ಇಂಗ್ಲೆಂಡ್ ನಲ್ಲಿ ಕರಿ ಚೆಫ್ ಗಳ ಕೊರತೆ: ವಿಂಡಾಲೂ ವೀಸಾ ಜಾರಿಗೆ ಸಂಸದ ಒತ್ತಾಯ

ದೇಶದ ರೆಸ್ಟೊರೆಂಟ್ ಗಳಲ್ಲಿ ಕರಿ(ಖಾದ್ಯ) ತಯಾರಿಕೆಗೆ ಬಾಣಸಿಗರ ತೀವ್ರ ಕೊರತೆಯನ್ನು ನೀಗಿಸಲು ತಾತ್ಕಾಲಿಕ ವಿಂಡಾಲೂ ವೀಸಾ ಜಾರಿಗೆ ತರಬೇಕೆಂದು ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಲಂಡನ್: ದೇಶದ ರೆಸ್ಟೊರೆಂಟ್ ಗಳಲ್ಲಿ   ಕರಿ(ಖಾದ್ಯ) ತಯಾರಿಕೆಗೆ ಬಾಣಸಿಗರ ತೀವ್ರ ಕೊರತೆಯನ್ನು ನೀಗಿಸಲು ತಾತ್ಕಾಲಿಕ ವಿಂಡಾಲೂ ವೀಸಾ ಜಾರಿಗೆ ತರಬೇಕೆಂದು ಸರ್ಕಾರಕ್ಕೆ  ಬ್ರಿಟನ್ ನ ಲಿಬರಲ್ ಡೆಮೊಕ್ರೆಟ್  ಪಾರ್ಟಿ ಮುಖಂಡ  ಸರ್ ವಿನ್ಸ್ ಕೇಬಲ್ ಒತ್ತಾಯಿಸಿದ್ದಾರೆ.

ತಾತ್ಕಾಲಿಕ ವೀಸಾ ಒಂದು ವರ್ಷದ ಅವಧಿಯದ್ದಾಗಿದ್ದು, ಇಂಗ್ಲೆಂಡಿನ ರೆಸ್ಟೊರೆಂಟ್ ಗಳಲ್ಲಿ ಬಾಣಸಿಗರ ಕೊರತೆಯನ್ನು ನೀಗಿಸಲು ಭಾರತದಿಂದ ಚೆಫ್ ಗಳನ್ನು ಕರೆಸಿಕೊಳ್ಳಲು ಸಹಾಯಕವಾಗುತ್ತದೆ ಎಂದು ಕೆಬಲ್ ಹೇಳಿದರು.

ರೆಸ್ಟೊರೆಂಟ್ ಗಳಲ್ಲಿ ಸಿಬ್ಬಂದಿ ಕೊರತೆಯಿದ್ದು ನೀಗಿಸಿ ದೇಶದ ರುಚಿ ಖಾದ್ಯಗಳ ಗುಣಮಟ್ಟ ಮತ್ತು ಪೂರೈಕೆಯನ್ನು ಕಾಪಾಡಿಕೊಳ್ಳಲು ಅಗತ್ಯ ತುರ್ತು ಕ್ರಮ ಕೈಗೊಳ್ಳಬೇಕಿದೆ ಎಂದು ಟ್ವಿಕನ್ಹ್ಯಾಮ್ ಕ್ಷೇತ್ರದ ಲಿಬರಲ್ ಡೆಮೊಕ್ರಟಿಕ್ ಸಂಸದ ವಿನ್ಸೆ ಕೆಬಲ್ ನಿನ್ನೆ ರಾತ್ರಿ ಲಂಡನ್ ನಲ್ಲಿ ಬ್ರಿಟಿಷ್ ಖಾದ್ಯ ಪ್ರಶಸ್ತಿ ಸಮಾರಂಭದಲ್ಲಿ ಹೇಳಿದರು.

ಇಂಗ್ಲೆಂಡಿನಲ್ಲಿ ಸುಮಾರು 3.6-ಬಿಲಿಯನ್ ಪೌಂಡ್ ಕರಿ ಉದ್ಯಮ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮೂಲವನ್ನು ಹೊಂದಿರುವ ರೆಸ್ಟೊರೆಂಟ್ ಗಳಾಗಿವೆ.ಆದರೆ ಇಲ್ಲಿನ ವೀಸಾದ ಬಿಗಿ ನಿಯಮದಿಂದಾಗಿ ರೆಸ್ಟೊರೆಂಟ್ ಗಳು ಮುಚ್ಚುವ ಭೀತಿಯನ್ನು ಎದುರಿಸುತ್ತಿವೆ.  ಭಾರತೀಯ ಉಪ ಖಂಡಗಳಿಂದ  ಬರುವ ಬಾಣಸಿಗರ ಪರವಾಗಿ ವೀಸಾ ನಿಯಮಗಳಿಲ್ಲದಿರುವುದರಿಂದ ಸಿಬ್ಬಂದಿ ಕೊರತೆಯುಂಟಾಗಿದೆ ಎಂದು  ಅವರು ಹೇಳಿದರು.

ಬ್ರಿಟಿಷ್ ಖಾದ್ಯ ಪ್ರಶಸ್ತಿ ವಿಶ್ಲೇಷಣೆ ಪ್ರಕಾರ, ಮುಂದಿನ 10 ವರ್ಷಗಳೊಳಗೆ ದೇಶದಲ್ಲಿರುವ ಸುಮಾರು 6,000 ಕರಿ ರೆಸ್ಟೊರೆಂಟ್ ಗಳು ಶಾಶ್ವತವಾಗಿ ಮುಚ್ಚುವ ಭೀತಿ  ಎದುರಿಸುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com