ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜನಾಂಗೀಯ ದ್ವೇಷದ ವಿರುದ್ಧ ಕೈಜೋಡಿಸಿದ ಯಹೂದಿಗಳು, ಮುಸ್ಲಿಮರು, ಭಾರತೀಯ ಅಮೆರಿಕನ್ನರು

ಅಮೆರಿಕಾದಲ್ಲಿ ಹೆಚ್ಚುತ್ತಿರುವ ಜನಾಂಗೀಯ ದ್ವೇಷದ ಅಪರಾಧಗಳ ವಿರುದ್ಧ ಪ್ರತಿಭಟಿಸಲು ಯಹೂದಿ, ಮುಸ್ಲಿಂ ಮತ್ತು ಭಾರತೀಯ ಅಮೇರಿಕನ್ ಸಮುದಾಯಕ್ಕೆ ಸೇರಿದ ಜನರು ವಾಯುವ್ಯ ವಾಷಿಂಗ್ಟನ್
Published on
ವಾಷಿಂಗ್ಟನ್: ಅಮೆರಿಕಾದಲ್ಲಿ ಹೆಚ್ಚುತ್ತಿರುವ ಜನಾಂಗೀಯ ದ್ವೇಷದ ಅಪರಾಧಗಳ ವಿರುದ್ಧ ಪ್ರತಿಭಟಿಸಲು ಯಹೂದಿ, ಮುಸ್ಲಿಂ ಮತ್ತು ಭಾರತೀಯ ಅಮೇರಿಕನ್ ಸಮುದಾಯಕ್ಕೆ ಸೇರಿದ ಜನರು ವಾಯುವ್ಯ ವಾಷಿಂಗ್ಟನ್ ನಲ್ಲಿರುವ ಇಸ್ರೇಲ್ ಪೂಜಾಮಂದಿರದ ಮೆಟ್ಟಿಲ ಮೇಲೆ ನೆರೆದು ಸೌಹಾರ್ದತೆಗೆ ಕರೆಕೊಟ್ಟಿದ್ದಾರೆ. 
"ಎಲ್ಲ ಸಮುದಾಯಗಳ, ಜನನಾಂಗಗಳ ಮತ್ತು ಮತಧರ್ಮಗಳ ನಡುವೆ ಶಾಂತಿಗಾಗಿ" ಎಂದು ಶುಕ್ರವಾರ ರಾತ್ರಿಯ ಈ ಕಾರ್ಯಕ್ರಮದಲ್ಲಿ ನೆರೆದಿದ್ದ ರೊಶೆಲ್ ಬರ್ಮನ್ ಹೇಳಿದ್ದಾರೆ. 
"ದ್ವೇಷದ ವಿರುದ್ಧ ನಾವು ಒಗ್ಗಟ್ಟಾಗಿ ನಿಲ್ಲುತ್ತೇವೆ" ಎಂಬ ಘೋಷಣೆಗಳನ್ನು ನೆನೆರೆದಿದ್ದ ಜನರು ಕೂಗಿದ್ದಾರೆ. 
ಭಾರತೀಯರ ವಿರುದ್ಧ ಜನಾಂಗೀಯ ದ್ವೇಷದ ಅಪರಾಧ ಪ್ರಕರಣಗಳು ಹೆಚ್ಚಿದ್ದು, ಇತ್ತೀಚೆಗಷ್ಟೇ ಹೈದರಾಬಾದ್ ಮೂಲದ ಎಂಜಿನಿಯರ್ ಶ್ರೀನಿವಾಸ್ ಎಂಬುವವರನ್ನು ಗುಂಡು ಹಾರಿಸಿ ಕೊಲೆಗೈದಿದ್ದನ್ನು ನೆನಪಿಸಿಕೊಳ್ಳಬಹುದು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com