ಯೋಗ
ಯೋಗ

ಯೋಗ ಕಲಿಕೆಗೆ ಮತ್ತು ಬೋಧನೆಗೆ ಮಾನ್ಯತೆ ನೀಡಿದ ಸೌದಿ ಅರೇಬಿಯಾ

ಯೋಗ ಕಲಿಕೆ ಮತ್ತು ಬೋಧನೆಗೆ ಸೌದಿ ಅರೇಬಿಯಾದ ಮಾನ್ಯತೆ ನೀಡಿದ್ದು ಇನ್ನುಂದೆ ಮಹಿಳೆಯರು ಅಥವಾ ಪುರುಷರು ಯೋಗವನ್ನು ಅಭ್ಯಾಸ ಮಾಡಬಹುದಾಗಿದೆ.
ಯೋಗ ಕಲಿಕೆ ಮತ್ತು ಬೋಧನೆಗೆ ಸೌದಿ ಅರೇಬಿಯಾದ ಮಾನ್ಯತೆ ನೀಡಿದ್ದು ಇನ್ನುಂದೆ ಮಹಿಳೆಯರು ಅಥವಾ ಪುರುಷರು ಯೋಗವನ್ನು ಅಭ್ಯಾಸ ಮಾಡಬಹುದಾಗಿದೆ. 
ಕ್ರೀಡಾ ಚಟುವಟಿಕೆಗಳ ಅಡಿಯಲ್ಲಿ ಸೌದಿ ಸಚಿವಾಲಯವು ವ್ಯಾಪಾರ ಮತ್ತು ಉದ್ಯಮವನ್ನಾಗಿ ಯೋಗದ ಬೋಧನೆಗೆ ಅಧಿಕೃತವಾಗಿ ಅನುಮೋದಿಸಿದ್ದು ಈ ಮೂಲಕ ಯೋಗಕ್ಕೆ ಮಾನ್ಯತೆ ನೀಡಿದ ಮೊದಲ ಮುಸ್ಲಿಂ ರಾಷ್ಟ್ರವಾಗಿದೆ. 
ಯೋಗವನ್ನು ಅಭ್ಯಾಸ ಮಾಡಲು ಅಥವಾ ಪ್ರಚಾರ ಮಾಡಲು ಬಯಸುವವರು ಪರವಾನಗಿ ಪಡೆಯಬಹುದಾಗಿದೆ. ಇನ್ನು ಅರಬ್ ಮಹಿಳೆ ನೌಫ್ ಮಾರ್ವಾಯಿ ಮೊದಲ ಪ್ರಮಾಣೀಕೃತ ಸೌದಿ ಯೋಗ ಬೋಧಕಿಯಾಗಿದ್ದಾರೆ. ಮಾರ್ವಾಯಿ ಅವರು ಯೋಗ ಮತ್ತು ಧರ್ಮ ನಡುವೆ ಪರಸ್ಪರ ಸಂಘರ್ಷ ಇಲ್ಲ ಎಂದನ್ನು ನಂಬುತ್ತಾರೆ. 
ಒಂದೆಡೆ ಮುಸ್ಲಿಂ ರಾಷ್ಟ್ರ ಸೌದಿ ಅರೇಬಿಯಾ ಯೋಗಕ್ಕೆ ಮಾನ್ಯತೆ ನೀಡಿದ್ದರೆ ಇತ್ತ ಭಾರತದಲ್ಲೇ ಮುಸ್ಲಿಂರು ಯೋಗಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜಾರ್ಖಂಡ್ ನ ಮುಸ್ಲಿಂ ಯೋಗ ಶಿಕ್ಷಕಿ ರಫೀಯಾ ನಾಜ್ ಗೆ ಯೋಗ ಕಲಿಸಿದ್ದಕ್ಕಾಗಿ ಅವರಿಗೆ ಕೊಲೆ ಬೆದರಿಕೆ ಕರೆಗಳು ಬರುತ್ತಿವೆ. ಅಲ್ಲದೆ ಇತ್ತೀಚೆಗಷ್ಟೇ ಆಕೆಯ ವಿರುದ್ಧ ಫತ್ವಾ ಹೊರಡಿಸಲಾಗಿದ್ದು, ಇದು ಸಾಲದು ಎಂಬಂತೆ ಆಕೆಯ ಮನೆ ಮೇಲೆ ಕಲ್ಲು ತೂರಾಟ ಸಹ ನಡೆದಿತ್ತು.

Related Stories

No stories found.

Advertisement

X
Kannada Prabha
www.kannadaprabha.com