ಚೀನಾದ ಒಬೋರ್ ಗೆ ಸಡ್ಡು: ಎರಡು ಯೋಜನೆಗಳಿಗೆ ಅಮೆರಿಕಾ ಪುನಶ್ಚೇತನ; ಭಾರತಕ್ಕೆ ಪ್ರಮುಖ ಪಾತ್ರ

ಚೀನಾದ ಮಹತ್ವಾಕಾಂಕ್ಷೆಯ 'ಒಂದು ವಲಯ, ಒಂದು ರಸ್ತೆ' (ಒಬೋರ್) ಶೃಂಗಸಭೆಗೆ ಸಡ್ಡು ಹೊಡೆಯುವುದಕ್ಕಾಗಿ ಅಮೆರಿಕಾ ದಕ್ಷಿಣ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ಚೀನಾದ ಮಹತ್ವಾಕಾಂಕ್ಷೆಯ 'ಒಂದು ವಲಯ, ಒಂದು ರಸ್ತೆ' (ಒಬೋರ್) ಶೃಂಗಸಭೆಗೆ ಸಡ್ಡು ಹೊಡೆಯುವುದಕ್ಕಾಗಿ ಅಮೆರಿಕಾ ದಕ್ಷಿಣ ಹಾಗೂ ಆಗ್ನೇಯ ಏಷ್ಯಾದಲ್ಲಿನ ಎರಡು ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಪುನಶ್ಚೇತನಗೊಳಿಸಿದೆ. ಈ ಎರಡು ಯೋಜನೆಗಳಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತಿದೆ.
2011ರಲ್ಲಿ ಅಂದಿನ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು ಚೆನ್ನೈನಲ್ಲಿ ನ್ಯೂ ಸಿಲ್ಕ್ ರೋಡ್ ಯೋಜನೆ ಹಾಗೂ ದಕ್ಷಿಣ ಏಷ್ಯಾ ಹಾಗೂ ಆಗ್ನೇಯ ಏಷ್ಯಾ ನಡುವಿನ ಇಂಡೋ-ಫೆಸಿಫಿಕ್ ಇಕೋನೊಮಿಕ್ ಕಾರಿಡಾರ್ ಯೋಜನೆಗೆ ಡೊನಾಲ್ಡ್ ಟ್ರಂಪ್ ಸರ್ಕಾರ ಮರು ಜೀವ ನೀಡಿದೆ.
ಟ್ರಂಪ್ ಆಡಳಿತದ ಮೊದಲ ವಾರ್ಷಿಕ ಬಜೆಟ್ ನಲ್ಲಿ ಈ ಎರಡು ಯೋಜನೆಗಳ ಬಗ್ಗೆ ಸಕ್ಷಿಪ್ತ ಮಾಹಿತಿ ಇದ್ದು, ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ನ್ಯೂ ಸಿಲ್ಕ್ ರೋಡ್ ಯೋಜನೆಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತಿದೆ.
ಅಫ್ಘಾನಿಸ್ತಾನ ಮತ್ತು ನೆರೆಯ ರಾಷ್ಟ್ರಗಳಿಗೆ ಸಂಬಂಧಿಸಿದ ನ್ಯೂ ಸಿಲ್ಕ್ ರೋಡ್ ಹಾಗೂ ದಕ್ಷಿಣ ಏಷ್ಯಾ ಹಾಗೂ ಆಗ್ನೇಯ ಏಷ್ಯಾ ನಡುವಿನ ಇಂಡೋ-ಫೆಸಿಫಿಕ್ ಇಕೋನೊಮಿಕ್ ಕಾರಿಡಾರ್ ಯೋಜನೆಗಳಿಗೆ ಬಜೆಟ್ ಒದಗಿಸಲಾಗಿದೆ ಎಂದು ಅಮೆರಿಕ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com