ತಂದೆ ಸಾವಿನ ಸೇಡಿಗೆ ಲಾಡೆನ್ ಪುತ್ರನ ಸಂಚು; ಅಮೆರಿಕ ಗುಪ್ತಚರ ಇಲಾಖೆ ಎಚ್ಚರಿಕೆ

ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಸಾವಿಗೆ ಪ್ರತೀಕವಾಗಿ ಭಾರಿ ವಿಧ್ವಂಸಕ ಕೃತ್ಯ ನಡೆಸಲು ಆತನ ಪುತ್ರ ಹಮ್ಜಾ ಬಿನ್ ಲಾಡೆನ್ ಸಂಚು ರೂಪಿಸಿದ್ದಾನೆ ಎಂದು ಅಮೆರಿಕ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಸಾವಿಗೆ ಪ್ರತೀಕವಾಗಿ ಭಾರಿ ವಿಧ್ವಂಸಕ ಕೃತ್ಯ ನಡೆಸಲು ಆತನ ಪುತ್ರ ಹಮ್ಜಾ ಬಿನ್ ಲಾಡೆನ್ ಸಂಚು ರೂಪಿಸಿದ್ದಾನೆ ಎಂದು ಅಮೆರಿಕ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಪಾಕಿಸ್ತಾನದ ಅಬೋಟಾಬಾದ್ ನಲ್ಲಿರುವ ಲಾಡೆನ್ ನಿವಾಸದ ಮೇಲೆ ಅಮೆರಿಕದ ನೇವಿ ಸೀಲ್ ಪಡೆ ದಾಳಿ ಮಾಡಿದ್ದ ಸಂದರ್ಭದಲ್ಲಿ ಲಭ್ಯವಾದ ದಾಖಲೆಗಳ ಅನ್ವಯ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್ ಕೂಡ ಉಗ್ರ  ಸಂಘಟೆನೆಯಲ್ಲಿ ತೊಡಗಿಕೊಂಡಿದ್ದ. ತನ್ನ ತಂದೆ ಸಾವಿನ ಸೇಡಿಗಾಗಿ ಹಮ್ಜಾ ಬಿನ್ ಲಾಡೆನ್ ಕಾದಿದ್ದು, ಇದೀಗ ಬಹುದೊಡ್ಡ ಅಲ್ ಖೈದಾ ಉಗ್ರ ಸಂಘಟನೆ ಕಟ್ಟಿ ಅದರ ಮೂಲಕ ಬಹುದೊಡ್ಡ ದಾಳಿ ನಡೆಸಿ ತಂದೆ ಸಾವಿನ ಸೇಡು  ತೀರಿಸಿಕೊಳ್ಳಲು ಹೊಂಚು ಹಾಕಿದ್ದಾನೆ ಎಂದು ತಿಳಿದುಬಂದಿದೆ.

ಈ ಬಗ್ಗ ಸ್ವತಃ ಅಮೆರಿಕದ ತನಿಖಾ ಸಂಸ್ಥೆ ಎಫ್ ಬಿಐ ಏಜೆಂಟ್ ಅಲಿ ಸೌಫಾನ್ ಅವರು ಮಾಹಿತಿ ನೀಡಿದ್ದು, ಈ ಹಿಂದೆಂದಿಗಿಂತಲೂ ಅತೀ ದೊಡ್ಡ ಪ್ರಮಾಣದಲ್ಲಿ ಉಗ್ರ ಸಂಘಟನೆ ಕಟ್ಟಲು ಹಮ್ಜಾ ಬಿನ್ ಲಾಡೆನ್ ಮುಂದಾಗಿದ್ದು, ತನ್ನ  ತಂದೆ ಕಾಲದಲ್ಲಿದ್ದ ಸಂಘಟನೆಗಿಂತಲೂ ಬಲಿಷ್ಠ ಮತ್ತು ದೊಡ್ಡ ಗಾತ್ರದ ಸಂಘಟನೆಯ ನಾಯಕತ್ವ ವಹಿಸಲು ತುದಿಗಾಲಲ್ಲಿ ನಿಂತಿದ್ದಾನೆ ಎಂದು ಹೇಳಿದ್ದಾರೆ. 2001 ಸೆಪ್ಟೆಂಬರ್ 11ರ ದಾಳಿ ಬಳಿಕ ಉಗ್ರ ಸಂಘಟನೆಗಳ ಕುರಿತು  ತನಿಖೆ ನಡೆಸುತ್ತಿರುವ ಎಫ್ ಬಿಐ ಏಜೆಂಟ್ ಅಲಿ ಸೌಫಾನ್ ಸಿಬಿಎಸ್ ಗೆ ನೀಡಿದ ಸಂದರ್ಶನದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.

ಹಮ್ಜಾ ಬಿನ್ ಲಾಡೆನ್ ನ ವಯಸ್ಸು ಪ್ರಸ್ತುತ 28 ವರ್ಷಗಳಾಗಿದ್ದು, ಆತನ ತಂದೆ ಬಿನ್ ಲಾಡೆನ್ ಸತ್ತ ಸಂದರ್ಭದಲ್ಲಿ ಆತನ ವಯಸ್ಸು 22 ವರ್ಷ ಆಗಿತ್ತು ಎಂದು ಹೇಳಿದ್ದಾರೆ. ಕಳೆದ 2 ವರ್ಷಗಳಲ್ಲಿ ಹಮ್ಜಾ ಬಿನ್ ಲಾಡೆನ್ 2 ಆಡಿಯೋ  ಟೇಪ್ ಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ತಮ್ಮ ತಂದೆ ಹಾಕಿಕೊಟ್ಟ ಜಿಹಾದ್ ಮಾರ್ಗದಲ್ಲೇ ನಡೆಯುವುದು ಆತನ ಗುರಿಯಾಗಿದೆ ಎಂದು ಹೇಳಿಕೊಂಡಿದ್ದಾನೆ. ಅಂತೆಯೇ ಮತ್ತೊಂದು ಟೇಪ್ ನಲ್ಲಿ ಅಮೆರಿಕ ಪ್ರಜೆಗಳೇ ನಾವು  ಬರುತ್ತಿದ್ದೇವೆ. ನಮ್ಮ ಬರುವಿಕೆ ನಿಮಗೆ ಖಂಡಿತಾ ಅನುಭವವಾಗುತ್ತದೆ. ನಮ್ಮ ತಂದೆ ಸಾವಿಗೆ ಖಂಡಿತಾ ಸೇಡು ತೀರಿಸಿಕೊಳ್ಳುತ್ತೇವೆ. ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಲ್ಲಿ ನೀವು ನಡೆಸುತ್ತಿರುವ ದೌರ್ಜನ್ಯಕ್ಕೆ ಖಂಡಿತಾ  ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಹೇಳಿದ್ದ ಎಂದು ಏಜೆಂಟ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com