ಹೋಳಿ ಹಬ್ಬ ಆಚರಣೆ: ಕ್ಷಮೆಯಾಚಿಸುವಂತೆ ಹಿಂದೂ ವಿದ್ಯಾರ್ಥಿಗೆ ಪಾಕ್ ವಿವಿ ಸೂಚನೆ?

ಹೋಳಿ ಹಬ್ಬವನ್ನು ಆಚರಣೆ ಮಾಡಿದ ಕಾರಣಕ್ಕೆ ಹಿಂದೂ ವಿದ್ಯಾರ್ಥಿಯೊಬ್ಬನಿಗೆ ಕ್ಷಣೆಯಾಚಿಸುವಂತೆ ಪಾಕಿಸ್ತಾನ ವಿಶ್ವವಿದ್ಯಾಲಯವೊಂದು ಸೂಚಿಸಿದೆ ಎಂಬ ಸುದ್ದಿಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ...
ಹೋಳಿ ಹಬ್ಬ ಆಚರಣೆ: ಕ್ಷಮೆಯಾಚಿಸುವಂತೆ ಹಿಂದೂ ವಿದ್ಯಾರ್ಥಿಗೆ ಪಾಕ್ ವಿವಿ ಸೂಚನೆ?
ಹೋಳಿ ಹಬ್ಬ ಆಚರಣೆ: ಕ್ಷಮೆಯಾಚಿಸುವಂತೆ ಹಿಂದೂ ವಿದ್ಯಾರ್ಥಿಗೆ ಪಾಕ್ ವಿವಿ ಸೂಚನೆ?
ಇಸ್ಲಾಮಾಬಾದ್: ಹೋಳಿ ಹಬ್ಬವನ್ನು ಆಚರಣೆ ಮಾಡಿದ ಕಾರಣಕ್ಕೆ ಹಿಂದೂ ವಿದ್ಯಾರ್ಥಿಯೊಬ್ಬನಿಗೆ ಕ್ಷಣೆಯಾಚಿಸುವಂತೆ ಪಾಕಿಸ್ತಾನ ವಿಶ್ವವಿದ್ಯಾಲಯವೊಂದು ಸೂಚಿಸಿದೆ ಎಂಬ ಸುದ್ದಿಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 
ಪಾಕಿಸ್ತಾನದ ಜಮ್ಶೊರೊ ಪ್ರದೇಶದಲ್ಲಿರುವ ಸಿಂಧ್ ವಿಶ್ವವಿದ್ಯಾಲಯವೊಂದು ಹೋಳಿ ಹಬ್ಬ ಆಚರಣೆ ಮಾಡಿದ ಕಾರಣಕ್ಕೆ ರಾಜ್ ದೀಪಕ್ ಎಂಬ ಹಿಂದೂ ವಿದ್ಯಾರ್ಥಿಗೆ ಕ್ಷಮಾಪಣಾ ಪತ್ರ ಸಲ್ಲಿಕೆ ಮಾಡುವಂತೆ ಸೂಚಿಸಿದೆ ಎಂದು ಹೇಳಲಾಗುತ್ತಿದೆ. 
ವಿದ್ಯಾರ್ಥಿಯ ಐಡಿ ಕಾರ್ಡ್ ನ್ನು ಕಸಿದುಕೊಂಡಿರುವ ವಿಶ್ವವಿದ್ಯಾಲಯ, ಹೋಳಿ ಹಬ್ಬ ಆಚರಣೆ ಮಾಡಿದ ತಪ್ಪಿಗೆ ವಿಶ್ವವಿದ್ಯಾಲಯಕ್ಕೆ ಕ್ಷಮಾಪಣಾ ಪತ್ರ ಸಲ್ಲಿಕೆ ಮಾಡುವಂತೆ ಸೂಚಿಸಿದ್ದು, ವಿಶ್ವವಿದ್ಯಾಲಯದ ಒತ್ತಡಕ್ಕೆ ಮಣಿದಿರುವ ವಿದ್ಯಾರ್ಥಿ ಇತರೆ ಹಿಂದೂಗಳ ರಕ್ಷಣೆಗಾಗಿ ಕ್ಷಮಾಪಣಾ ಪತ್ರವನ್ನು ಸಲ್ಲಿಸಿದ್ದಾನೆಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ವೊಂದು ಹರಿಹಾಡುತ್ತಿದೆ. ಈ ಪೋಸ್ಟ್ ಹಲವು ಟೀಕೆಗಳು ವ್ಯಕ್ತವಾಗತೊಡಿದ್ದು, ಸಾಕಷ್ಟು ವಿರೋಧಗಳು ವ್ಯಕ್ತವಾಗತೊಡಗಿವೆ. 
ಈ ಸಂಬಂಧ ಪಾಕಿಸ್ತಾನ ಪ್ರತಿಕ್ರಿಯೆ ನೀಡಿದ್ದು, ಆರೋಪಗಳನ್ನು ತಿರಸ್ಕರಿಸಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ. ಆರೋಪ ಸಂಬಂಧ ಸಿಂಧ್ ವಿಶ್ವವಿದ್ಯಾಲಯದ ಜೊತೆಗೆ ಪಾಕಿಸ್ತಾನದ ಅಧಿಕಾರಿಗಳು ಮಾತುಕತೆ ನಡೆಸಿದ್ದು, ವಿವಿ ಅಧಿಕಾರಿಗಳು ಆರೋಪವನ್ನು ತಿರಸ್ಕರಿಸಿದ್ದಾರೆ. ನಾವು ಯಾವುದೇ ವಿದ್ಯಾರ್ಥಿಯನ್ನು ಕ್ಷಮೆಯಾಚಿಸುವಂತೆ ಕೇಳಿಲ್ಲ ಎಂದು ತಿಳಿಸಿದ್ದಾರೆಂದು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com