ಅಮೆರಿಕವನ್ನೂ ತಲುಪಬಲ್ಲ ಖಂಡಾಂತರ ಕ್ಷಿಪಣಿ ಪರೀಕ್ಷೆ ಮಾಡಿದ ಉತ್ತರ ಕೊರಿಯಾ!

ಉತ್ತರ ಕೊರಿಯಾ ಮತ್ತು ಅಮೆರಿಕ ನಡುವಿನ ಶೀಥಲ ಸಮರ ಮುಂದುವರೆದಿರುವಂತೆಯೇ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಉತ್ತರ ಕೊರಿಯಾ ಅಮೆರಿಕವನ್ನೂ ತಲುಪಬಲ್ಲ ಪ್ರಬಲ ಕ್ಷಿಪಣಿಯೊಂದನ್ನು ಯಶಸ್ವಿಯಾಗಿ ಉಡಾಯಿಸುವ ಮೂಲಕ ಅಮೆರಿಕವನ್ನು ಮತ್ತಷ್ಟು ಪ್ರಚೋದಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪ್ಯೋಗ್ಯಾಂಗ್: ಉತ್ತರ ಕೊರಿಯಾ ಮತ್ತು ಅಮೆರಿಕ ನಡುವಿನ ಶೀಥಲ ಸಮರ ಮುಂದುವರೆದಿರುವಂತೆಯೇ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಉತ್ತರ ಕೊರಿಯಾ ಅಮೆರಿಕವನ್ನೂ ತಲುಪಬಲ್ಲ ಪ್ರಬಲ ಕ್ಷಿಪಣಿಯೊಂದನ್ನು  ಯಶಸ್ವಿಯಾಗಿ ಉಡಾಯಿಸುವ ಮೂಲಕ ಅಮೆರಿಕವನ್ನು ಮತ್ತಷ್ಟು ಪ್ರಚೋದಿಸಿದೆ.
ಮೂಲಗಳ ಪ್ರಕಾರ ಉತ್ತರ ಕೊರಿಯಾ ಮತ್ತೊಂದು ಪ್ರಬಲ ಖಂಡಾಂತರ ಕ್ಷಿಪಣಿಯನ್ನು ನಿನ್ನೆ ರಾತ್ರಿ ಉಡಾಯಿಸಿದ್ದು, ಇದು ಅಮೆರಿಕದ ವಾಷಿಂಗ್ಟನ್ ಡಿಸಿಯನ್ನೂ ಕೂಡ ತಲುಪಬಲ್ಲ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ.  ಜಪಾನ್ ಮತ್ತು ದಕ್ಷಿಣ ಕೊರಿಯಾ ಸೇನಾ ಮೂಲಗಳು ಕ್ಷಿಪಣಿ ಪರೀಕ್ಷೆ ನಡೆದಿರುವುದರ ಕುರಿತು ಮಾಹಿತಿ ನೀಡಿದ್ದು, ನಿನ್ನೆ ರಾತ್ರಿ ಉತ್ತರ ಕೊರಿಯಾ ಉಡಾಯಿಸಿದ್ದ ಕ್ಷಿಪಣಿ ಜಪಾನ್ ನ ವಿಶೇಷ ಆರ್ಥಿಕ ವಲಯದ ವ್ಯಾಪ್ತಿಯ  ಸಮುದ್ರದೊಳಗೆ ಬಿದ್ದಿದೆ ಎನ್ನಲಾಗಿದೆ. 
ಪ್ರಸ್ತುತ ಉತ್ತರ ಕೊರಿಯಾ ಪ್ರಯೋಗಿಸಿರುವ ಈ ಹ್ವಾಸಾಂಗ್-15 ಖಂಡಾಂತರ ಕ್ಷಿಪಣಿ ಆ ದೇಶದ ಬತ್ತಳಿಕೆಯಲ್ಲಿರುವ ಕ್ಷಿಪಣಿಗಳಲ್ಲೇ ಅತ್ಯಂತ ದೂರಗಾಮಿ ಪ್ರಬಲ ಕ್ಷಿಪಣಿ ಎಂದು ಹೇಳಲಾಗುತ್ತಿದೆ. ಅಲ್ಲದೆ ಅಣ್ವಸ್ತ್ರ ಸಿಡಿತಲೆಯನ್ನು  ಸಾಗಿಸಬಲ್ಲ ಸಾಮರ್ಥ್ಯ ಕ್ಷಿಪಣಿಗಿದೆ ಎನ್ನಲಾಗಿದೆ. ಈ ಕ್ಷಿಪಣಿಯ ದೂರ ಸಾಮರ್ಥ್ಯ 13 ಸಾವಿರ ಕಿಲೋಮೀಟರ್‌ಗಳಷ್ಟಿರುವ ಸಾಧ್ಯತೆ ಇದ್ದು, ಇದು ಅಮೆರಿಕದ ಭೂಭಾಗಕ್ಕೂ ದಾಳಿ ಮಾಡಲು ಶಕ್ತವಾಗಿದೆ ಎಂದು ಕ್ಷಿಪಣಿ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಹೀಗಾಗಿ ಕ್ಷಿಪಣಿ ಪರೀಕ್ಷೆ ಮೂಲಕ ಉತ್ತರ ಕೊರಿಯಾ ಮತ್ತೆ ಅಮೆರಿಕವನ್ನು ಪ್ರಚೋದಿಸುವ ಕಾರ್ಯ ಮಾಡಿದ್ದು, ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com