ವಿವಾದಿತ ದಕ್ಷಿಣ ಚೀನಾ ಸಮುದ್ರದ ದ್ವೀಪದಲ್ಲಿ ರಾಕೆಟ್ ಲಾಂಚರ್ ನ್ನು ಸ್ಥಾಪಿಸಿದ ಚೀನಾ!

ವಿವಾದಿತ ದಕ್ಷಿಣ ಚೀನಾ ಸಮುದ್ರದ ದ್ವೀಪದಲ್ಲಿ ಚೀನಾ ರಾಕೆಟ್ ಲಾಂಚರ್ ನ್ನು ಸ್ಥಾಪಿಸಿದೆ. ಈ ಬಗ್ಗೆ ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ವರದಿ ಮಾಡಿದೆ.
ದಕ್ಷಿಣ ಚೀನಾ ಸಮುದ್ರ
ದಕ್ಷಿಣ ಚೀನಾ ಸಮುದ್ರ
 ಬೀಜಿಂಗ್: ವಿವಾದಿತ ದಕ್ಷಿಣ ಚೀನಾ ಸಮುದ್ರದ ದ್ವೀಪದಲ್ಲಿ ಚೀನಾ ರಾಕೆಟ್ ಲಾಂಚರ್ ನ್ನು ಸ್ಥಾಪಿಸಿದೆ. ಈ ಬಗ್ಗೆ ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ವರದಿ ಮಾಡಿದೆ. 
ವಿಯೆಟ್ನಾಂ ನ ಸೇನಾ ಪಡೆಯನ್ನು ಹಿಮ್ಮೆಟ್ಟಿಸಲು ಚೀನಾ ವಿವಾದಿತ ಪ್ರದೇಶದಲ್ಲಿ ರಾಕೆಟ್ ಲಾಂಚರ್ ನ್ನು ಸ್ಥಾಪಿಸಿದ್ದು, ರಕ್ಷಣೆಗಾಗಿ ಮಾತ್ರ ಈ ಕ್ರಮ ಸೀಮಿತವಾಗಿರಲಿದೆ ಎಂದು ಹೇಳಿದ್ದು, ತನ್ನ ಪ್ರದೇಶದಲ್ಲಿ ತನ್ನಿಷ್ಟದಂತೆ ಕ್ರಮ ಕೈಗೊಳ್ಳಬಹುದೆಂದು ಚಿನಾ ಸಮರ್ಥನೆ ನೀಡಿದೆ. 
ಚೀನಾ ನಡೆಯನ್ನು ಅಮೆರಿಕಾ ಟೀಕಿಸಿದ್ದು, ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ನಿಯಮಿತ ನೌಕಾ ತಾಲೀಮು ನಡೆಸುತ್ತಿರುವುದನ್ನು ವಿರೋಧಿಸಿದೆ. ದಕ್ಷಿಣ ಚೀನಾ ಸಮುದ್ರ ಪ್ರದೇಶವನ್ನು ತನ್ನದೆಂದು ಪ್ರತಿಪಾದಿಸುತ್ತಿರುವ ಚೀನಾ ನಿಲುವನ್ನು ಫಿಲಿಪೈನ್ಸ್ ವಿಯೆಟ್ನಾಂ, ತೈವಾನ್ ರಾಷ್ಟ್ರಗಳು ವಿರೋಧಿಸುತ್ತಿವೆ. ಆದರೆ ಚೀನಾ ಮಾತ್ರ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನೂ ಉಲ್ಲಂಘಿಸಿ ವಿವಾದಿತ ಪ್ರದೇಶದಲ್ಲಿ ಚಟುವಟಿಕೆ ನಡೆಸುವುದನ್ನು ಮುಂದುವರೆಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com