31ನೇ ಅಷಿಯಾನ್ ಶೃಂಗಸಭೆ: ಜಾಗತಿಕ ವೇದಿಕೆಯಲ್ಲಿ ವಿಶ್ವ ಸಮುದಾಯದ ಗಮನ ಸೆಳೆದ 'ರಾಮಾಯಣ' ನೃತ್ಯ ರೂಪಕ

ಫಿಲಿಪ್ಪೈನ್ಸ್ ಮನಿಲಾದಲ್ಲಿ ಆರಂಭಗೊಂಡಿರುವ 31ನೇ ಅಷಿಯಾನ್ ಶೃಂಗಸಭೆಯಲ್ಲಿ ಭಾರತ ಪುರಾಣ ಇತಿಹಾಸ ಕಥೆ ರಾಮಾಯಣ ಅನಾವರಣಗೊಂಡಿತು. ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ನೃತ್ಯಗಾರರು ರಾಮಾಯಣ ನೃತ್ಯ ರೂಪಕವನ್ನು ಪ್ರದರ್ಶನ ಮಾಡುವ ಮೂಲಕ ವಿಶ್ವ ಸಮುದಾಯದ ಗಮನ ಸೆಳೆದರು.
31ನೇ ಅಷಿಯಾನ್ ಶೃಂಗಸಭೆಯಲ್ಲಿ  'ರಾಮಾಯಣ' ನೃತ್ಯ ರೂಪಕ
31ನೇ ಅಷಿಯಾನ್ ಶೃಂಗಸಭೆಯಲ್ಲಿ 'ರಾಮಾಯಣ' ನೃತ್ಯ ರೂಪಕ
ಮನಿಲಾ: ಫಿಲಿಪ್ಪೈನ್ಸ್ ಮನಿಲಾದಲ್ಲಿ ಆರಂಭಗೊಂಡಿರುವ 31ನೇ ಅಷಿಯಾನ್ ಶೃಂಗಸಭೆಯಲ್ಲಿ ಭಾರತ ಪುರಾಣ ಇತಿಹಾಸ ಕಥೆ ರಾಮಾಯಣ ಅನಾವರಣಗೊಂಡಿತು. ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ  ನೃತ್ಯಗಾರರು ರಾಮಾಯಣ ನೃತ್ಯ ರೂಪಕವನ್ನು ಪ್ರದರ್ಶನ ಮಾಡುವ ಮೂಲಕ ವಿಶ್ವ ಸಮುದಾಯದ ಗಮನ ಸೆಳೆದರು.
ವಿಶೇಷವೆಂದರೆ ಭಾರತೀಯ ಐತಿಹಾಸಿಕ ಕಥೆಯ ನೃತ್ಯ ರೂಪಕಕ್ಕೆ ವಿದೇಶಿಗರೂ ಸಾಥ್ ನೀಡಿದ್ದರು. ಸುಮಾರು 60ಕ್ಕೂ ಹೆಚ್ಚು ದೇಶ ವಿದೇಶ ನೃತ್ಯಗಾರರು ರಾಮಾಯಣ ನೃತ್ಯ ರೂಪಕದಲ್ಲಿ ಪಾಲ್ಗೊಂಡಿದ್ದರು.
ಇನ್ನು ಸತತ 36 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಮನಿಲಾಗೆ ಭೇಟಿ ನೀಡಿದ್ದು, ಈ ಹಿಂದೆ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರು ಮನಿಲಾಗೆ ಭೇಟಿ ನೀಡಿದ್ದರು. ಅವರ ಬಳಿಕ ಫಿಲಿಪ್ಪೈನ್ಸ್ ಗೆ ಪ್ರಧಾನಿ  ಮೋದಿ ಭೇಟಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com