ಪಿಎಂಎಲ್ ಎನ್ ಅಧ್ಯಕ್ಷರಾಗಿ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಅವಿರೋಧ ಆಯ್ಕೆ

ಪಾಕಿಸ್ತಾನದ ಆಡಳಿತಾರೂಢ ಪಿಎಂಎಲ್ ಎನ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ (ಸಂಗ್ರಹ ಚಿತ್ರ)
ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ (ಸಂಗ್ರಹ ಚಿತ್ರ)
ಇಸ್ಲಾಮಾಬಾದ್: ಪಾಕಿಸ್ತಾನದ ಆಡಳಿತಾರೂಢ ಪಿಎಂಎಲ್ ಎನ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿರುವಂತೆ ಇಂದು ಇಸ್ಲಾಮಾಬಾದಿನಲ್ಲಿ ನಡೆದ ಪಿಎಂಎಲ್ ಎನ್ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ನವಾಜ್ ಷರೀಫ್ ಅವರನ್ನು ಪಕ್ಷದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ  ಮಾಡಲಾಗಿದೆ. ಆ ಮೂಲಕ ನ್ಯಾಯಾಲಯದ ಶಿಕ್ಷೆಯ ಹೊರತಾಗಿಯೂ ನವಾಜ್ ಷರೀಫ್ ಅವರನ್ನು ಪಾಕಿಸ್ತಾನ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯವಾಗಿಡುವ ಕೆಲಸ ಮಾಡಲಾಗಿದೆ. ಈ ಹಿಂದೆ ಪನಾಮಾ ಹಗರಣಕ್ಕೆ  ಸಂಬಂಧಿಸಿದಂತೆ ಪಾಕಿಸ್ತಾನ ನ್ಯಾಯಾಲಯ ನವಾಜ್ ಷರೀಫ್ ತಪ್ಪಿತಸ್ಥರು ಎಂದು ತೀರ್ಪು ನೀಡಿತ್ತು. ಹೀಗಾಗಿ ನವಾಜ್ ಷರೀಫ್ ತಮ್ಮ ಪ್ರಧಾನಿ ಪಟ್ಟವನ್ನು ಕಳೆದುಕೊಂಡಿದ್ದರು.

ಪ್ರಸ್ತುತ ಲಂಡನ್ ನಲ್ಲಿರುವ ನವಾಜ್ ಷರೀಫ್ ಅಲ್ಲಿಂದಲೇ ತಮ್ಮ ರಾಜಕೀಯ ದಾಳಗಳನ್ನು ಹಾಕುತ್ತಿದ್ದು, ಇದಕ್ಕೆ ಮೊದಲ ಜಯ ಎಂಬಂತೆ ತಮ್ಮ ಪಿಎಂಎಲ್ ಎನ್ ಪಕ್ಷದ ಅಧಯಕ್ಷಗಾದಿಗೇರಿದ್ದಾರೆ. ಪಿಎಂಎಲ್ ಎನ್ ಪಕ್ಷದ  ನಿಯಮಗಳಂತೆ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ಯಾವುದೇ ವ್ಯಕ್ತಿಗೂ ಪಕ್ಷದಲ್ಲಿ ಉನ್ನತ ಮಟ್ಟದ ಹುದ್ದೆಗಳನ್ನು ನೀಡುವಂತಿಲ್ಲ. ಆದರೆ ನವಾಜ್ ಷರೀಫ್ ಗಾಗಿ ಈ ನಿಯಮವನ್ನೇ ತಿದ್ದುಪಡಿ ಮಾಡಲಾಗಿದ್ದು, ನ್ಯಾಯಾಲಯದ  ಶಿಕ್ಷೆಯ ಹೊರತಾಗಿಯೂ ನವಾಜ್ ಷರೀಫ್ ಪಕ್ಷದಲ್ಲಿ ಉನ್ನತ ಹುದ್ದೆಯಲ್ಲಿ ಮುಂದುವರೆಯುವಂತೆ ಮಾಡಲಾಗಿದೆ.

ಈ ಸಂಬಂಧ ನಿನ್ನೆ ನಡೆದ ಪಕ್ಷದ ಕೌನ್ಸಿಲ್ ಸಭೆಯಲ್ಲಿ ನಿಯಮಾವಳಿಗಳ ತಿದ್ದುಪಡಿಗೆ ಅನುಮೋದನೆ ನೀಡಲಾಗಿತ್ತು. ಆ ಮೂಲಕ ಮತ್ತೆ ನವಾಜ್ ಷರೀಫ್ ಪಾಕಿಸ್ತಾನದ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com