ಅಮೆರಿಕಾ ಅಧ್ಯಕ್ಷ ಟ್ರಂಪ್ ಟ್ವಿಟರ್ ಅಕೌಂಟ್ ನಿಷ್ಕ್ರಿಯ: ಮಾಜಿ ಟ್ವಿಟರ್ ಉದ್ಯೋಗಿಯ ಕೃತ್ಯ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವೀಟ್ ಖಾತೆಯನ್ನು ಕೆಲ ಹೊತ್ತು ನಿಷ್ಕ್ರೀಯಗೊಳಿಸಿದ್ದು ಮಾಜಿ ಟ್ವೀಟರ್ ಉದ್ಯೋಗಿ ಬಥಿಯಾರ್ ಡ್ಯೂಸಾಕ್ ಎಂದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವೀಟ್ ಖಾತೆಯನ್ನು ಕೆಲ ಹೊತ್ತು ನಿಷ್ಕ್ರೀಯಗೊಳಿಸಿದ್ದು ಮಾಜಿ ಟ್ವೀಟರ್ ಉದ್ಯೋಗಿ ಬಥಿಯಾರ್ ಡ್ಯೂಸಾಕ್ ಎಂದು ಹೇಳಲಾಗಿದೆ. 
ನವೆಂಬರ್ 2ರಂದು ಡೊನಾಲ್ಡ್ ಟ್ರಂಪ್ ಅವರ ಟ್ವೀಟರ್ ಖಾತೆಗೆ ರಾತ್ರಿ 7 ಗಂಟೆ ಸುಮಾರಿಗೆ ಲಾಗಿನ್ ಆದವರಿಗೆ ಸಾರಿ ಈ ಪುಟ ಲಭ್ಯವಿಲ್ಲ ಎಂಬ ಸಂದೇಶ ಬಂದಿತ್ತು. ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿತ್ತು. ಆದರೆ ಪ್ರಕರಣ ಸಂಬಂಧ ಟ್ವೀಟರ್ ಉದ್ಯೋಗಿಯಾಗಿದ್ದ ಡ್ಯೂಸಾಕ್ ನನ್ನ ವಿಚಾರಣೆ ನಡೆಸಿದಾಗ ಆತನೇ ಪ್ರಮಾದ ವೆಸಗಿರುವುದಾಗಿ ಹೇಳಿದ್ದಾನೆ. 
ಇಂತಹ ಪ್ರಮಾದ ಮಾಡಿದ್ದು ನನ್ನ ತಪ್ಪು. ಇದರಿಂದ ಯಾರಿಗಾದರೂ ನೋವಾಗಿದ್ದರೆ ನಾನು ಖಂಡಿತ ಕ್ಷಮೆಯಾಚಿಸುತ್ತೇನೆ. ನಾನು ಉದ್ದೇಶಪೂರ್ವಕವಾಗಿ ಈ ತಪ್ಪನ್ನು ಮಾಡಿಲ್ಲ. ಹಲವು ವರ್ಷಗಳಿಂದ ನಾನು ಅಮೆರಿಕದಲ್ಲಿ ನೆಲೆಸಿದ್ದೇನೆ. ನಾನು ಆಯಾಸಗೊಂಡಿದ್ದೆ. ಇನ್ನು ಪ್ರತಿಯೊಬ್ಬರು ತಪ್ಪುಗಳನ್ನು ಮಾಡುತ್ತಾರೆ ಎಂದು ಹೇಳಿರುವುದಾಗಿ ವೆಬ್ ಸೈಟ್ ವೊಂದು ವರದಿ ಮಾಡಿದೆ. 
ನಾನು ಯಾವುದನ್ನು ಹ್ಯಾಕ್ ಮಾಡಿಲ್ಲ. ನಾನು ಯಾವ ಬದಲಾವಣೆ ಮಾಡುವ ಅಧಿಕಾರ ಹೊಂದಿಲ್ಲ. ನಾನು ಯಾವುದೇ ಅಪರಾಧ ಮಾಡಿಲ್ಲ. ಸಾಮಾನ್ಯ ಜೀವನವನ್ನು ನಡೆಸಬೇಕು ಎಂದು ನಾನು ಬಯಸುತ್ತಿದ್ದೇನೆ. ವರದಿಗಾರರು ನನ್ನನ್ನು ಹಿಂಬಾಲಿಸುತ್ತಿದ್ದಾರೆಂದು ನಾನು ನೂರಾರು ಸ್ನೇಹಿತರನ್ನು ಡಿಲೀಟ್ ಮಾಡಬೇಕಾಯಿತು ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com