ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಆ್ಯಪಲ್‌ ನ ಮ್ಯಾಕ್‌ ಕಂಪ್ಯೂಟರ್‌ ಗೂ ಕನ್ನ ಹಾಕಿದ ಸಿಐಎ!

ಆ್ಯಪಲ್ ಸಂಸ್ಥೆಯ ಸುರಕ್ಷಿತ ಮ್ಯಾಕ್ ಕಂಪ್ಯೂಟರ್ ಗಳ ಮೇಲೂ ಸಿಐಎ ದಾಳಿ ಮಾಡಿ ಅದರ ಆಪರೇಟಿಂಗ್ ಸಿಸ್ಟಮ್ ಹ್ಯಾಕ್ ಮಾಡಿತ್ತು ಎಂಬ ವರದಿಯನ್ನು ವಿಕಿಲೀಕ್ಸ್ ಬಿಡುಗಡೆ ಮಾಡಿದೆ.

ವಾಷಿಂಗ್ಟನ್‌: ಸ್ಯಾಮ್ ಸಂಗ್ ಟಿವಿ ಮೂಲಕ ಅಮೆರಿಕದ ಗುಪ್ತಚರ ಸಂಸ್ಥೆ ಗೂಢಚಾರಿಕೆ ನಡೆಸುತ್ತಿದೆ ಎಂಬ ಸ್ಫೋಟಕ ಮಾಹಿತಿ ಹೊರಹಾಕಿದ್ದ ವಿಕಿಲೀಕ್ಸ್ ಇದೀಗ ಆ್ಯಪಲ್ ಸಂಸ್ಥೆಗೆ ಶಾಕ್ ನೀಡಿದ್ದು, ಆ್ಯಪಲ್ ಸಂಸ್ಥೆಯ ಸುರಕ್ಷಿತ  ಮ್ಯಾಕ್ ಕಂಪ್ಯೂಟರ್ ಗಳ ಮೇಲೂ ಸಿಐಎ ದಾಳಿ ಮಾಡಿ ಅದರ ಆಪರೇಟಿಂಗ್ ಸಿಸ್ಟಮ್ ಹ್ಯಾಕ್ ಮಾಡಿತ್ತು ಎಂಬ ವರದಿಯನ್ನು ಬಿಡುಗಡೆ ಮಾಡಿದೆ.

ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ, ಆ್ಯಪಲ್‌ ಸಂಸ್ಥೆಯ ಮ್ಯಾಕ್‌ ಕಂಪ್ಯೂಟರ್‌ ನ ಆಪರೇಟಿಂಗ್‌ ಸಿಸ್ಟಮ್‌ ಅನ್ನೂ ಹ್ಯಾಕ್‌ ಮಾಡಿತ್ತು ಎಂಬ ವಿಚಾರ ವಿಕಿಲೀಕ್ಸ್‌ ದಾಖಲೆಯಿಂದ ಬಹಿರಂಗವಾಗಿದ್ದು, ಕಂಪ್ಯೂಟರ್‌ ನಲ್ಲಿ ಆಪರೇಟಿಂಗ್‌  ಸಿಸ್ಟಮ್‌ ಅನ್ನು ಮರು ಸಂಯೋಜನೆ ಮಾಡಿದರೂ, ಅದರಲ್ಲಿದ್ದ ಮಾಹಿತಿಯನ್ನು ಪಡೆಯಬಲ್ಲಂಥಹ ಬಗ್‌ ಅನ್ನು ಸಿಐಎ ತಯಾರಿಸಿತ್ತು. ವಿಕಿಲೀಕ್ಸ್ ತನ್ನ ವರದಿಯಲ್ಲಿ ಹೇಳಿದೆ. 2008ರಿಂದಲೂ ಆ್ಯಪಲ್‌ ನ ಪೂರೈಕೆ ಮತ್ತು ವಿತರಣೆ  ಜಾಲದಲ್ಲಿರುವ ಹೊಸ ಮತ್ತು ಬಳಕೆಯಾಗದ ಐಫೋನ್‌ ಗಳಿಗೆ ಕನ್ನ ಹಾಕುವುದರಲ್ಲಿ ಸಿಐಎ ಯಶಸ್ವಿಯಾಗಿತ್ತು. 2008ರಿಂದ 2013ರವರೆಗೂ ಸಿಐಎ ಆ್ಯಪಲ್ ನ ಮ್ಯಾಕ್ ಕಂಪ್ಯೂಟರ್ ಗಳು ಮತ್ತು ಐಫೋನ್ ಗಳನ್ನು ಹ್ಯಾಕ್  ಮಾಡಿ ಅವುಗಳ ಆಪರೇಟಿಂಗ್ ಸಿಸ್ಟಮ್ ಮೇಲೆ ನಿಯಂತ್ರಣ ಸಾಧಿಸಿತ್ತು ಎಂದು ವಿಕಿಲೀಕ್ಸ್‌ ಮಾಹಿತಿ ಬಹಿರಂಗಪಡಿಸಿದೆ.

ಇದು ಹಳೆಯ ಕಡತ, ಬಹಳ ಹಿಂದೆಯೇ ಕಂಪ್ಯೂಟರ್ ದೋಷ ಸರಿಪಡಿಸಲಾಗಿದೆ ಎಂದ ಆ್ಯಪಲ್ ಸಂಸ್ಥೆ
ಇನ್ನು ವಿಕಿಲೀಕ್ಸ್ ವರದಿ ಬಹಿರಂಗವಾಗುತ್ತಿದ್ದಂತೆಯೇ ಗ್ರಾಹಕರಲ್ಲಿ ಮೂಡಬಹುದಾಗಿದ್ದ ಆತಂಕವನ್ನು ಶಮನ ಮಾಡುವ ನಿಟ್ಟಿನಲ್ಲಿ ಆ್ಯಪಲ್ ಸಂಸ್ಥೆ ಪ್ರತಿಕ್ರಿಯಿಸಿದ್ದು, ವಿಕಿಲೀಕ್ಸ್ ಬಹಿರಂಗ ಪಡಿಸಿರುವ ಕಡತ ತುಂಬಾ  ಹಳೆಯದಾಗಿದ್ದು, ಬಹಳ ದಿನಗಳ ಹಿಂದೆಯೇ ಮ್ಯಾಕ್ ಕಂಪ್ಯೂಟರ್ ಗಳು ಮತ್ತು ಐಫೋನ್ ನಲ್ಲಿನ ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದೆ. ಆ ಮೂಲಕ ಯಾರೂ ಕೂಡ ಇವುಗಳನ್ನು ಹ್ಯಾಕ್ ಮಾಡಲಾಗದಂತೆ ಮುಂಜಾಗ್ರತಾ  ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆ್ಯಪಲ್ ಸಂಸ್ಥೆ ಸ್ಪಷ್ಟಪಡಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com