೆಗೆ ವಿಶ್ವಾದ್ಯಂತ ಪ್ರತಿ ನಾಲ್ಕು ಜನ ಮಕ್ಕಳಲ್ಲಿ ಒಬ್ಬರು ಮತ್ತು ಸುಮಾರು 600...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ವಿಶ್ವಸಂಸ್ಥೆ : 2040ರ ವೇಳೆಗೆ ವಿಶ್ವಾದ್ಯಂತ ಪ್ರತಿ ನಾಲ್ಕು ಜನ ಮಕ್ಕಳಲ್ಲಿ ಒಬ್ಬರು ಮತ್ತು ಸುಮಾರು 600 ದಶಲಕ್ಷ ಮಂದಿ ಮಕ್ಕಳು ನೀರಿನ ಕೊರತೆಯನ್ನು ಎದುರಿಸಲಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ.
ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ ನಿನ್ನೆ ಹೊರಡಿಸಿರುವ ವರದಿಯಲ್ಲಿ ಈ ವಿಷಯ ತಿಳಿದುಬಂದಿದೆ ಎಂದು ಎಪೆ ನ್ಯೂಸ್ ವರದಿ ಮಾಡಿದೆ.
ಸುರಕ್ಷಿತ ಕುಡಿಯುವ ನೀರು ಮತ್ತು ಬದಲಾಗುತ್ತಿರುವ ಹವಾಮಾನ ಯಾವ ರೀತಿ ಜನಜೀವನದ ಮೇಲೆ ಪರಿಣಾಮ ಬೀರಬಹುದು ಎಂಬುದನ್ನು ಯುನಿಸೆಫ್ ಎಚ್ಚರಿಕೆ ನೀಡಿದೆ.
ನೀರು ಜನಜೀವನಕ್ಕೆ ಅತ್ಯಂತ ಅಗತ್ಯ. ಅದಿಲ್ಲದಿದ್ದರೆ ಬೆಳವಣಿಗೆ ಸಾಧ್ಯವಿಲ್ಲ. ಆದರೆ ಜಗತ್ತಿನಾದ್ಯಂತ ಮಕ್ಕಳು ಸುರಕ್ಷಿತ ನೀರಿಗೆ ಪರದಾಡುತ್ತಿದ್ದಾರೆ. ಇದು ಅವರ ಆರೋಗ್ಯದ ಮತ್ತು ಭವಿಷ್ಯದ ಜನಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಯುನಿಸೆಫ್ ಕಾರ್ಯಕಾರಿ ನಿರ್ದೇಶಕ ಆಂಥೊನಿ ಲೆಕ್ ತಿಳಿಸಿದ್ದಾರೆ.
ವಿಶ್ವದ ರಾಷ್ಟ್ರಗಳು ಸಾಮೂಹಿಕ ಕ್ರಮ ಕೈಗೊಳ್ಳದಿದ್ದರೆ ನೀರಿನ ಕೊರತೆಯನ್ನು ನೀಗಿಸಲು ಸಾಧ್ಯವಿಲ್ಲ ಎಂದು ಕೂಡ ಅವರು ಎಚ್ಚರಿಕೆ ನೀಡಿದ್ದಾರೆ.
ಜನಸಂಖ್ಯಾ ಸ್ಪೋಟ ಮತ್ತು ಹೆಚ್ಚುತ್ತಿರುವ ಬೇಡಿಕೆ ಮತ್ತು ಖರ್ಚಿನಿಂದಾಗಿ ನೀರು ಸಿಗುವ ಸೌಲಭ್ಯ ಕಡಿಮೆಯಾಗುತ್ತಿದ್ದು ಈಗಾಗಲೇ ವಿಶ್ವದ 36 ದೇಶಗಳಲ್ಲಿ ನೀರಿಗೆ ಕೊರತೆಯುಂಟಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಹೆಚ್ಚುತ್ತಿರುವ ಉಷ್ಣತೆ, ಸಮುದ್ರದ ಮಟ್ಟ ಏರುತ್ತಿರುವುದು, ಮಂಜುಗಡ್ಡೆ ಕರಗುವಿಕೆ ಮತ್ತು ಬರಗಾಲ ಹೆಚ್ಚಳ ಮೊದಲಾದವು ನೀರಿನ ಕೊರತೆಗೆ ಕಾರಣವಾಗಿದೆ.
ಇಂದು ವಿಶ್ವಾದ್ಯಂತ 663 ದಶಲಕ್ಷ ಮಕ್ಕಳು ನೀರಿಲ್ಲದೆ ಕಂಗಾಲಾಗುತ್ತಿದ್ದಾರೆ. 800ಕ್ಕೂ ಹೆಚ್ಚು ಮಕ್ಕಳು 5 ವರ್ಷಕ್ಕಿಂತ ಕೆಳಗಿನವರು ಪ್ರತಿದಿನ ಅತಿಸಾರ ಕಲುಷಿತ ನೀರನ್ನು ಸೇವಿಸಿ ಹಾಗು ಅಸಮರ್ಪಕ ನೈರ್ಮಲ್ಯ ಮತ್ತು ಸ್ವಚ್ಛತೆಯಿಂದ ಬಳಲುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com