ವೀಸಾ ಆಕಾಂಕ್ಷಿಗಳ ಸಾಮಾಜಿಕ ಜಾಲತಾಣಗಳ ತಪಾಸಣೆ, ಕಠಿಣ ಪರಿಶೀಲನೆಗೆ ಟ್ರಂಪ್ ಆಡಳಿತದ ಅನುಮೋದನೆ

ಅಮೆರಿಕಾ ವೀಸಾ ಪಡೆಯುವ ಅರ್ಜಿದಾರರ ಕುರಿತ ಮಾಹಿತಿಯನ್ನು ಕಠಿಣವಾಗಿ ಪರಿಶೀಲನೆ ನಡೆಸುವುದಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಅನುಮೋದನೆ ನೀಡಿದೆ.
ಅಮೆರಿಕ
ಅಮೆರಿಕ
ವಾಷಿಂಗ್ ಟನ್: ಅಮೆರಿಕಾ ವೀಸಾ ಪಡೆಯುವ ಅರ್ಜಿದಾರರ ಕುರಿತ ಮಾಹಿತಿಯನ್ನು ಕಠಿಣವಾಗಿ ಪರಿಶೀಲನೆ ನಡೆಸುವುದು ಹಾಗೂ ಅವರಿಗೆ ಸಂಬಂಧಿಸಿದ ಸಾಮಾಜಿಕ ಜಾಲತಾಣಗಳ ತಪಾಸಣೆ ಮಾಡುವುದಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಅನುಮೋದನೆ ನೀಡಿದೆ. 
ವೀಸಾ ಅರ್ಜಿದಾರರ ಮಾಹಿತಿಯ ಪರಿಶೀಲನೆ ಪ್ರಕ್ರಿಯೆಯನ್ನು ಮತ್ತಷ್ಟು ಕಠಿಣಗೊಳಿಸಿರುವ ಡೊನಾಲ್ಡ್ ಟ್ರಂಪ್ ಆಡಳಿತ, ಅರ್ಜಿದಾರರು ಬಳಕೆ ಮಾಡುತ್ತಿರುವ ಸಮಾಜಿಕ ಜಾಲತಾಣದ 5 ವರ್ಷಗಳ ಹಿಂದಿನ ಮಾಹಿತಿ ಹಾಗೂ 15 ವರ್ಷಗಳ ಹಿನ್ನೆಲೆಯನ್ನು ಪರಿಶೀಲನೆ ನಡೆಸುವುದಕ್ಕೂ ಅನುಮತಿ ನೀಡಿದೆ. 
ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕಾ ಗುಪ್ತಚರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವೀಸಾ ಪರಿಶೀಲನೆ ಪ್ರಕ್ರಿಯೆಯನ್ನು ಮತ್ತಷ್ಟು ಕಠಿಣಗೊಳಿಸುವುದಕ್ಕೆ ಮೇ.23 ರಂದೇ ಡೊನಾಲ್ಡ್ ಟ್ರಂಪ್ ಆಡಳಿತ ಅನುಮೋದನೆ ನೀಡಿದೆ. ಡೊನಾಲ್ಡ್ ಟ್ರಂಪ್ ಆಡಳಿತ ಕಠಿಣ ವೀಸಾ ಪರಿಶೀಲನೆ ಪ್ರಕ್ರಿಯೆಗೆ ಅನುಮೋದನೆ ನೀಡಿರುವುದರ ಬಗ್ಗೆ ಆಕ್ಷೇಪ ವ್ಯಕ್ತವಾಗಿದ್ದು, ವಿದೇಶಿ ವಿದ್ಯಾರ್ಥಿಗಳು ಹಾಗೂ ವಿಜ್ಞಾನಿಗಳು ಅಮೆರಿಕಾಗೆ ಬರುವುದು ಕಷ್ಟವಾಗಲಿದೆ ಎಂಬ ಅಭಿಪ್ರಾಯ ಶಿಕ್ಷಣ ಅಧಿಕಾರಿಗಳಿಂದ ವ್ಯಕ್ತವಾಗಿದೆ. 
ಆದರೆ ಅಮೆರಿಕಾದ ಅಧಿಕಾರಿಗಳು ಮಾತ್ರ ರಾಷ್ಟ್ರೀಯ ಭದ್ರತೆಯ ಕಾರಣವನ್ನು ನೀಡಿ ಈ ಪ್ರಕ್ರಿಯೆಯನ್ನು ಜಾರಿಗೊಳಿಸಿದ್ದಾರೆ. ಒಂದು ವೇಳೆ ವೀಸಾಗೆ ಅರ್ಜಿ ಸಲ್ಲಿಸಿದವರು ಉತ್ತರಿಸಲು ತಡವಾದರೆ ವೀಸಾ ನೀಡುವ ಪ್ರಕ್ರಿಯೆಯೂ ಸಹ ತಡವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮುಸ್ಲಿಂ ರಾಷ್ಟ್ರಗಳ ಪ್ರಜೆಗಳನ್ನು ಅಮೆರಿಕಾ ಪ್ರವೇಶಿಸದಂತೆ ಡೊನಾಲ್ಡ್ ಟ್ರಂಪ್ ನಿರ್ಬಂಧ ವಿಧಿಸಿದ್ದರು. ಆದರೆ ಕೋರ್ಟ್ ತಡೆ ನೀಡಿದ ಹಿನ್ನೆಲೆಯಲ್ಲಿ ಅರ್ಜಿದಾರರ ಮಾಹಿತಿಯ ಪರಿಶೀಲನೆ ಪ್ರಕ್ರಿಯೆಯನ್ನು ಮತ್ತಷ್ಟು ಕಠಿಣಗೊಳಿಸುವ ಆದೇಶ ಹೊರಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com