ಸಂಗ್ರಹ ಚಿತ್ರ
ವಿದೇಶ
ನಾನು ಹಫೀಜ್ ಪರ ಇದ್ದೇನೆ, ನಾನು ಲಷ್ಕರ್, ಜೆಯುಡಿ ಸಂಘಟನೆಗಳ 'ಅತಿದೊಡ್ಡ ಬೆಂಬಲಿಗ': ಮುಷರ್ರಫ್
ಉಗ್ರರ ಪಟ್ಟಿಯಿಂದ ತನ್ನ ಹೆಸರು ಕೈ ಬಿಡಬೇಕು ಎಂಬ ಜೆಯುಡಿ ಮುಖ್ಯಸ್ಥ ಹಫೀಜ್ ಸಯ್ಯೀದ್ ಅವರ ಮಾತಿಗೆ ನನ್ನ ಬೆಂಬಲವಿದೆ..ನಾನು ಲಷ್ಕರ್, ಜೆಯುಡಿ ಸಂಘಟನೆಗಳ "ಅತಿದೊಡ್ಡ ಬೆಂಬಲಿಗ" ಎಂದು ಪಾಕಿಸ್ತಾನ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ಹೇಳಿದ್ದಾರೆ.
ಇಸ್ಲಾಮಾಬಾದ್: ಉಗ್ರರ ಪಟ್ಟಿಯಿಂದ ತನ್ನ ಹೆಸರು ಕೈ ಬಿಡಬೇಕು ಎಂಬ ಜೆಯುಡಿ ಮುಖ್ಯಸ್ಥ ಹಫೀಜ್ ಸಯ್ಯೀದ್ ಅವರ ಮಾತಿಗೆ ನನ್ನ ಬೆಂಬಲವಿದೆ..ನಾನು ಲಷ್ಕರ್, ಜೆಯುಡಿ ಸಂಘಟನೆಗಳ "ಅತಿದೊಡ್ಡ ಬೆಂಬಲಿಗ" ಎಂದು ಪಾಕಿಸ್ತಾನ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ಹೇಳಿದ್ದಾರೆ.
ನಿನ್ನೆಯಷ್ಟೇ ಜಮಾತ್ ಉದ್ ದವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯ್ಯೀದ್ ತನ್ನ ಹೆಸರನ್ನು ವಿಶ್ವಸಂಸ್ಥೆಯ ಉಗ್ರ ಪಟ್ಟಿಯಿಂದ ಕೈ ಬಿಡಬೇಕು ಎಂದು ಮನವಿ ಮಾಡಿದ್ದ. ಈ ಬೆಳವಣಿಗೆ ಬೆನ್ನಲ್ಲೇ ಉಗ್ರ ಹಫೀಜ್ ಸಯ್ಯೀದ್ ಗೆ ಪಾಕಿಸ್ತಾನ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ತಮ್ಮ ಬೆಂಬಲ ಸೂಚಿಸಿದ್ದು, ಹಫೀಜ್ ಸಯ್ಯೀದ್ ಹೇಳಿಕೆಗೆ ನನ್ನ ಬೆಂಬಲವಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಎಆರ್‌ಐ ನ್ಯೂಸ್ ಎಂಬ ವಾಹಿನಿಗೆ ಸಂದರ್ಶನ ನೀಡಿರುವ ಫರ್ವೇಜ್ ಮುಷರಫ್, "ಕಾಶ್ಮೀರದಲ್ಲಿ ಜಿಹಾದ್ ಮಾಡುವ ಜೆಯುಡಿ , ಎಲ್‌ಇಟಿಯನ್ನು ನಾನ್ನು ಇಷ್ಟಪಡುತ್ತೇನೆ, ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಹಲವು ಬಾರಿ ನಾನು ಜೆಯುಡಿ ಸಂಸ್ಥಾಪಕ ಹಫೀಜ್ ಸಯ್ಯೀದ್ ನನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಹಫೀಜ್ ಸಯ್ಯೀದ್ ವಿಷಯ ಭಾರತದಲ್ಲಿ ಮಾತ್ರ ಒಂದು ಸಮಸ್ಯೆ..ಅಮೆರಿಕದಲ್ಲಿ ಅದು ಸಮಸ್ಯೆಯೇ ಅಲ್ಲ' ಎಂದು ಹೇಳಿದ್ದಾರೆ.
ಇದೇ ವೇಳೆ 168 ಜನರ ಸಾವಿಗೆ ಕಾರಣವಾಗಿದ್ದ 26/11 ರ ಮುಂಬಯಿ ದಾಳಿಯಲ್ಲಿ ಹಫೀಜ್ ಸಯ್ಯೀದ್ ಪಾತ್ರವನ್ನು ಅಲ್ಲಗಳೆದ ಮುಷರಫ್ ಹಫೀಜ್ ನನ್ನು ಉಗ್ರ ಎಂದು ಕರೆಯುವುದು ತಪ್ಪು ಎಂದು ಹೇಳಿದ್ದಾರೆ. ಅಂತೆಯೇ ಭಾರತೀಯ ಸೈನ್ಯದ ದಮನವನ್ನು ಪ್ರಧಾನ ಗುರಿಯಾಗಿರಿಸಿಕೊಂಡಿರುವ ಲಷ್ಕರ್ ಸಂಘಟನೆಯ ಪರ ನಾನಿದ್ದೇನೆ. ಲಷ್ಕರ್ ನಾಯಕ ಹಫೀಜ್ ಸಯ್ಯೀದ್ ನನ್ನು ತಾನು ಭೇಟಿಯಾಗಿರುವುದಾಗಿ ಮುಷರಫ್ ಹೇಳಿಕೊಂಡಿದ್ದಾರೆ.\

