ನ್ಯಾಯಾಧೀಶರ ಎದುರೇ ಬೋಸ್ನಿಯಾ ಮಾಜಿ ಸೇನಾಧಿಕಾರಿ ವಿಷ ಸೇವಿಸಿ ಆತ್ಮಹತ್ಯೆ!

ಯುದ್ಧಾಪರಾಧ ಸಂಬಂಧ ವಿಧಿಸಲಾಗಿದ್ದ 20 ವರ್ಷ ಜೈಲು ಶಿಕ್ಷೆ ಅಂತಾರಾಷ್ಟ್ರೀಯ ನ್ಯಾಯಾಲಯ ಕಾಯಂಗೊಳಿಸಿದ ಹಿನ್ನಲೆಯಲ್ಲಿ ಆಘಾತಕ್ಕೊಳಗಾದ ಬೋಸ್ನಿಯಾ ಮಾಜಿ ಸೇನಾಧಿಕಾರಿಯೊಬ್ಬರು ನ್ಯಾಯಾಧೀಶರ ಎದುರೇ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಸೇನಾಧಿಕಾರಿ
ಆತ್ಮಹತ್ಯೆಗೆ ಶರಣಾದ ಸೇನಾಧಿಕಾರಿ
ಸರಾಜೆವೊ: ಯುದ್ಧಾಪರಾಧ ಸಂಬಂಧ ವಿಧಿಸಲಾಗಿದ್ದ 20 ವರ್ಷ ಜೈಲು ಶಿಕ್ಷೆ ಅಂತಾರಾಷ್ಟ್ರೀಯ ನ್ಯಾಯಾಲಯ ಕಾಯಂಗೊಳಿಸಿದ ಹಿನ್ನಲೆಯಲ್ಲಿ ಆಘಾತಕ್ಕೊಳಗಾದ ಬೋಸ್ನಿಯಾ ಮಾಜಿ ಸೇನಾಧಿಕಾರಿಯೊಬ್ಬರು ನ್ಯಾಯಾಧೀಶರ ಎದುರೇ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಬೋಸ್ನಿಯಾ ಮಾಜಿ ಸೇನಾಧಿಕಾರಿ ಸ್ಲೋಬೋದನ್ ಪ್ರಜಾಕ್ ಎಂಬುವವರೇ ನ್ಯಾಯಾಧೀಶರ ಎದುರು ಆತ್ಮಹತ್ಯೆಗೆ ಶರಣಾಗಿದ್ದು, ಸ್ಲೋಬೋದನ್ ಪ್ರಜಾಕ್ ವಿರುದ್ಧ 1992-1995ರ ಅವಧಿಯಲ್ಲಿ ಬೋಸ್ನಿಯಾ, ಹೇರ್ಜೆಕ್ ಮತ್ತು ಕ್ರೊವೇಷಿಯಾ ಮುಸ್ಲಿಮರನ್ನು ಸಾಮೂಹಿಕ ಹತ್ಯೆಗೈದ ಗಂಭೀರ ಆರೋಪವಿತ್ತು. 2013ರಲ್ಲಿ ಈ ಸಂಬಂಧ ಅಂತಿಮ ತೀರ್ಪು ನೀಡಿದ್ದ ಮಿಲಿಟರಿ ನ್ಯಾಯಾಲಯ ಸ್ಲೋಬೋದನ್ ಪ್ರಜಾಕ್ ಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. 
ಇದೇ ಪ್ರಕರಣ ಸಂಬಂಧ ಕಳೆದ ಬುಧವಾರ ಹೇಗ್ ನ ಅಂತಾರಾಷ್ಟ್ರೀಯ ಯುದ್ಧಪರಾಧ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ನ್ಯಾಯಾಧೀಶರು ಜೈಲು ಶಿಕ್ಷೆ ಕಾಯಂಗೊಳಿಸುತ್ತಿದ್ದಂತೆಯೇ ನಾನು ನಿರಪರಾಧಿ ಎಂದು ಭಾವುಕರಾದ ಸ್ಲೋಬೋದನ್ ಪ್ರಜಾಕ್ ಎಲ್ಲರ ಸಮ್ಮುಖದಲ್ಲೇ ವಿಷದ ಬಾಟಲಿ ತೆಗೆದು ಅದರಲ್ಲಿದ್ದ ವಿಷವನ್ನು ಸೇವಿಸಿದ್ದಾರೆ. ಸ್ಲೋಬೋದನ್ ಪ್ರಜಾಕ್ ಅವರ ಈ ನಡೆಯಿಂದ ವಿಚಲಿತರಾದಂತೆ ಕಂಡುಬಂದ ನ್ಯಾಯಾಧೀಶರು ತೀರ್ಪನ್ನು ಬರೆಯುದನ್ನು ಬದಿಗೊತ್ತಿ ಕೂಡಲೇ ವೈದ್ಯರನ್ನು ಮತ್ತು ಅಧಿಕಾರಿಗಳಿಗೆ ಬುಲಾವ್ ನೀಡಿ ಸ್ಲೋಬೋದನ್ ಪ್ರಜಾಕ್ ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ.
ಆಸ್ಪತ್ರೆಯಲ್ಲಿ ಸ್ಲೋಬೋದನ್ ಪ್ರಜಾಕ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com