ತನ್ನ ಸಾವಿನ ಕ್ಷಣಗಳನ್ನು ಸೆರೆ ಹಿಡಿದಿದ್ದಳು ಈ ಸೇನಾ ಫೊಟೊಗ್ರಾಫರ್; 4 ವರ್ಷಗಳ ಬಳಿಕ ಫೋಟೊ ಪ್ರಕಟ

ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಮೆರಿಕಾ ಸೇನಾ ಸಿಬ್ಬಂದಿಯೊಬ್ಬಳು ಮೋರ್ಟಾರ್ ಸ್ಫೋಟದ ವೇಳೆ ತನ್ನ ಸಾವಿನ ಕ್ಷಣಗಳನ್ನು ಸೆರೆ ಹಿಡಿದ್ದ ಫೋಟೋ ಒಂದನ್ನು ಅಮೆರಿಕಾ ಸೇನೆ 4 ವರ್ಷಗಳ ಬಳಿಕ ಪ್ರಕಟಿಸಿದೆ.
ತನ್ನ ಸಾವಿನ ಕ್ಷಣಗಳನ್ನು ಸೆರೆ ಹಿಡಿದಿದ್ದಳು ಈ ಸೇನಾ ಫೊಟೊಗ್ರಾಫರ್
ತನ್ನ ಸಾವಿನ ಕ್ಷಣಗಳನ್ನು ಸೆರೆ ಹಿಡಿದಿದ್ದಳು ಈ ಸೇನಾ ಫೊಟೊಗ್ರಾಫರ್
ಅನಾಪೋಲಿಸ್: ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಮೆರಿಕಾ ಸೇನಾ ಸಿಬ್ಬಂದಿಯೊಬ್ಬಳು ಮೋರ್ಟಾರ್ ಸ್ಫೋಟದ ವೇಳೆ ತನ್ನ ಸಾವಿನ ಕ್ಷಣಗಳನ್ನು ಸೆರೆ ಹಿಡಿದ್ದ ಫೋಟೋ ಒಂದನ್ನು ಅಮೆರಿಕಾ ಸೇನೆ 4 ವರ್ಷಗಳ ಬಳಿಕ ಪ್ರಕಟಿಸಿದೆ. 
ಅಮೆರಿಕಾ ಸೇನೆಯ ವೃತ್ತಿಪರ ಜರ್ನಲ್ ನಲ್ಲಿ ಸೇನಾ ಫೋಟೊಗ್ರಾಫರ್ ಹಿಲ್ಡಾ ಕ್ಲೇಟನ್ ತಾವೇ ಸೆರೆ ಹಿಡಿದಿದ್ದ ತಮ್ಮ ಸಾವಿನ ಕೊನೆಯ ಕ್ಷಣಗಳ ಫೋಟೊ ಪ್ರಕಟಗೊಂಡಿದ್ದು, ಯುದ್ಧ ತರಬೇತಿ ಅಥವಾ ಯುದ್ಧಗಳಲ್ಲಿ, ಸೇನೆಯಲ್ಲಿ ಎದುರಾಗುವ ಸಂದರ್ಭಗಳಲ್ಲಿ ಮಹಿಳಾ ಸಿಬ್ಬಂದಿಗಳು ಯಾವೆಲ್ಲಾ ರೀತಿಯ ಅಪಾಯಕರ ಸನ್ನಿವೇಶ ಎದುರಿಸಬೇಕಾಗುತ್ತದೆ ಎಂಬುದನ್ನು ವಿಶ್ಲೇಷಿಸಲಾಗಿದೆ. 
ಲೈವ್-ಫೈರ್ ತರಬೇತಿ ವೇಳೆಯಲ್ಲಿ ಆಕಸ್ಮಿಕವಾಗಿ ಮೋರ್ಟಾರ್ ಸ್ಫೋಟ ಸಂಭವಿಸಿದ್ದು, ಆ ಕ್ಷಣಗಳನ್ನು ಹಿಲ್ಡಾ ಕ್ಲೇಟನ್ ಸೆರೆ ಹಿಡಿದ್ದರು. ಈ ಸ್ಫೋಟದಲ್ಲಿ 4 ಅಫ್ಘಾನಿಸ್ತಾನಿ ಯೋಧರು ಮೃತಪಟ್ಟಿದ್ದರು. ಇವರೊಂದಿಗೆ ಅಮೆರಿಕಾ ಸೇನೆಯ ಹಿಲ್ಡಾ ಕ್ಲೇಟನ್ ಸಹ ಒಬ್ಬರಾಗಿದ್ದರು. 
ಕಾಂಬಾಕ್ಟ್ ಕ್ಯಾಮರಾ ಎಂದು ಕರೆಯಲಾಗುವ ಫೋರ್ಟ್ ಮೀಡ್, ಮೇರಿಲ್ಯಾಂಡ್ ಮೂಲದ 55 ನೇ ಸಿಗ್ನಲ್ ಕಂಪನಿಯ ಸದಸ್ಯೆಯಾಗಿದ್ದ ಈಕೆಗೆ ಮೃತಪಟ್ಟಾಗ 22 ವರ್ಷ ವಯಸ್ಸಾಗಿತ್ತು. ಆಕೆಯ ಕುಟುಂಬದವರ ಅನುಮತಿ ಪಡೆದು ಕೊನೆಯ ಕ್ಷಣಗಳ ಫೋಟೊವನ್ನು ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com